Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಹಿಂದೂ ಮಹಾಗಣಪತಿ : ಧ್ವಜ ಸ್ತಂಭ ಪೂಜೆ ಮೂಲಕ ಅದ್ದೂರಿ ಚಾಲನೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.16:
ದೇಶದಲ್ಲಿಯೇ ಹೆಸರುವಾಸಿಯಾದ ನಗರದ ಹೆಮ್ಮೆಯ ಶೋಭಾಯಾತ್ರೆ ಇದಕ್ಕೆ ಕಾರಣ ಹಿಂದೂ ಮಹಾ ಗಣಪತಿ ಈ ಗಣಪತಿಯ ಆಚರಣೆಗಾಗಿ ಇಂದು ನಗರದ ಬಿ.ಡಿ.ರಸ್ತೆಯಲ್ಲಿನ ಪಂಚಾಚಾರ್ಯ ಕಲ್ಯಾಣ ಪಂಟಪದ ಪಕ್ಕದಲ್ಲಿನ ಜಾಗದಲ್ಲಿ ಪೆಂಡಾಲ್ ನಿರ್ಮಾಣಕ್ಕಾಗಿ ಧ್ವಜಾ ಸ್ತಂಭ, ಭೂಮಿ ಪೂಜೆ ಮತ್ತು ಗೋಮಾತೆಯ ಪೂಜೆಯನ್ನು ನೆರವೇರಿಸಲಾಯಿತು. ವಿವಿಧ ಮಠಾಧಿಶರು, ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಸಮ್ಮುಖದಲ್ಲಿ ನೇರವೇರಿಸಲಾಯಿತು.

 

ಇದೇ ಸೆಪ್ಟೆಂಬರ್ 7 ರಿಂದ ನಗರದಲ್ಲಿ ಹಿಂದೂ ಮಹಾ ಗಣಪತಿಯ ಪೂಜಾ ಕಾರ್ಯಗಳು ನಡೆಯಲಿದೆ. ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ಹಿಂದೂ ಮಹಾ ಗಣಪತಿ ಮಹೋತ್ಸವ ಇತ್ತೀಚಿನ ದಿನದಲ್ಲಿ ಹೆಚ್ಚಿನ ಜನ ಮನ್ನಣೆಯನ್ನುಗಳಿಸಿದೆ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯಲ್ಲಿ ರಾಜ್ಯ, ನೆರೆ ರಾಜ್ಯದಿಂದಲೂ ವಿವಿಧೆಡೆಗಳಿಂದ ಲಕ್ಷಾಂತರ ಜನತೆ ಆಗಮಿಸುವುದರ ಮೂಲಕ ಅದರಲ್ಲಿ ಭಾಗವಹಿಸಲಿದ್ದಾರೆ.

ಇಂದು ಮುಂಜಾನೆಯಿಂದಲೇ ಗಣಪತಿ ನಿರ್ಮಾಣದ ಜಾಗದಲ್ಲಿ ತಾಯಿ ಭಾರತಾಂಭೆ ಮತ್ತು ಹನುಮಂತನ ಭಾವಚಿತ್ರಗಳನ್ನು ಇರಿಸಿ ಪೂಜೆಯನ್ನು ನೇರವೇರಿಸಲಾಯಿತು, ಈ ಸಮಾರಂಭಕ್ಕೆ ಆಗಮಿಸಿದ್ದ ವಿವಿಧ ಮಠಾಧೀಶರು ಪೂಜಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪೂಜೆಯನ್ನು ಯಶಸ್ವಿಯಾಗಿ ನಡೆಸಿದರು, ತದ ನಂತರ ಗೋಮಾತೆಯನ್ನು ಪೂಜೆ ಮಾಡಿ ಅದಕ್ಕೆ ಹಸಿರು ಸೀರೆ, ಕೆಂಪು ಕಣ, ಬಳೆಗಳು ಹೂಗಳನ್ನು ಹಾಕಿ ಸಿಂಗಾರ ಮಾಡಲಾಯಿತು, ತದ ನಂತರ ಪೂಜೆಯನ್ನು ನಡೆಸಿ ಅದಕ್ಕೆ ನೈವೇದ್ಯವನ್ನು ನೀಡಲಾಯಿತು. ಧ್ವಜಾ ಸ್ತಂಭಕ್ಕೆ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಹಾಲನ್ನು ಹಾಕುವುದರ ಮೂಲಕ ಪೆಂಡಾಲ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.

ಸೆ, 7 ರಂದು ಹಿಂದೂ ಮಹಾ ಗಣಪತಿ ಇಲ್ಲಿ ಪ್ರತಿಷ್ಠಾಪನೆಯಾಗಲಿದ್ದು, ಸೆ, 27ರ ವರೆಗೆ ಪ್ರತಿ ದಿನ ಗಣಪತಿಗೆ ಪೂಜೆ ನೆರವೇರಲಿದ್ದು ಗಣಹೋಮ, ಚಂಡಿಕಾ ಹೋಮಗಳು ನಡೆಯಲಿವೆ, ಇದ್ದಲ್ಲದೆ ಪ್ರತಿ ದಿನ ಸಂಜೆ ವಿವಿಧ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ, ಸೆ. 28 ರ ಶನಿವಾರ ಶೋಭಾಯಾತ್ರೆ ನಗರದ ಬಿ.ಡಿ.ರಸ್ತೆ, ಮಜೆಸ್ಟಿಕ್ ವೃತ್ತ, ಅಂಬೇಡ್ಕರ್ ವೃತ್ತ, ಮಹಾವೀರ ವೃತ್ತ, ಪ್ರವಾಸಿ ಮಂದಿರ ರಸ್ತೆ, ಎಸ್.ಬಿ.ಎಣ. ವೃತ್ತ, ಬಿ.ಡಿ.ರಸ್ತೆ, ಸಂತೇಪೇಟೆ, ಹೊಳಲ್ಕೆರೆ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಮಾರಮ್ಮ ದೇವಾಲಯ, ಕನಕ ವೃತ್ತದ ಮೂಲಕ ನಡೆದು ಚಂದ್ರವಳ್ಳಿಯನ್ನು ತಲುಪಲಿದೆ. ಸಂತೇಪೇಟೆ ವೃತ್ತದಲ್ಲಿ ಭಕ್ತಾಧಿಗಳಿಂದ ಪೂಜೆಯನ್ನು ಸ್ವೀಕಾರ ಮಾಡಿ ಚಂದ್ರವಳ್ಳಿಯಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು. ಈ ಬಾರಿ ಗಣಪತಿ 14 ಅಡಿ ಎತ್ತರದಲ್ಲಿದ್ದು ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿದೆ, ಹಿಂದು ಮಹಾ ಗಣಪತಿಯ ಪೆಂಡಾಲ್‍ನ್ನು ಸಾಗರದ ನಿರ್ಮಾಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಮಾದಾರ ಚನ್ನಯ್ಯ ಗುರು ಪೀಠದ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ, ಶ್ರೀಗಳು ಯಾದವನಂದ ಗುರುಪೀಠದ ಶ್ರೀ ಕೃಷ್ಣಾಯಾದಾವನಂದ ಶ್ರೀಗಳು ಉಪ್ಪಾರ ಗುರುಪೀಠದ ಶ್ರೀ ಭಗೀರಥ ಶ್ರೀಗಳು, ವಾಲ್ಮೀಕಿ ಗುರುಪೀಠದÀ ಶ್ರೀ ಪ್ರಸನ್ನಾನಂದ ಶ್ರೀಗಳು, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಲಂಬಾಣಿ ಗುರುಪೀಠದ ಶ್ರೀ ಸರ್ದಾರ ಸೇವಾಲಾಲ್ ಶ್ರೀಗಳು, ಕೊಟ್ಟೂರಿನ ಶಿವಪ್ರಕಾಶ ಶ್ರೀಗಳು, ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಶ್ರೀಗಳು ಉಪಸ್ಥಿತರಿದ್ದರು.

ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಚಂದ್ರಪ್ಪ, ಕೆ.ಸಿ.ವಿರೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, 2024ರ ಹಿಂದೂ ಮಹಾ ಗಣಪತಿಯ ಉತ್ಸವ ಸವಿತಿಯ ಅಧ್ಯಕ್ಷರಾದ ನಯನ, ಮಾರ್ಗದರ್ಶಕರಾದ ಬದರಿನಾಥ್, ಭಜರಂಗದಳದ ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ, ಸಂಯೋಜಕರಾದ ಸಂದೀಪ್, ಉಪಾಧ್ಯಕ್ಷರಾದ ಡಾ.ಮಂಜುನಾಥ್, ನಗರಾಧ್ಯಕ್ಷರಾದ ಆಶೋಕ್, ಉಪಾಧ್ಯಕ್ಷರಾದ ರಂಗನಾಥ್, ಸಂಚಾಲಕರಾದ ಸಾಗರ್, ಕಿಶೂರ್, ರಾಮಾಂಜುನೇಯ, ಕಾರ್ತಿಕ್, ವಿಠಲ್‍ರಾವ್, ದರ್ಶನ್, ನಗರಸಭಾ ಸದಸ್ಯರಾದ ಸುರೇಶ್, ವೆಂಕಟೇಶ್, ಹರೀಶ್, ಅನುರಾಧ, ಶಶಿಧರ್, ಮಾಜಿ ಸದಸ್ಯರಾದ ರವಿಕುಮಾರ್, ನಗರಾಭೀವೃದ್ದಿ ಪ್ರಾಧೀಕಾರದ ಮಾಜಿ ಅಧಕ್ಷರಾದ ತಿಪ್ಪೇಸ್ವಾಮಿ, ಸುರೇಶ್ ಸಿದ್ದಾಪುರ, ಡಾ.ಸಿದ್ದಾರ್ಥ, ವೆಂಕಟೇಶ್ ಯಾದವ್, ಉಮೇಶ್ ಕಾರಜೋಳ, ಪ್ರಶಾಂತ್, ಅಂಜನಪ್ಪ, ಅರುಣ್‍ಕುಮಾರ್ ಶರಣ್‍ಕುಮಾರ್, ಅನಿತ್‍ಕುಮಾರ್, ಮಲ್ಲಿಕಾರ್ಜನ್ ಸೇರಿದಂತೆ ಇತರರು ಭಾಗವಹಿಸಿದ್ದರು.

 

Facebook
Twitter
Telegram
WhatsApp
suddionenews

suddionenews

Leave a Comment

Top Stories

43 ವಯಸ್ಸು ಅಂತ ಚಿಂತೆ ಬೇಡ.. PDO ಹುದ್ದೆಗೆ ನೀವೂ ಅರ್ಜಿ ಹಾಕಬಹುದು..!

ಬೆಂಗಳೂರು: ಎಷ್ಟೋ ಯುವಕ-ಯುವತಿಯರು ಸರ್ಕಾರಿ ಕೆಲಸಕ್ಕಾಗಿ ತಮ್ಮಿಡಿ ಜೀವನವನ್ನ ಮುಡಿಪಾಗಿಟ್ಟು ಓದುತ್ತಾ ಇರುತ್ತಾರೆ. ಆದರೆ ಎಲ್ಲರಿಗೂ ಸರ್ಕಾರಿ ಕೆಲಸಕ್ಕೆ ಹೋಗುವ ಅದೃಷ್ಟವೂ ಇರುವುದಿಲ್ಲ, ಕೆಲಸವೂ ಸಿಗುವುದಿಲ್ಲ. ವಯಸ್ಸು ಮೀರುತ್ತೆ. ಆದ್ರೀಗ ಅರ್ಜಿ ಆಹ್ವಾನಿಸಿರುವ ಪಿಡಿಓ

Tirumala Laddu : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು : ಬಿಡುಗಡೆಯಾದ ಲ್ಯಾಬ್ ವರದಿಯಲ್ಲೇನಿದೆ ?

ಸುದ್ದಿಒನ್, ತಿರುಮಲ, ಸೆಪ್ಟೆಂಬರ್. 19 : ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ಲಡ್ಡು ವಿಚಾರ ಬಾರೀ ಸದ್ದು ಮಾಡುತ್ತಿದೆ. ವೈಸಿಪಿ ಆಡಳಿತದಲ್ಲಿ ಲಡ್ಡೂಗಳಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಸಿಎಂ ಚಂದ್ರಬಾಬು ಹೇಳಿಕೆ ಸಂಚಲನ ಮೂಡಿಸಿತ್ತು.

ಸೆಪ್ಟೆಂಬರ್ 21 ರಂದು ದಾವಣಗೆರೆಯಲ್ಲಿ ಉದ್ಯೋಗ ಮೇಳ

ದಾವಣಗೆರೆ,ಸೆಪ್ಟೆಂಬರ್.19 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಇವರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51,  ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ ಇಲ್ಲಿ ಉದ್ಯೋಗಮೇಳ ಆಯೋಜಿಸಲಾಗಿದೆ.

error: Content is protected !!