ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 06 : ಸಿಐಡಿ ತನಿಖೆ ರಾಜ್ಯ ಸರ್ಕಾರ ನೀಡಿದ ವರದಿಯಲ್ಲೇನಿದೆ ಗೊತ್ತಿಲ್ಲ. ಪರಶುರಾಮ್ ಕುಟುಂಬಕ್ಕೆ ಅನ್ಯಾಯ ಆಗಿದೆ. ಪಿಎಸ್ಐ ಪರಶುರಾಮ್ ಸಾವಿನ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಚಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು, ಜಾತಿ ಮತ್ತು ಕಷ್ಟ PSI ಪರಶುರಾಮ್ ಬಲಿ ಪಡೆದಿದೆ. ಯಾದಗಿರಿ MLA ಮತ್ತು ಪುತ್ರಗೆ 20ಲಕ್ಷ ರೂಪಾಯಿ ಕೊಟ್ಟಿದ್ದನು. 7 ತಿಂಗಳಿಗೆ ಮತ್ತೆ 30 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. 20 ಲಕ್ಷ ಕೊಟ್ಟ ದುಡ್ಡು ಕೇಳಲು ಹೋದಾಗ ಬೈದು ಜಾತಿನಿಂದನೆ ಮಾಡಿದ್ದಾರಂತೆ. ಸಿದ್ಧರಾಮಯ್ಯ ಆಡಳಿತ ಸರಿಯಿದ್ದರೆ ಹೀಗಾಗುತ್ತಿರಲಿಲ್ಲ ಶಾಸಕರಿಗೆ ಅಭಿವೃದ್ಧಿಗೆ 1 ರೂಪಾಯಿ ಕೊಟ್ಟಿಲ್ಲ. ಶಾಸಕರು ಅಧಿಕಾರಿಗಳನ್ನು ಹಿಡಿದುಕೊಳ್ಳುವ ಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ.
ಶಾಸಕರು ಆಫೀಸರ್ಸ್ ಟಾರ್ಗೆಟ್ ಮಾಡುತ್ತಿದ್ದಾರೆ. ಸಿದ್ಧರಾಮಯ್ಯರಂತ ಕೆಟ್ಟ ಸರ್ಕಾರ ಯಾವುದೂ ಇಲ್ಲ. ತಮ್ಮ ಕಣಜ ತುಂಬಿಕೊಳ್ಳುವದರ ಬಗ್ಗೆ ಯೋಚಿಸುತ್ತಿದ್ದಾರೆ. ಸರಣಿ ಭ್ರಷ್ಟಾಚಾರದಲ್ಲಿ ಸಿದ್ಧರಾಮಯ್ಯ ಸರ್ಕಾರ ಸಿಲುಕಿದೆ. ಎಸ್ ಐಟಿ, ಸಿಐಡಿ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ.
ರಾಜಕಾರಣಿಗಳಿಗೆ ಜನ ಅಟ್ಟಿಸಿಕೊಂಡು ಬರುವ ಸ್ಥಿತಿ ಬರುತ್ತದೆ. ಮತ ಬ್ಯಾಂಕ್ ಸೆಳೆಯಲು ಗ್ಯಾರಂಟಿ ಯೋಜನೆ ಘೋಷಣೆ ಮಾಡಿತ್ತು. ಮೀನು ಕೊಡುವುದು ಬೇಡ ಮೀನು ಹಿಡಿಯಲು ಕಲಿಸಿ. ಎಸ್ಸಿಪಿಟಿಎಸ್ ಪಿಗೆ ಮೀಸಲಿದ್ದ ದಲಿತರ ಹಣವನ್ನು ಸರ್ಕಾರ ಬಳಸಿದೆ. ಸಿದ್ಧರಾಮಯ್ಯ ಸರ್ಕಾರ ಮೋಸ ವಂಚನೆಗೆ ಹೆಸರಾಗಿದೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿ ಲೂಟಿಯಲ್ಲಿ ತೊಡಗಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.