ಮೈಸೂರು: ಪ್ರತೀ ಕಾಮಗಾರಿಗೆ ಶೇಕಡ 40 ರಷ್ಟು ಕಮೀಷನ್ ಪಡೆಯಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರ ಸಂಘದವರೇ ಆರೋಪಿಸಿದ್ದಾರೆ. ಇಂಥ ಸರ್ಕಾರ ಇರಬಾರದು. ರಾಜ್ಯ ಸರ್ಕಾರವನ್ನ ವಜಾಗೊಳಿಸುವಂತೆ ರಾಜ್ಯ ಪಾಲರಿಗೆ ನಾನು ಪತ್ರ ಬರೆಯುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಿಲ್ಲೆಗೆ ಭೇಟಿ ನೀಡಿರುವ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಮೀಷನ್ ದಧೆ ನಡೆಯುತ್ತಿರುವ ಬಗ್ಗೆ ರಾಜ್ಯ ಗುತ್ತಿದಾರ ಸಂಘದವರೇ ಪ್ರಧಾನಿಗೆ ಪತ್ರ ಬರೆದು ಈ ಕಮೀಷನ್ ಬಗ್ಗೆ ಆರೋಪಿಸಿದ್ದಾರೆ. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸಂಟೇಜ್ ಕೊಡಬೇಕೆಂಬುದನ್ನು ಅವರೇ ವಿವರಿಸಿದ್ದಾರೆ. ಈ ಆರೋಪ ನಾನು ಮಾಡಿದ್ದರೆ ಪ್ರತಿಪಕ್ಷದವರು ಅಂತ ವಿರೋಧಿಸಬಹುದಿತ್ತು.
ಆದರೆ ಟೆಂಡರ್ ಪಡೆಯುವವರೇ ಈ ಬಗ್ಗೆ ತಿಳಿಸಿದ್ದಾರೆ. ಶೇಕಡ 40 ಪರ್ಸೆಂಟ್ ಕೊಡಬೇಕು ಎಂದು ಆರೋಪಿಸಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇರಬಾರದು. ನಾ ಕಾವೂಂಗಾ ನಾ ಕಾನೇದೂಂಗಾ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕಮೀಷನ್ ತೆಗೆದುಕೊಳ್ಳೋದನ್ನ ನಾನು ಜೀವಮಾನದಲ್ಲೇ ನೋಡಿಲ್ಲ ಎಂದು ಹೇಳಿದ್ದಾರೆ.