ಮನುಷ್ಯ ದಿನದಲ್ಲಿ ಎರಡ್ಮೂರು ಲೀಟರ್ ನೀರು ಕುಡೊಯಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ ಅದೆಷ್ಟೋ ಜನ ಒಂದು ಲೀಟರ್ ನಷ್ಟು ನೀರನ್ನು ಕುಡಿಯುವುದಿಲ್ಲ. ಈಗಂತು ಮಳೆಯಿಂದಾಗಿ ಚಳಿಯ ವಾತಾವರಣ ಇರುವ ಕಾರಣ ಬಾಯಾರಿಕೆ ಆಗುವುದೇ ಇಲ್ಲ. ಹಲವರು ಬಿಸಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೂ ನೀರು ಕುಡಿಯುವುದು ಕಡಿಮೆಯೇ ಸರಿ. ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಸೇರಿದಂತೆ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು ಎಂದೇ ಹೇಳುತ್ತಾರೆ. ಆದರೆ ದಿನವಿಡೀ ಬಿಸಿನೀರು ಕುಡಿಯುವವರು ಆರೋಗ್ಯದ ಕಡೆ ಗಮನ ಕೊಡಬೇಕಾಗುತ್ತದೆ. ಅದರಿಂದ ಏನೆಲ್ಲಾ ಸಮಸ್ಯೆಗಳು ಬರುತ್ತವೆ ಗೊತ್ತಾ..?
* ಕೆಲವೊಬ್ಬರು ಬಿಸಿನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಯಕೃತ್ತಿನ ಸಮಸ್ಯೆ ಉಂಟಾಗುತ್ತದೆ ಎಂದೇ ಭಾವಿಸುತ್ತಾರೆ. ಹೀಗಾಗಿ ಹೆಚ್ಚಿನ ಜನ ದಿನವಿಡೀ ಬಿಸಿ ನೀರು ಕುಡಿಯುವುದಿಲ್ಲ.
* ಬಿಸಿ ನೀರು ಹೆಚ್ಚಾಗಿ ಸೇವಿಸುವ ಕಾರಣ ಚರ್ಮದ ತ್ವಜೆ ಡಲ್ ಆಗುವ ಸಾಧ್ಯತೆ ಇರುತ್ತದೆ. ಹೆಚ್ಚು ಬಿಸಿ ಇರುವ ನೀರನ್ನು ಕುಡಿಯುವುದರಿಂದ ದೇಹ ಬೆವರುವುದಕ್ಕೆ ಕಾರಣವಾಗುತ್ತದೆ. ತುರಿಕೆ, ಚರ್ಮ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
* ಬಿಸಿನೀರಿನಿಂದ ನಿಮ್ಮ ನಿದ್ರೆಗೆ ತೊಂದರೆಯಾಗಲಿದೆ. ಅತಿಯಾದ ಬಿಸಿನೀರಿನ ಸೇವನೆ ನಿದ್ದೆ ಬರಿಸದಂತೆ ಮಾಡಿಬಿಡುತ್ತದೆ.
* ನೀರು ಕುಡಿಯುವುದು ಆರೋಗ್ಯಕರವಾಗಿದ್ದು ಅದು ದೇಹವನ್ನು ಹೈಡ್ರೇಟ್ ಮಾಡುತ್ತದೆ ಎನ್ನುವುದು ನಿಜ. ಆದರೆ ನಿಮಗೆ ಬಾಯಾರಿಕೆ ಇಲ್ಲದಿರುವಾಗಲೂ ಆಗಾಗ್ಗೆ ಬಿಸಿನೀರನ್ನು ಕುಡಿಯುವುದರಿಂದ ದೇಹದಲ್ಲಿನ ನೀರಿನ ಸಾಂದ್ರತೆಯಲ್ಲಿ ಅಸಮತೋಲನವನ್ನು ಉಂಟುಮಾಡಬಹುದು, ಇದರಿಂದಾಗಿ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.
ಬಿಸಿನೀರು ಕುಡಿಯುವುದರಿಂದ ಲಾಭಗಳು ಸಹ ಇದಾವೆ. ಅತಿಯಾಗಬಾರದು ಅಷ್ಟೇ. ಈಗಂತೂ ಮಳೆಗಾಲ ಆಗಿರುವ ಕಾರಣ ಹಲವರಲ್ಲಿ ಶೀತ, ನೆಗಡಿ ಸರ್ವೇ ಸಾಮಾನ್ಯ. ತಣ್ಣಗಿನ ನೀರು ಕುಡಿಯುವುದರಿಂದ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದರೆ ಬೆಚ್ಚಗಿನ ನೀರು ಕುಡಿಯುವುದರಿಂದ ಶೀತವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಸಮಯದಲ್ಲಿ ದೇಹ ಉಷ್ಣತೆಯಿಂದ ಕೂಡಿರಬೇಕು. ಹೀಗಾಗಿ ಬಿಸಿನೀರು ಅದನ್ನು ಹೆಚ್ಚಿಸುತ್ತದೆ.
(ಈ ಎಲ್ಲಾ ಮಾಹಿತಿಯನ್ನು ಗೂಗಲ್ ನಲ್ಲಿ ರೆಫರೆನ್ಸ್ ಮಾಡಿ ಬರೆದಿರುವ ಕಾರಣ ವೆಬ್ಸೈಟ್ ಜವಬ್ದಾರಿಯಲ್ಲ)