ಚಿತ್ರದುರ್ಗ, (ನ.19) : ಜಿಲ್ಲೆಯಲ್ಲಿ ನವೆಂಬರ್ 19 ರಂದು ಬಿದ್ದ ಮಳೆಯ ವಿವರದನ್ವಯ ಹೊಸದುರ್ಗದಲ್ಲಿ 65.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಬಾಗೂರಿನಲ್ಲಿ 10 ಮಿ.ಮೀ, ಮತ್ತೋಡು 40 ಮಿ.ಮೀ, ಶ್ರೀರಾಂಪುರ 45 ಮಿ.ಮೀ, ಮಾಡದಕೆರೆ 21.2 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರು 52.6, ಬಬ್ಬೂರು 39.4, ಇಕ್ಕನೂರು 43.2, ಈಶ್ವರಗೆರೆ 52.2 ಹಾಗೂ ಸೂಗೂರಿನಲ್ಲಿ 8.3 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ 18.8 ಮಿ.ಮೀ, ಪರಶುರಾಂಪು 22 ಮಿ.ಮೀ, ತಳಕು 39.2 ಮಿ.ಮೀ, ಡಿ.ಮರಿಕುಂಟೆ 41.2 ಮಿ.ಮೀ ಹಾಗೂ ನಾಯಕನಹಟ್ಟಿಯಲ್ಲಿ 40.8 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮುರು 49.2 ಮಿ.ಮೀ, ರಾಯಾಪುರ 38.5, ಬಿ.ಜಿ.ಕೆರೆ 42.4, ರಾಂಪುರ 53 ಹಾಗೂ ದೇವಸಮುದ್ರ 45.2 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆ 45.4, ರಾಮಗಿರಿ 18.4, ಚಿಕ್ಕಜಾಜೂರು 20.5, ಬಿ.ದುರ್ಗ 16, ಹೆಚ್.ಡಿ.ಪುರ 26.4 ಹಾಗೂ ತಾಳ್ಯ 15.2 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 28.8, ಚಿತ್ರದುರ್ಗ-2ರಲ್ಲಿ 24.4, ಹಿರೇಗುಂಟನೂರು 4.2, ಭರಮಸಾಗರ 18.4, ಸಿರಿಗೆರೆ 15.4, ತುರುವನೂರು 23.8 ಹಾಗೂ ಐನಹಳ್ಳಿಯಲ್ಲಿ 19.2 ಮಿ.ಮೀ ಮಳೆಯಾಗಿದೆ.
3 ಜೀವಹಾನಿ, 104 ಮನೆ ಭಾಗಶಃ ಹಾನಿ: ಜಿಲ್ಲೆಯಲ್ಲಿ ನವೆಂಬರ್ 19ರಂದು ಸುರಿದ ಮಳೆಗೆ ಮನೆ ಗೋಡೆ ಕುಸಿದು ಮೂರು ಜೀವ ಹಾನಿ ಪ್ರಕರಣಗಳು ಹಾಗೂ 104 ಮನೆಗಳು ಭಾಗಶಃ ಹಾನಿಯಾಗಿವೆ.
ತಾಲ್ಲೂಕುವಾರು ಮಳೆ ಹಾನಿ ವಿವರ ಇಂತಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 19 ಮನೆ ಭಾಗಶಃ ಹಾನಿ,
ಚಳ್ಳಕೆರೆ ತಾಲ್ಲೂಕಿನಲ್ಲಿ 40 ಮನೆ ಭಾಗಶಃ ಹಾನಿ ಹಾಗೂ ಗೋಡೆ ಕುಸಿದು ಎರಡು ಜೀವಹಾನಿ ಪ್ರಕರಣಗಳು ಸಂಭವಿಸಿವೆ.
ಹಿರಿಯೂರು ತಾಲ್ಲೂಕಿನಲ್ಲಿ 28 ಮನೆ ಭಾಗಶಃ ಹಾನಿ ಹಾಗೂ ಗೋಡೆ ಕುಸಿದು ಒಂದು ಜೀವಹಾನಿಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನಲ್ಲಿ 1 ಮನೆ ಹಾನಿ,
ಹೊಸದುರ್ಗ ತಾಲ್ಲೂಕಿನಲ್ಲಿ 10 ಮನೆ ಹಾನಿ ಹಾಗೂ
ಮೊಳಕಾಲ್ಮುರು ತಾಲ್ಲೂಕಿನಲ್ಲಿ 6 ಮನೆಗಳು ಹಾನಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 104 ಮನೆಗಳು ಭಾಗಶಃ ಹಾನಿ ಹಾಗೂ ಮೂರು ಜೀವಹಾನಿ ಪ್ರಕರಣಗಳು ಸಂಭವಿಸಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.