ಚಳ್ಳಕೆರೆ | ಸಿಡಿಲು ಬಡಿದು 106 ಕುರಿಗಳು ಮೃತ

1 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಆಗಸ್ಟ್.17 : ತಾಲೂಕಿನ ಜಾಜೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ 106 ಕುರಿಗಳು ಸಾವನ್ನಪ್ಪಿವೆ.

ಆಂಜನೇಯ ಎನ್ನುವವರಿಗೆ ಸೇರಿದ 90 ಹಾಗೂ ಓಬಣ್ಣ ಎನ್ನುವವರಿಗೆ ಸೇರಿದ 16  ಕುರಿಗಳು ಸೇರಿದಂತೆ  ಒಟ್ಟು 106 ಕುರಿಗಳು ಸಿಡಿಲಿಗೆ ಮೃತಪಟ್ಟಿವೆ.

ತಾಲ್ಲೂಕಿನಾದ್ಯಂತ ರಾತ್ರಿ ಮಳೆ ಸುರಿದಿದ್ದು ರಾತ್ರಿ 8.30 ರ ವೇಳೆಯಲ್ಲಿ ಸಿಡಿಲು ಬಡಿದ ಕಾರಣ ಕುರಿಗಳು ಸಾವನ್ನಪ್ಪಿವೆ. ಕುರಿ ಸಾಕಾಣಿಕೆದಾರರಿಗೆ ಲಕ್ಷಾಂತರ ರೂಪಾಯಿಗಳು ನಷ್ಟವಾಗಿದ್ದು, ಸಂಬಂಧಪಟ್ಟ ಅಧಿಕಾರಿ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಜಾಜೂರು ಗ್ರಾಮಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರಿಕ್ಷೆ ನಡೆಸಿ ಅನುಗ್ರಹ ಯೋಜನೆಯಡಿ ಪರಿಹಾರಕ್ಕೆ ಸರಕಾರಕ್ಕೆ ಕಳೊಸಿಕೊಡಲಾಗುವುದು ಎಂದು ಸಹಾಯಕ ನಿರ್ದೇಶಕ ಡಾ.ರೇವಣ್ಣ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಆರ್ ಐ ರಾಜೇ ಮತ್ತು ಗ್ರಾಮಲೆಕ್ಕಿಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks