ಸುದ್ದಿಒನ್, ಚಳ್ಳಕೆರೆ, (ನ.18): ಬೆಳೆ ನಷ್ಟವಾಗಿದೆ ಎಂದು ರೈತರ ಬಾಯಲ್ಲಿ ಆತ್ಮಹತ್ಯೆ ಮಾತು ಬರಬಾರದು ಸರ್ಕಾರದಿಂದ ಬೆಳೆ ಹಾನಿಗೆ ಪರಿಹಾರ ಬಂದೆ ಬರುತ್ತದೆ. ನಾವು ಬೆಳೆ ನಷ್ಟದ ವರದಿ ಕಳಸುತ್ತೇವೆ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ರೈತರಿಗೆ ಸಂತ್ವಾನ ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಸಮೀಪ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯೊಂದಿಗೆ ನಷ್ಟವಾದ ಶೇಂಗಾ ಬೆಳೆ ಸಮೀಕ್ಷೆ ನಡೆಸಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆಯಾದರೂ ಸಮಯಕ್ಕೆ ಸರಿಯಾಗಿ ಬಾರದೆ ರೈತರ ಬೆಳೆ ನಷ್ಟವಾಗಿದ್ದರೆ, ಇನ್ನು ಕಳೆದ 12 ದಿನಗಳಿಂದ ಸುರಿದ ಮಳೆಗೆ ಶೇಂಗಾ ಬಳ್ಳಿಗಳಿಗೆ ಬೂದಿ ರೋಗ ಬಿದ್ದು ಶೇಂಗಾ ಬಳ್ಳಿಗಳು ಕಟಾವು ಮಾಡಲು ಬಾರದಂತೆ ನೆಲದಲ್ಲಿಯೇ ಶೇಂಗಾ ಕಾಯಿಗಳು ನೆಲದಲ್ಲಿಯೇ ಉದುರಿ ಹೋಗಿವೆ. ಇನ್ನು ಬಳ್ಳಿಯು ಸಂಪೂರ್ಣ ವಾಗಿ ಕೊಳೆತು ಹೋಗಿದ್ದು ರೈತರ ನಷ್ಟದಲ್ಲಿ ಇದ್ದಾರೆ ಎಂದು ಮಾಹಿತಿನೀಡಿದರು.
ತಾಲ್ಲೂಕಿನಲ್ಲಿ ಶೇಂಗಾ ಬೆಳೆಯು 56 ಸಾವಿರ ಹೆಕ್ಟರ್ ಪ್ರದೇಶ ನಷ್ಟವಾಗಿದೆ ಎಂದು ಅಂದಾಜಿ ಸಲಾಗಿದೆ. ಇನ್ನು ಈರುಳ್ಳಿ 8600 ಸಾವಿರ ಹೆಕ್ಟರ್ ಪ್ರದೇಶದಲ್ಲಿ ನಾಶವಾಗಿದೆ. ಇನ್ನು ಮೂರು ದಿನ ರೈತರ ಬೆಳೆಗಳ ಹಾನಿ ಕುರಿತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಈ ವೇಳೆ ಕೃಷಿ ಸಹಾಯಕ ನಿರ್ದೇಶಕ ಆಶೋಕ್, ರೈತ ಮುಖಂಡ ಕೆ.ಪಿ.ಭೂತಯ್ಯ, ಕೃಷಿ ಇಲಾಖೆ, ತೋಟಗಾರಿಕೆ ಸಿಬ್ಬಂದಿಗಳು ಹಾಗೂ ರೈತರು ಇದ್ದರು.