ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 02 : ಮಾಡನಾಯಕನಹಳ್ಳಿ ಗ್ರಾಮದ ರಿ.ಸ.ನಂ. 63 ರ ಸರ್ಕಾರಿ ಜಾಗದಲ್ಲಿ ಅಟ್ರಿಯ ವಿಂಡ್ ಪವರ್ ಲಿಮಿಟೆಡ್ ಬಿಜಾಪುರ-2 ಇವರು ಅಳವಡಿಸಿರುವ ವಿಂಡ್ ಫ್ಯಾನ್‍ಗಳ ಸುತ್ತಮುತ್ತ ಜಮೀನಿನಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಗಳಿಗೆ ಹಾನಿಯಾಗಿರುವುದನ್ನು ವಿರೋಧಿಸಿ ತಹಶೀಲ್ದಾರ್ ಅವರಿಗೆ ರೈತರು ಶುಕ್ರವಾರ ಮನವಿ ಸಲ್ಲಿಸಿದರು.
ಮೆಕ್ಕೆಜೋಳ ಬೆಳೆ ಹಾನಿಯಾಗಿರುವ ಬಗ್ಗೆ ಅಟ್ರಿಯಾ ವಿಂಡ್ ಪವರ್ ಲಿಮಿಟೆಡ್ ವ್ಯವಸ್ಥಾಪಕರಿಗೆ ಅನೇಕ ಸಾರಿ ಮನವರಿಕೆ ಮಾಡಿದ್ದರೂ ರೈತರ ಕಷ್ಟಗಳನ್ನು ಆಲಿಸುತ್ತಿಲ್ಲ. ಬೆಳಹಾನಿಗೂ ವಿಂಡ್ ಫ್ಯಾನ್‍ಗಳಿಗೂ ಸಂಬಂಧವಿಲ್ಲ. ಕಂದಾಯ ಇಲಾಖೆಯನ್ನು ಕೇಳಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆಂದು ಮಾಡನಾಯಕನಹಳ್ಳಿ ಗ್ರಾಮದ ರೈತರು ದೂರಿದರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹನುಮಂತಪ್ಪ, ಯತಿರಾಜ್, ಚಂದ್ರಪ್ಪ, ಕೊಲ್ಲಯ್ಯ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.