ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 20 : ಶ್ರಾವಣ ಮಾಸದ ಮಂಗಳವಾರದಂದು ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು.
ವೀಳೆದೆಲೆ, ಗುಲಾಬಿ, ಸೇವಂತಿಗೆ, ಮಲ್ಲಿಗೆ, ಕನಕಾಂಬರ ಹೂವುಗಳಿಂದ ಸಿಂಗರಿಸಲಾಗಿತ್ತು.
ಶ್ರಾವಣ ಮಾಸವಾಗಿರುವುದರಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಧಾವಿಸಿ ಕಣಿವೆಮಾರಮ್ಮನ ದರ್ಶನ ಪಡೆದು ಶ್ರದ್ದಾಭಕ್ತಿಯನ್ನು ಸಮರ್ಪಿಸಿದರು.
ಕೋಟೆ ರಸ್ತೆಯಲ್ಲಿರುವ ಉಚ್ಚಂಗಿಯಲ್ಲಮ್ಮನಿಗೆ ಶ್ರಾವಣ ಮಾಸದ ಮಂಗಳವಾರದಂದು ನಾನಾ ಬಗೆಯ ತರಕಾರಿಗಳಿಂದ ಅಲಂಕರಿಸಿ ಪೂಜಿಸಲಾಯಿತು.
ಕ್ಯಾರೆಟ್, ಬೆಂಡೆಕಾಯಿ, ಹಿರೇಕಾಯಿ, ಎಲೆಕೋಸು, ಹೂಕೋಸು, ಮೂಲಂಗಿ, ಈರುಳ್ಳಿ, ಸೌತೆಕಾಯಿ, ಸೀಮೆ ಬದನೆಕಾಯಿ, ದುಂಡು ಮೆಣಸಿನಕಾಯಿ, ಬೀನ್ಸ್, ಆಲುಗೆಡ್ಡೆ ಬೀಟ್‍ರೂಟ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಬಗೆಯ ತರಕಾರಿಗಳಿಂದ ಸಿಂಗರಿಸಲಾಗಿತ್ತು.
ಬೆಳಗಿನಿಂದ ಸಂಜೆಯತನಕ ಅಪಾರ ಭಕ್ತರು ಧಾವಿಸಿ ಉಚ್ಚಂಗಿಯಲ್ಲಮ್ಮನನ್ನು ಕಣ್ತುಂಬಿಕೊಂಡರು.