ಬೆಂಗಳೂರು : ಎಲ್ಲೆಡೆ ಮಳೆಯ ಅಬ್ಬರ ತಗ್ಗುತ್ತಿಲ್ಲ. ನಿರಂತರ ಮಳೆಯಿಂದಾಗಿ ಹಳ್ಳ ಕೊಳ್ಳಗಳೆಲ್ಲಾ ತುಂಬಿ ತುಳುಕುತ್ತಿವೆ. ನದಿಗಳು ಅಪಾಯಮಟ್ಟ ಮೀರಿವೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯ ಕಾರಣ ಅಯ್ಯಪ್ಪ ದೇವರ ದರ್ಶನಕ್ಕೆ ಇಂದು ಭಕ್ತರಿಗೆ ಅವಕಾಶವಿಲ್ಲದಂತಾಗಿದೆ.
ಕೇರಳ ರಾಜ್ಯದಲ್ಲಿ ಎಲ್ಲೆಡೆ ಮಳೆಯಾಗುತ್ತಿದೆ. ಹೀಗಾಗಿ ಯಾತ್ರಾತ್ರಿಗಳ ಸುರಕ್ಷತಾ ದೃಷ್ಟಿಯಿಂದ ಅಯ್ಯಪ್ಪನ ದರ್ಶನ ಕ್ಯಾನ್ಸಲ್ ಮಾಡಿದೆ. ಯಾಕಂದ್ರೆ ಪಂಪಾ ನದಿ ಹಾಗೂ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ಕೆಲವು ಸೇತುವೆಗಳು ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. ಈ ಹಿನ್ನೆಲೆ ಶಬರಿ ಮಲೆ ಅಯ್ಯಪ್ಪನ ದೇಗುಲದ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ.
ಇಂದು ದೇವರ ದರ್ಶನಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಿದೆ ಅಂತ ಹೇಳಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಕಕ್ಕಿ-ಆನತೋಡ್ ಹಾಗೂ ಪಂಪಾ ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ. ಈಗಾಗಲೇ ಬುಕ್ ಮಾಡಿರುವವರಿಗೆ ಪರಿಸ್ಥಿತಿ ತಿಳಿಗೊಂಡ ನಂತರ ಸ್ಲಾಟ್ ಬುಕ್ ಮಾಡಿಕೊಡಲಾಗುತ್ತೆ ಎಂದು ತಿಳಿಸಿದ್ದಾರೆ.