ಪೋಷಕರು ಮಕ್ಕಳ ಕ್ರೀಡೆಗೆ ಒತ್ತು ನೀಡಿ ಉತ್ತಮ ಕ್ರೀಡಾಪಟುಗಳಾಗಲು ಪ್ರೋತ್ಸಾಹಿಸಿ : ಫಾತ್ಯರಾಜನ್

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.18 :  ಶಾಲೆಯಲ್ಲಿ ಮಕ್ಕಳಿಗೆ ಅಂಕಗಳನ್ನು ಗಳಿಸುವಂತೇ ಹೇಳುವ ಪೋಷಕರು ಅದೇ ರೀತಿ ಉತ್ತಮವಾಗಿ ಆಟವನ್ನು ಸಹಾ ಅಡುವಂತೆ ಪ್ರೇರೇಪಿಸಬೇಕಿದೆ ಎಂದು ನ್ಯಾಯವಾದಿಗಳು ಕ್ರೀಡಾ ಪೋಷಕರು, ಪ್ರೇಮಿಗಳಾದ ಫಾತ್ಯರಾಜನ್ ತಿಳಿಸಿದ್ದಾರೆ.

ನಗರದ ಓನಕೆ ಒಬವ್ವ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಚಿತ್ರದುರ್ಗ ಪುಟ್‍ಬಾಲ್ ಕ್ಲಬ್‍ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸ್ವಾತಂತ್ರೋತ್ಸವ ಕಪ್ ಸ್ಫರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಪುಟ್ ಬಾಲ್ ಕ್ರೀಡೆ ಉತ್ತಮವಾದ ಆಟವಾಗಿದೆ ಇದನ್ನು ಆಡುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಮಕ್ಕಳು ಸಧೃಢವಾಗಲು ಸಹಾಯವಾಗಿದೆ.

ಇದನ್ನು ಮುಂದುವರೆಸಿದರೆ ಬದುಕಿನಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯವಿದೆ. ಕ್ರೀಡೆಗಳನ್ನು ಕಲಿಯುವ ಮಕ್ಕಳಿಗೆ ಉತ್ತಮವಾದ ಕೋಚ್‍ಗಳ ಆಗತ್ಯವಿದೆ. ಉತ್ತಮವಾದ ಕ್ರೀಡಾಪಟುವಿಗೆ ಸರಿಯಾದ ಕೋಚ್ ದೊರೆತರೆ ಅ ಕ್ರೀಡಾಪಟು ರಾಷ್ಟ್ರ ಮಟ್ಟಕ್ಕೆ ಬೆಳೆಯುತ್ತಾನೆ ಕ್ರೀಡೆಯ ಬಗ್ಗೆ ಮಕ್ಕಳಲ್ಲಿ ಅಸಕ್ತಿಯನ್ನು ಮೂಡಿಸುವಂತ ವಾತಾವರಣವನ್ನು ಪೋಷಕರು ಮನೆಯಲ್ಲಿ ಶಾಲೆಯಲ್ಲಿ ಶಿಕ್ಷಕರು ನಿರ್ಮಾಣ ಮಾಡಬೇಕಿದೆ ಎಂದರು.

ಪೋಷಕರು ತಮ್ಮ ಮಕ್ಕಳು ಉತ್ತಮವಾದ ಅಂಕಗಳನ್ನು ಪಡೆಯಲಿ ಎಂದು ಆಶಿಸುವ ಹಾಗೇ ಉತ್ತಮವಾದ ಕ್ರೀಡಾ ಪಟುವಾಗಲಿ ಎಂದು ಪ್ರೋತ್ಸಾಹವನ್ನು ನೀಡಬೇಕಿದೆ ಇಂದಿನ ದಿನಮಾನದಲ್ಲಿ ಅಂಕ ಮತ್ತು ಆಟ ಎರಡನ್ನು ಸಹಾ ತೊಗಿಸಿಕೊಂಡ ಹೋಗಬೇಕಿದೆ. ನಮ್ಮಲ್ಲಿ ಕ್ರೀಡೆಗೆ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಸಿಕ್ಕಿದ್ದರೆ ಒಲಂಪಿಕ್‍ನಲ್ಲಿ ನಮ್ಮವರು ಮತ್ತಷ್ಟು ಪದಕಗಳನ್ನು ಗೆಲುತ್ತಿದ್ದರು, ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕ್ರೀಡೆಯ ಬಗ್ಗೆ ಆಸಕ್ತಿಯನ್ನು ಮೂಡಿಸುವುದಲ್ಲದೆ ಅದಕ್ಕೆ ತಕ್ಕ ತರಬೇತಿಯನ್ನು ಕೂಡಿಸಬೇಕಿದೆ ಎಂದು ಫಾತ್ಯರಾಜನ್ ತಿಳಿಸಿದರು.

ಅಂತರಾಷ್ಟ್ರೀಯ ಕ್ರೀಡಾಪಟುವಾದ ಎನ್.ಡಿ.ಕುಮಾರ್ ಮಾತನಾಡಿ, ಮಕ್ಕಳಿಗೆ ಸಾದ ಓದು ಎನ್ನುವ ಪೋಷಕರು ತಮ್ಮ ಮಕ್ಕಳು ಕ್ರೀಡಾಪಟುಗಳಾಗಲಿ ಎಂದು ಆಶಿಸುವುದಿಲ್ಲ ಇದು ನಮ್ಮ ದುರಂತವಾಗಿದೆ ಚನ್ನಾಗಿ ಓದಿ ಉತ್ತಮವಾದ ಕೆಲಸವನ್ನು ಪಡೆದು ಕೈತುಂಬ ಸಂಪಾದಿಸಲಿ ಎನ್ನುತ್ತಾರೆ ಹೊರೆತಯ ಯಾರು ಸಹಾ ಕ್ರೀಡಾಪಟುವಾಗಲಿ ಎನ್ನುವುದಿಲ್ಲ ಸರ್ಕಾರವೂ ಸಹಾ ಕ್ರೀಡಾ ಪಟುಗಳಿಗೆ ಪ್ರೋತ್ಸಾಹವನ್ನು ನೀಡಬೇಕಿದೆ ಉದ್ಯೋಗದಲ್ಲಿ ಸರಿಯಾದ ರೀತಿಯಲ್ಲಿ ಮೀಸಲಾತಿಯನ್ನು ನೀಡಿದರೆ ಕ್ರೇಡೆಗೆ ಮುಂದೆ ಬರುತ್ತಾರೆ ಇದರ ಬಗ್ಗೆ ಸರ್ಕಾರ ಗಮನ ನೀಡಲಿ ಎಂದು ಮನವಿ ಮಾಡಿದರು.

ಈ ಪಂದ್ಯಾವಳಿಯಲ್ಲಿ ಪ್ರಾಥಮಿಕ, ಹೈಸ್ಕೂಲ್ ಹಾಗೂ ಕಾಲೇಜು ಹಂತ ಎಂದು ಮೂರು ವಿಭಾಗಗಳನ್ನು ಮಾಡಲಾಗಿತ್ತು, ಇದರಲ್ಲಿ ಪ್ರಾಥಮಿಕ 10, ಹೈಸ್ಕೂಲ್ 21 ಹಾಗೂ ಕಾಲೇಜಿನ 08 ತಂಡಗಳಿಂದ 450 ಕ್ರೀಡಾಪಟುಗಳು ಭಾಗವಹಿಸಿದ್ದರು. ಇದರಲ್ಲಿ ಪ್ರಾಥಮಿಕ ವಿಭಾಗದಲ್ಲಿ ಡಾನ್ ಬಾಸ್ಕೋ ಶಾಲೆ, ಹೈಸ್ಕೂಲ್ ವಿಭಾಗದಲ್ಲಿ ಬಾಸ್ಕೋ ಬಾಲಂಜನ್ ಕಾಲೇಜು ವಿಭಾಗದಲ್ಲಿ ಎಸ್.ಆರ್.ಎಸ್. ಪ್ರಥಮ ಸ್ಥಾನವನ್ನು ಗಳಿಸಿವೆ. ಈ ಪಂದ್ಯಾವಳಿಯಲ್ಲಿ ಉತ್ತಮವಾದ ಕೌಶಲ್ಯವನ್ನು ಪ್ರದರ್ಶನ ಮಾಡಿದ ಪ್ರಜ್ವಲ್ ಹಾಗೂ ಚೇತನರವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಕ್ಬರ್, ಗೀರೀಶ್, ನವಾಜ್, ಸಿದ್ದಿಕಿ, ಅಕ್ರಂ, ಆನ್ವರ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *