Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಎ1 ಆರೋಪಿ ಆಗ್ತಾರಾ..? ಪೊಲೀಸರ ಕೈ ಸೇರಿರುವ ಸಾಕ್ಷಿ ಏನು..?

---Advertisement---

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ, ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ಶೆಡ್ ಗೆ ಕರೆದು ಆತನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಕೊಲೆ ಕೇಸಲ್ಲಿ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಕೇಸಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದು, ದರ್ಶನ್ ಎ2 ಆರೋಪಿಯಾಗಿದ್ದಾರೆ. ಆದರೆ ದಿನೇ ದಿನೇ ಕೇಸ್ ಸ್ಟ್ರಾಂಗ್ ಆಗ್ತಾ ಇದ್ದು, ಈಗ ದರ್ಶನ್ ಅವರೇ ಎ1 ಆರೋಪಿಯಾಗುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅನುಕುಮಾರ್ ಕೂಡ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ದರ್ಶನ್ ಮಾತ್ರ ಇನ್ನು ಯಾವುದೇ ರೀತಿಯ ಅರ್ಜಿ ಸಲ್ಲಿಕೆ ಮಾಡಿಲ್ಲ. ಇದೀಗ ಪೊಲೀಸರಿಗೆ ಸಿಕ್ಕಂತ ಸಾಕ್ಷಿಗಳೆಲ್ಲಾ ದರ್ಶನ್ ಅವರ ಕಡಗೆ ಬೆರಳು ಮಾಡಿ ತೋರಿಸುತ್ತಿವೆ ಎನ್ನಲಾಗಿದೆ.

ಪೊಲೀಸರು ಆರೋಪಿಗಳ ಮೊಬೈಲ್ ಅನ್ನು ರಿಟ್ರೀವ್ ಮಾಡಿದ್ದು, ನಾಲ್ಕು ಫೋಟೋಗಳು ಸಿಕ್ಕಿವೆ ಎನ್ನಲಾಗಿದೆ. ಆ ಫೋಟೋಗಳಲ್ಲಿ , ರೇಣುಕಾಸ್ವಾಮಿ ಕೊನೆಯ ಬಾರಿಗೆ ಕೈಮುಗಿದು ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ದೇಹ ರಕ್ತಸಿಕ್ತವಾಗಿದ್ದರು, ಆರೋಪಿಗಳು ಆತನನ್ನು ಬಿಟ್ಟಿಲ್ಲ. ಹೀಗಾಗಿ ನಟ ದರ್ಶನ್ ಅವರನ್ನು ಎ2 ಆರೋಪಿ ಸ್ಥಾನದಿಂದ ಎ1 ಆರೋಪಿ ಸ್ಥಾನಕ್ಕೆ ಇಳಿಸಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ. ಈಗಾಗಲೇ ದರ್ಶನ್ ಅಂಡ್ ಗ್ಯಾಂಗ್ 70 ಕ್ಕೂ ಹೆಚ್ಚು ದಿನದಿಂದ ಜೈಲಿನಲ್ಲಿದ್ದಾರೆ. ಇನ್ನು ದರ್ಶನ್ ಗಾಗಿ ಪತ್ನಿ ವಿಜಯಲಕ್ಷ್ಮೀ ದೇವಸ್ಥಾನಗಳನ್ನು ಸುತ್ತುತ್ತಾ ಇದ್ದಾರೆ. ಹಾಗೇ ಅಭಿಮಾನಿಗಳು ಕೂಡ ದರ್ಶನ್ ಹೊರಗೆ ಬರಲಿ ಎಂದೇ ಬೇಡಿಕೊಳ್ಳುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment