ವಯನಾಡಿನಲ್ಲಿ ಕಾರ್ಯಾಚರಣೆ ಅಂತ್ಯ : ಸಾವು-ಬದುಕಿನ ನಡುವೆ ಹೋರಾಡಿದ ಯೋಧರಿಗೆ ಬಿಳ್ಕೊಡುಗೆ

suddionenews
1 Min Read

 

ವಯನಾಡ್: ಕೇರಳದ ವಯನಾಡಿನ ಪರಿಸ್ಥಿತಿಯನ್ನ ಈಗ ನೋಡಿದರೂ ನೋವಾಗುತ್ತದೆ. ಕನಸು ಕಂಡು ಮನೆ ಕಟ್ಟಿದವರು, ಬದುಕು ಕಟ್ಟಿಕೊಳ್ಳಬೇಕೆಂದು ಹೋದವರು ಯಾರೂ ಉಳಿದಿಲ್ಲ. ಮಣ್ಣಿನಡಿ ಸಿಲುಕಿ ಜೀವ ಬಿಟ್ಟಿದ್ದಾರೆ. ಸಾವಿನ ಸಂಖ್ಯೆ 400ಕ್ಕೆ ತಲುಪಿದ. ಇಷ್ಟು ಕಷ್ಟದ ಸ್ಥಿತಿಯಲ್ಲೂ ಎಲ್ಲರನ್ನು ಕಾಪಾಡುವ ರಿಸ್ಕ್ ತೆಗೆದುಕೊಂಡಿದ್ದು ನಮ್ಮ ಹೆಮ್ಮೆಯ ಯೋಧ ಪಡೆ.

https://x.com/airnews_mumbai/status/1821768337434570957?t=IO0l1iv0foiUlncxZ033tw&s=19

ಸುಮಾರು 21 ಎಕರೆಯಷ್ಟು ಸ್ಥಳದಲ್ಲಿ ಗುಡ್ಡ ಕುಸಿತ ಕಂಡಿತ್ತು. ನೀರು ರಭಸವಾಗಿ ಹರಿಯುತ್ತಿತ್ತು. ಅಲ್ಲಿಗೆ ಧಾವಿಸಿದ್ದು ಎನ್ಡಿಆರ್ಎಫ್ ಹಾಗೂ ರಸ್ಡಿಆರ್ಎಫ್ ತಂಡ ಮತ್ತು ಭಾರತೀಯ ನೌಕಾದಳ. ಹಗಲು, ರಾತ್ರಿ ಎನ್ನದೆ ಜೀವ ಭಯ ಬಿಟ್ಟು ಜೀವ ಇದ್ದವರನ್ನ ದಡ ಸೇರಿಸಿದ್ದರು. ಸದ್ಯ ಮಳೆಯ ಪ್ರಮಾಣವೂ ತಗ್ಗಿದೆ. ಕಾರ್ಯಾಚರಣೆ ಅಂತ್ಯಗೊಂಡಿದೆ. ಹೀಗಾಗಿ ಯೋಧರನ್ನ ಕೇರಳದ ಜನತೆ ಗೌರವ ಪೂರತವಕವಾಗಿ ವಂದಿಸಿ, ಕಳುಹಿಸಿಕೊಟ್ಟಿದ್ದಾರೆ. ಮೌಂಟ್ ಟಾಬರ್ ಶಾಲೆಯಿಂದ ಹೊರಟಿದ್ದಾರೆ.

122 ಇನ್ ಫೆಂಟ್ರಿ ಬ್ಯಾಟಲಿಯನ್ ಟೀಂ ಸತತ 10 ದಿನಗಳ ಕಾಲ ರಕ್ಷಣಾ‌ ಕಾರ್ಯಾಚರಣೆ ನಡೆಸಿದೆ. ಮೇಜರ್ ಜನರಲ್ ಮ್ಯಾಥೀವ್ ಅವರ ನೇತೃತ್ವದಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಜನರ ರಕ್ಷಣೆಗೆಂದು ನಿಂತಿದ್ದರು. ಇಷ್ಟು ಕಷ್ಟದ ಸಮಯದಲ್ಲಿ ಪ್ರಾಣವನ್ನು ಕಾಪಾಡಿದ ಯೋಧರಿಗೆ ಜನ ಗೌರವ ಸಲ್ಲಿಸಲೇಬೇಕು ಅಲ್ವಾ. ಚಪ್ಪಾಳೆ ತಟ್ಟುವ ಮೂಲಕ, ಭಾರತ ಮಾತಾಕೀ ಜೈ ಎಂದು ಹೇಳಿ ಒಂದು ಸಲಾಂ ಹೊಡೆದು ಬಿಳ್ಕೊಡಿಗೆ ನೀಡಿದ್ದಾರೆ. ನಿಮ್ಮ ಉಪಕಾರವನ್ನು ಎಂದಿಗೂ ಮರೆಯಲಾರೆವು ಎಂಬ ಸಂದೇಶವನ್ನು ಕೇರಳ ಜನತೆ ಸಾರಿದ್ದಾರೆ. ಈ ವಿಡಿಯೋವನ್ನು ಕೊಚ್ಚಿ ಡಿಫೆನ್ಸ್ ಪಿಆರ್ಓ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *