Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ತಲುಪಿದ ರಾಜೀವ್ ಗಾಂಧಿ ಸದ್ಭಾವನಾ ಜ್ಯೋತಿ ಯಾತ್ರೆ : ಕಾಂಗ್ರೆಸ್ ಕಾರ್ಯಕರ್ತರಿಂದ ಸ್ವಾಗತ

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಆ. 11:
ರಾಜೀವಗಾಂಧಿಯವರು ಇನ್ನಷ್ಟು ವರ್ಷ ಬದುಕಿದ್ದರೆ ದೇಶಕ್ಕೆ ಉತ್ತಮವಾದ ಆಡಳಿತವನ್ನು ನೀಡುವುದ್ದಲ್ಲದೆ ದೇಶವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ರಾಜ್ಯಸಭಾದ ಮಾಜಿ ಸದಸ್ಯ ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಹೆಚ್. ಹನುಮಂತಪ್ಪ ತಿಳಿಸಿದ್ದಾರೆ.

ಶ್ರೀಪೆರಂಬದೂರಿನಿಂದ ಕಳೆದ 9 ರಿಂದ ಪ್ರಾರಂಭವಾಗಿರುವ ರಾಜೀವಗಾಂಧಿ ಸದ್ಭಾವನಾ ಯಾತ್ರೆಯೂ ಕ್ವಿಟ್ ಇಂಡಿಯಾ ಚಳುವಳಿಯ ದಿನದಂದು ಭಯೋತ್ಪಾದನೆ ತೊರೆಯಿರಿ ಎಂಬ ಘೋಷಣೆಯೊಂದಿಗೆ ಆಗಲಿದ ನಾಯಕ ಮಾಜಿ ಪ್ರಧಾನಮಂತ್ರಿ ರಾಜೀವಗಾಂಧಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲು ಆ.19 ರಂದು ನವದೆಹಲಿಯನ್ನು ತಲುಪಲಿದೆ ದಾರಿ ಮಧ್ಯದಲ್ಲಿ ಭಾನುವಾರ ಚಿತ್ರದುರ್ಗಕ್ಕೆ ಆಗಮಿಸಿದ ಜ್ಯೋತಿಯನ್ನು ಡಿಸಿಸಿವತಿಯಿಂದ ಸ್ವಾಗತಿಸಿ ನಂತರ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗ ನಾನು ಇಲ್ಲಿ ಬದುಕಿದ್ದೇನೆ ಎಂದರೆ ಅದಕ್ಕೆ ರಾಜೀವಗಾಂಧಿ ಕಾರಣರಾಗಿದ್ದಾರೆ ಏಕೆಂದರೆ ಅಂದು ಅವರ ಹತ್ಯೆಯಾದ ದಿನದಂದು ನಾನು ಸಹಾ ಅವರ ಜೊತೆಯಲ್ಲಿ ಇದ್ದೆ ಆದರೆ ಏನೋ ಕಾರಣದಿಂದ ಕಾರ್ಯಕ್ರಮ ನಡೆಯುವ ದಿನದಂದು ನಾನು ಹೋಗಬೇಕಾಯಿತು, ಇದರಿಂದ ನಾನು ಬದುಕಿದ್ದೇನೆ ಇಲ್ಲವಾದ್ದರೆ ಅಂದೇ ನಾನು ಸಹಾ ಮರಣವನ್ನು ಹೊಂದಬೇಕಿತ್ತು ಎಂದು ಅಂದಿನ ದಿನವನ್ನು ನೆನಪು ಹಾಕಿದರು.

ರಾಜೀವಗಾಂಧಿಯವರು ತಮ್ಮ ಅಧಿಕಾರದಲ್ಲಿದ್ದಾಗ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ 18 ವಯಸ್ಸಿಗೆ ಯುವಜನಾಂಗಕ್ಕೆ ಮತದಾನ ಹಕ್ಕನ್ನು ನೀಡಿದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿ ಮಾಡುವುದರ ಮೂಲಕ ಆಡಳಿತದಲ್ಲಿ ವಿಭಜನೆಯನ್ನು ಮಾಡಿ ಸುಗಮವಾದ ಆಡಳಿತಕ್ಕೆ ದಾರಿ ಮಾಡಿಕೊಟ್ಟರು ಇದ್ದಲ್ಲದೆ ಈಗ ನಾವು ಉಪಯೋಗಿಸುತ್ತಿರುವ ಮೊಬೈಲ್ ಪೋನ್ ಸಹಾ ಇವರ ಆಧಿಕಾರದಲ್ಲಿಯೇ ತರಲಾಯಿತು. ರಾಜೀವಗಾಂಧಿಯವರಿಗೆ ರಾಜಕೀಯಕ್ಕೆ ಬರಲು ಆಸಕ್ತಿ ಇರಲಿಲ್ಲ ಆದರೆ ಅನಿವಾರ್ಯ ಕಾರಣದಿಂದಾಗಿ ರಾಜಕೀಯಕ್ಕೆ ಬರಬೇಕಾಯಿತು, ತಮ್ಮ ಆಧಿಕಾರದ ಕಡಿಮೆ ಅವಧಿಯಲ್ಲಿಯೇ ಉತ್ತಮವಾದ ಆಡಳಿತವನ್ನು ನೀಡಿದರು ಎಂದರು.
ರಾಜೀವಗಾಂಧಿ ಯಾತ್ರಾ, ಸಮಿತಿಯು ಭಯೋತ್ಪಾದನೆ ವಿರೋಧಿ ಸಂದೇಶವನ್ನು ಸಾರುತ್ತದೆ. ರಾಷ್ಟ್ರವನ್ನು ನಿರ್ಮಿಸಲು ದೇಶದ ಏಕ್ಯತೆಯನ್ನು ಬಲಪಡಿಸಲು ರಾಜೀವಗಾಂಧಿಯವರ ಕೊಡುಗೆಯನ್ನು ಸಾರುತ್ತದೆ. ರಾಜೀವ್ ಜ್ಯೋತಿ ಸದ್ಭವನಾ ಯಾತ್ರೆ ಸಹೋದರತ್ವದ ಸಂದೇಶವನ್ನು ಸಾರುತ್ತದೆ. ಏಕತೆ ಮತ್ತು ಭಯೋತ್ಪಾದನೆ ವಿರುದ್ದ ಧೃಡವಾದ ಕ್ರಮ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತದೆ. ನಮ್ಮ ದೇಶದಲ್ಲಿ ಭಯೋತ್ಪಾದನೆಯ ಆಪಾಯಕಾರಿ ಚಟುವಟಿಕೆಗಳು ನಿಲ್ಲಬೇಕಿದೆ. ಇದರ ಬಗ್ಗೆ ಜಾಗೃತಿಯನ್ನು ಮೂಡಿಸಬೇಕಿದೆ. ರಾಜೀವಗಾಂಧಿಯವರು ಈಗ ಇರಬೇಕಿತ್ತು, ಇದ್ದ ದಿನದಲ್ಲಿ ಉತ್ತಮವಾದ ಕಾರ್ಯವನ್ನು ಮಾಡಿದ್ದಲ್ಲದೆ ಯುವ ಜನಾಂಗಕ್ಕೆ ಪ್ರೋತ್ಸಾಹವನ್ನು ನೀಡಿದರು. ಸರ್ಕಾರದ ಕಾರ್ಯಕ್ರಮಗಳನ್ನು ಬದಲಾವಣೆ ಮಾಡಿದರು. ರಾಜೀವಗಾಂಧಿಯವರು ಇಂದಿನ ದಿನಮಾನದಲ್ಲಿ ಬದುಕಿದ್ದರೆ ಭಾರತದ ರಾಜಕೀಯ ಚಿತ್ರಣವೇ ಬದಲಾಗುತ್ತಿತ್ತು ಎಂದು ಹನುಮಂತಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜೀವಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ಅಧ್ಯಕ್ಷರಾದ ಆರ್.ದೊರೈ, ಶ್ರೀನಿವಾಸಪ್ಪ, ಕಾಂಗ್ರೆಸ್ ಐಯ್ಯರ್ ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‍ಕುಮಾರ್, ಮೈಲಾರಪ್ಪ, ಪ್ರಕಾಶ್, ನಜ್ಮಾತಾಜ್, ಲಕ್ಷ್ಮೀಕಾಂತ್, ಕಾಂಗ್ರೆಸ್‍ನ ಕಾರ್ಮಿಕ ವಿಭಾಗದ ಜಾಕಿರ್, ಪೈಲ್ವಾನ್ ತಿಪ್ಪೇಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು. ಇದಕ್ಕೂ ಮುನ್ನಾ ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

error: Content is protected !!