ತೆಲಂಗಾಣ ಸರ್ಕಾರ ನಟ ಅಕ್ಕಿನೇನಿ ನಾಗಾರ್ಜುನ ಕುಟುಂಬಕ್ಕೆ ಶಾಕ್ ನೀಡಿದೆ. ಅಕ್ಕಿನೇನಿ ನಾಗಾರ್ಜುನ್ ಗೆ ಸಂಬಂಧಿಸಿದ 10 ಎಕರೆಯಲ್ಲಿ ನಿರ್ಮಾಣವಾಗಿದ್ದ ಕನ್ವೆನ್ಶನ್ ಹಾಲ್ ಅನ್ನು ಕೆಡವಿದ್ದಾರೆ. ಈ ಕಟ್ಟಡದ ಮೇಲೆ ದೂರುಗಳಿವೆ. ಅನೇಕ ರೀತಿಯ ಕಾನೂನುಗಳನ್ನು ಉಲ್ಲಂಘಿಸಿರುವ ಆರೋಪವಿದೆ. ಈ ಹಿನ್ನೆಲೆ ತೆಲಂಗಾಣ ಸರ್ಕಾರ ಕಟ್ಟಡವನ್ನು ಉರುಳಿಸಿದೆ. ತಮ್ಮಿಡು ಕುಂಟಾ ಕೆರೆಯ ಬಳಿ ನಿರ್ಮಾಣವಾಗಿದ್ದ ಕನ್ವೆನ್ಷನ್ ಸೆಂಟರ್ ಇದಾಗಿತ್ತು.
ಅಕ್ಕಿನೇನಿ ನಾಗಾರ್ಜುನ್ ಕಟ್ಟಿದ ಹಾಲ್ ಹಲವು ಐಷರಾಮಿ ಕಾರ್ಯಕ್ರಮಗಳು ನಡೆಯುವುದಕ್ಕೆ ಸೂಕ್ಯವಾಗಿತ್ತು. ಆದರೆ ಈ ಸೆಂಟರ್ ಕಟ್ಟುವುದಕ್ಕೆ ಪರಿಸರಕ್ಕೆ ಸಂಬಂಧಿಸಿದ ನಿಯಮಗಳನ್ನೇ ಮುರಿದಿದ್ದರು. ಕಾರ್ಪೊರೇಟ್ ಮೀಟಿಂಗ್ ಗಳು ಸೇರಿದಂತೆ ದೊಡ್ಡ ದೊಡ್ಡವರ ಕಾರ್ಯಕ್ರಮಗಳು ನಡೆಯುತ್ತಿದ್ದವು. ಇದೀಗ ಕಟ್ಟಡ ನೆಲಸಮಗೊಂಡಿದ್ದು, ನಾಗಾರ್ಜುನ್ ಬೇಸರ ವ್ಯಕ್ತಪಡಿಸಿದ್ದಾರೆ.
ಎನ್ ಕನ್ವೆನ್ಷನ್ ಹಾಲ್ ಅನ್ನು ನೆಲಸಮಗೊಳಿಸಿದ್ದು ಅಕ್ಷರಶಃ ಕಾನೂನು ಬಾಹಿರ, ಕೋರ್ಟ್ನಿಂದ ಸ್ಟೇ ತಂದಿದ್ದ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ. ಒಂದೇ ಒಂದು ನೋಟಿಸ್ ಕೂಡ ನೀಡದೆ ಬೆಳ್ಳಂ ಬೆಳಗ್ಗೆ ಕನ್ವೆನ್ಷನ್ ಹಾಲ್ ಅನ್ನು ಧ್ವಂಸಗೊಳಿಸಲಾಗಿದೆ. ಒಂದೇ ಒಂದು ಇಂಚು ಜಾಗದಲ್ಲಿಯೂ ಅಕ್ರಮವಾಗಿ ಕಟ್ಟಡ ಕಟ್ಟಿಲ್ಲ. ಇದು ಅಕ್ಷರಶಃ ಕಾನೂನು ಬಾಹಿರ ನಡುವಳಿಕೆ ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇತ್ತಿಚೆಗಷ್ಟೇ ಅಕ್ಕಿನೇನಿ ಕುಟುಂಬದಲ್ಲಿ ಶುಭಕಾರ್ಯ ಕೂಡ ಜರುಗಿದೆ. ನಾಗಚೈತನ್ಯ ಮತ್ತೊಂದು ಹೊಸ ಬದುಕಿಗೆ ಹೆಜ್ಜೆ ಇಡುತ್ತಿದ್ದಾರೆ. ಸಮಂತಾ ಜೊತೆಗೆ ಡಿವೋರ್ಸ್ ಆದ ಮೇಲೆ ಶೋಭಿತಾ ಧೂಳಿಪಾಲ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಮದುವೆಯ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ. ಆದರೆ ಈ ಘಟನೆ ಮನೆಯವರೆಲ್ಲರಿಗೂ ಬೇಸರ ತರಿಸಿದೆ.