ಇಂದು ಕಾಡಿನಿಂದ ನಾಡಿಗೆ ಬರಲಿವೆ ದಸರಾ ಆನೆಗಳು : ಹೇಗಿದೆ ಅರಮನೆಯಲ್ಲಿ ಸಿದ್ಧತೆ..?

1 Min Read

ಮೈಸೂರು: ದಸರಾ ಎಷ್ಟೊಂದು ಸುಂದರ ಹಾಡು ಕೇಳುವುದಕ್ಕೆಷ್ಟು ಚಂದವೋ ಮೈಸೂರು ದಸರಾವನ್ನು ನೋಡುವುದಕ್ಕೂ ಅಷ್ಟೇ ಸುಂದರ. ಇನ್ನು ಕೆಲವೇ ತಿಂಗಳಲ್ಲಿ ದಸರಾ ಸಮಾರಂಭ ನಡೆಯಲಿದೆ. ಹೀಗಾಗಿ ಈಗಿನಿಂದಲೇ ತಯಾರಿ ನಡೆಸಿದ್ದು, ಇಂದು ಮುಖ್ಯವಾಗಿ ದಸರಾ ಆನೆಗಳು ಕಾಡಿನಿಂದ ನಾಡಿಗೆ ಬಂದಿವೆ. ಹುಣಸೂರು ತಾಲೂಕಿನ ವೀರಹೊಸಹಳ್ಳಿಯಲ್ಲಿ ಗಜಪಯಣ ಸಮಾರಂಭ ಆರಂಭವಾಗಿದೆ.

ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಮೈಸೂರಿಗೆ ಬಂದಿದ್ದು, ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ಮಾಡಿದ್ದಾರೆ. ಆರತಿಯನ್ನು ಮಾಡಿ ಗಜಪಡೆಯನ್ನು ಸ್ವಾಗತಿಸಿದ್ದಾರೆ. ಜೊತೆಗೆ ಮಾವುತರಿಗೂ ಸನ್ಮಾನ ಕಾರ್ಯಕ್ರಮ ನಡೆದಿದೆ. ಇನ್ನು ಸ್ಥಳೀಯ ಕಲಾವಿದರಿಂದ, ಮಕ್ಕಳಿಂಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ ಆಗಮಿಸುತ್ತಿವೆ. ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ. ಹೆಚ್ಚುವರಿಯಾಗಿ 4 ಮೀಸಲು ಆನೆಗಳಿವೆ. ಹದಿನಾಲ್ಕು ಆನೆಗಳು ಮಾತ್ರ ಮೈಸೂರಿಗೆ ಆಗಮಿಸಲಿವೆ.

ಅಗತ್ಯ ಬಿದ್ದರೆ ಮಾತ್ರ ಮೀಸಲು ಆನೆಗಳನ್ನು ಕರೆತರಲು ತೀರ್ಮಾ‌ನಿಸಲಾಗಿದೆ. ಇನ್ನು ಆನೆಗಳು, ಮಾವುತರು ಹಾಗು ಕಾವಾಡಿಗಳ ವಾಸ್ತವ್ಯಕ್ಕಾಗಿ ಅರಮನೆ ಆವರಣದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ. ಈ ಬಾರಿಯ ದಸರಾ ಕಾರ್ಯಜ್ರಮ ಬಹಳ ವಿಜೃಂಭಣೆಯಿಂದ ನಡೆಯಲಿದೆ. ಈಗಾಗಲೇ ಸಕಲ ತಯಾರಿಯೂ ನಡೆಯುತ್ತಿದೆ. ನಾಡ ಅಧಿದೇವತೆಯನ್ನು ಚಿನ್ನದ ಅಂಬಾರಿಯಲ್ಲಿ ಕಣ್ತುಂಬಿಕೊಳ್ಳಲು ರಾಜ್ಯದ ಜನ ಕಾಯುತ್ತಿದ್ದಾರೆ. ಸಿಂಗಾರಗೊಂಡ ತಾಯಿ ಚಾಮುಂಡಿಯ ದರ್ಶನ ಭಾಗ್ಯ ಪಡೆಯುವುದೇ ಅದೃಷ್ಟ. ದಸರಾ ಸಮಯದಲ್ಲಿ ಹಲವು ರಾಜ್ಯಗಳಿಂದಾನೂ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಅರಮನೆ ಆವರಣದಲ್ಲಿ ದಸರಾ ತಯಾರಿ ಆರಂಭವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *