Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಿರುಪತಿಯಿಂದ ಹಿಂದಿರುಗಿದ್ದೆ ಪವಾಡ : ನಟಿ ತಾರಾ ಅನುಭವ

Facebook
Twitter
Telegram
WhatsApp

ಬೆಂಗಳೂರು: ಬೆಂಬಿಡದೆ ಸುರಿಯುತ್ತಿರುವ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಕೆಲವೆಡೆ ಮನೆಗಳು ಉರುಳಿದ್ರೆ, ಇನ್ನು ಕೆಲವು ಕಡೆ ರಸ್ತೆಗಳು ಜಲಾವೃತಗೊಂಡಿವೆ, ವಸ್ತುಗಳು, ವಾಹನಗಳು ಕೊಂಚಿಕೊಂಡು ಹೋಗಿವೆ. ತಿರುಪತಿಯಲ್ಲಂತು ಮಳೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ.

ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ. ಜನ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಆಗದ ಸ್ಥಿತಿ ನಿರ್ಮಾಣವಾಗಿದೆ. ತಿರುಪತಿಯಿಂದ ನಿನ್ನೆ ಮಧ್ಯರಾತ್ರಿ ಬೆಂಗಳೂರು ತಲುಪಿದ ನಟಿ ತಾರಾ ಅವರ ಅನುಭವದ ಮಾತು ಎದೆ ಝಲ್ ಎನಿಸುತ್ತಿದೆ.

ನಟಿ ತಾರಾ ಅನುರಾಧ ಇತ್ತೀಚೆಗಷ್ಟೇ ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಹೋಗಿದ್ದರು. ಅಲ್ಲಿರುವ ಪರಿಚಯಸ್ಥರೊಬ್ಬರನ್ನ ಕಾಂಟ್ಯಾಕ್ಟ್ ಮಾಡಿ ದೇವಸ್ಥಾನಕ್ಕೆ ಹೋದೆವು. ಆದ್ರೆ ನಾವೂ ಅಲ್ಲಿಗೆ ಹೋದ ಮೇಲೆ ಮಳೆ ಜೋರಾಯಿತು. ರಸ್ತೆಯಲ್ಲೆಲ್ಲಾ ನೀರು ಮೊಣಕಾಲುದ್ದ ನಿಂತಿತ್ತು.

ದೇವರ ದರ್ಶನ ಮಾಡಲೆಂದೆ ಹೋಗಿದ್ದೆವು. ಆದ್ರೆ ಅಲ್ಲಿ ಸುರಿಯುತ್ತಿದ್ದ ಮಳೆಯಿಂದ ಬೆಟ್ಟಕ್ಕೆ ಹೋಗಲು ಸಾಧ್ಯವಾಗಲೇ ಇಲ್ಲ. ಕಡೆಗೂ ರಾತ್ರಿಯೆ ಬೆಂಗಳೂರಿಗೆ ವಾಪಾಸ್ಸಾದೆವು. ಬರುವಾಗ ರಸ್ತೆಯಲ್ಲೆಲ್ಲಾ ನೀರು ತುಂಬಿದ್ದನ್ನ ನೋಡಿ ಭಯ ಆಯ್ತು. ಎದುರುಗಡೆ ಹೋಗುತ್ತಿದ್ದ ವಾಹನಗಳು ಕಾಣ್ತಾ ಇರ್ಲಿಲ್ಲ. ತಿರುಪತಿ ತಿಮ್ಮಪ್ಪನೇ ನಮ್ಮನ್ನ ಹುಷಾರಾಗಿ ಕಳುಹಿಸಿದ ಅನ್ಸುತ್ತೆ. ಮಧ್ಯರಾತ್ರಿ ಸೇಫ್ ಆಗಿ ಮನೆ ಸೇರಿದೆವು ಎಂದು ತಮ್ಮ ಅನುಭವ ಹೇಳಿಕೊಂಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸ್ವಂತ ಹಣದಿಂದ ರಸ್ತೆ ರಿಪೇರಿ ಮಾಡಿಸಿದ ವಿನೋದ್ ರಾಜ್

ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಕನ್ನಡ ಇಂಡಸ್ಟ್ರಿಯಿಂದ ದೂರವಾಗಿ ಬಹಳ ವರ್ಷಗಳೇ ಕಳೆದವು. ಒಂದೆರಡು ಸಿನಿಮಾ ಮಾಡಿ, ನಟನೆಯಿಂದ ದೂರವಾದರೂ. ಡ್ಯಾನ್ಸ್ ಮಾಡುವುದರಲ್ಲಿ ವಿನೋದ್ ರಾಜ್ ಎತ್ತಿದ ಕೈ. ಆದರೆ ಅವರನ್ನು ಸ್ಯಾಂಡಲ್

ಚಿತ್ರದುರ್ಗ | ಲೋಕಾಯುಕ್ತ ಬಲೆಗೆ ಬಿದ್ದ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ

ಸುದ್ದಿಒನ್, ಚಿತ್ರದುರ್ಗ, ಮೇ. 06  : ಗುತ್ತಿಗೆದಾರನ  ಕಾಮಗಾರಿ ಬಿಲ್ ಪಾವತಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಿತ್ರದುರ್ಗ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ

ಕರ್ನಾಟಕದಲ್ಲಿಯೇ ತೀರ್ಥಹಳ್ಳಿಯಲ್ಲಿ ಬೆಳೆಯುವ ಅಡಿಕೆ ಬೆಸ್ಟ್ : ಸಂಶೋಧನೆಯಲ್ಲಿ ಬಯಲಾಯ್ತು ಸತ್ಯ

  ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಆದರೆ ರಾಜ್ಯದೆಲ್ಲೆಡೆ ಆಲ್ಮೋಸ್ಟ್ ಎಲ್ಲಾ ಜಿಲ್ಲೆಯಲ್ಲೂ ಅಡಿಕೆ ತೋಟವನ್ನು ಮಾಡಿರುತ್ತಾರೆ. ಆದರೆ ಅಡಿಕೆಯ ಗುಣಮಟ್ಟದ ವಿಚಾರಕ್ಕೆ ಬಂದರೆ ತೀರ್ಥಹಳ್ಳಿಯ ಅಡಿಕೆ ಉತ್ತಮ ಎನ್ನಲಾಗುತ್ತದೆ. ಕೃಷಿ

error: Content is protected !!