Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭೋವಿ ನಿಗಮದಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ :  ಶೇಷಣ್ಣಕುಮಾರ್ ಅಕ್ರೋಶ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗೆ ಮನವಿ

Facebook
Twitter
Telegram
WhatsApp

 

 

ಸುದ್ದಿಒನ್, ಚಿತ್ರದುರ್ಗ, ಜುಲೈ.28 : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರದ ವಿಚಾರವೇ ಸದ್ದು ಮಾಡುತ್ತಿದೆ. ಸದನದಲ್ಲೂ ಹಗರಣಗಳದ್ದೇ ಸದ್ದು ಗದ್ದಲವಾಗಿದೆ. ಈ ಹಗರಣ ಸಾಲಿಗೆ ಭೋವಿ ನಿಗಮವೂ ಸೇರಿಕೊಂಡಿರುವುದಕ್ಕೆ ಸಾಮಾಜಿಕ ಹೋರಾಟಗಾರ ಆರ್.ಶೇಷಣ್ಣಕುಮಾರ್.ಎಂ.ಎ ಅವರು ಬೇಸರ ಹೊರ ಹಾಕಿದ್ದಾರೆ.

ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆಯೊಂದಿಗೆ ಬಿಜೆಪಿಯನ್ನು ಮಣಿಸಿ ಸಂಪೂರ್ಣ ಜನಾದೇಶದೊಂದಿಗೆ ಅಸ್ಥಿತ್ವಕ್ಕೆ ಬಂದ  ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿಂದು ಪರಿಶಿಷ್ಠ ನಿಗಮಗಳ ಭ್ರಷ್ಟಾಚಾರಗಳೇ ಮಾಡುತ್ತಿರುವುದು ಅತ್ಯಂತ ವಿಪರ್ಯಾಸ ಹಾಗೂ ಖಂಡನೀಯವಾದುದಾಗಿದೆ.

ಪರೋಕ್ಷ/ಪ್ರತ್ಯಕ್ಷವಾಗಿ ಆಯಾಯ ಸಮುದಾಯಗಳ ಬಡಜನತೆಯ ಶ್ರೇಯೋಭಿವೃದ್ದಿಗೆ ಕಂಟಕಪ್ರಾಯರಾಗಿರುವ  ರಾಜಕಾರಿಣಿಗಳ, ಪುಡಾರಿಗಳ, ಮಧ್ಯವರ್ತಿಗಳಲವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಯ ಮೂಲಕ ಸಾವಿಗೀಡಾದ ವಾಲ್ಮೀಕಿ ನಿಗಮದ ಅಧಿಕಾರಿಯೋರ್ವರ ಡೆತ್ ನೋಟ್ ನಿಂದ ಮಾತ್ರವೇ ಅಲ್ಲಿನ ಭ್ರಷ್ಟಾಚಾರ ಜನರೆದುರು ಬಟಾ ಬಯಲಾದದ್ದಂತೂ ಅಕ್ಷರಶಃ ಸತ್ಯ.

ವಾಸ್ತವ ಸತ್ಯ ಸಂಗತಿಯೆಂದರೆ ವಾಲ್ಮೀಕಿ ನಿಗಮದ ಹಗರಣಕ್ಕಿಂತಲೂ ಮುಂಚೆಯೇ ಅಷ್ಟೇ ಪ್ರಮಾಣದ ಸರ್ಕಾರಿ ಹಣ ದುರುಪಯೋಗಗೊಂಡು ಸಮಗ್ರ ತನಿಖೆಗಾಗಿ ಭೋವಿ ಸಮಾಜದ ಮಾಜಿ ಮಂತ್ರಿಗಳೂ ಹಾಗೂ ಇದೇ ಭೋವಿ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರೂ ಆದ ಶ್ರೀಗೂಳಿಹಟ್ಟಿ ಶೇಖರ್ ರವರು ಸದನದ  ಒಳಗೂ(ಅವರು ಅಧಿಕಾರದಲ್ಲಿದ್ದಾಗ) ಮತ್ತು ಹೊರಗೂ ಧ್ವನಿ ಎತ್ತಿ, ಅವರು ಹಾಲಿ ಪದವಿಗಳನ್ನು ಹೊಂದಿದ್ದ ಸಮಯದಿಂದಲೂ ಇದರ ಸಂಪೂರ್ಣ ತನಿಖೆಯನ್ನು ಸಿಐಡಿ ಗೆ ವಹಿಸಿ ಸೂಕ್ತ ಕ್ರಮಕ್ಕಾಗಿ, ಮೊಟ್ಟ ಮೊದಲಿಗರಾಗಿ, ಜೊತೆಗೆ ಬಡಜನತೆಯ ಪರವಾದ ನ್ಯಾಯಕ್ಕಾಗಿ ಆಗ್ರಹಿಸಿಕೊಂಡು ಬರುತ್ತಿದ್ದರೂ ಸಹ ತನಿಖೆಯಲ್ಲಿ ಈವರೆಗೆ ಮೇಲ್ನೋಟಕ್ಕೆ ತಪ್ಪಿತಸ್ಥರೆಂದು ಪರಿಗಣಿಸಲ್ಪಟ್ಟಿರುವ ಜೊತೆಗೆ ಕಾಣದ ಕೈಗಳಂತೆ ಬಡ ಭೋವಿ ಅಮಾಯಕರಿಗೆ ಅನ್ಯಾಯವೆಸಗಿ ವಾಮಮಾರ್ಗದಲ್ಲಿ ಸರ್ಕಾರದ ಸುಮಾರು ನೂರಾರು ಕೋಟಿಗಳಷ್ಟು ಹಣವನ್ನು ನುಂಗಿ ನೀರುಕುಡಿದು ದುರುಪಯೋಗ ಪಡಿಸಿಕೊಂಡಿರುವವರ ಮೇಲೆ ಸರ್ಕಾರವು ತ್ವರಿತಗತಿಯಲ್ಲಿ ಕ್ರಮ ಜರುಗಿಸಿ ಸಂಭಂದಿಸಿದವರ ಮೇಲೆ ವಾಲ್ಮೀಕಿ ನಿಗಮದಲ್ಲಾದ ಬೆಳವಣಿಗೆಯಂತೆಯೇ ಇಲ್ಲಿಯೂ ಕ್ರಮ ವಹಿಸದೇ ನಿರ್ಲಕ್ಷ ಹಾಗೂ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಆಳುವ ಸರ್ಕಾರವು ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಪ್ರಕರಣಕ್ಕೆ ನೀಡಿರುವ ಆಧ್ಯತೆಯಲ್ಲಿ ಕೇವಲ 20% ರಷ್ಟಾದರೂ (ಕಾಲವಿಳಂಬ,ತನಿಖಾಧಿಕಾರಿಗಳ ಬದಲಾವಣೆ,ತಪ್ಪಿತಸ್ಥರನ್ನು ಭಂದಿಸಲು ಮೀನಾಮೇಷ,ದಾಖಲಾತಿಗಳ ಕಳುವು)ಆಧ್ಯತೆ ನೀಡಿಲ್ಲವೆಂಬುದನ್ನು ಯಾರೂ ಅಲ್ಲಗೆಳೆಯುವಮತಿಲ್ಲ. ಸಾಲದೆಂಬಂತೆ ಮಾನ್ಯಮುಖ್ಯಮಂತ್ರಿಗಳಾದಿಯಾಗಿ (ಪರಿಶಿಷ್ಠ ಶಾಸಕರಾದ ನರೇಂದ್ರ ಸ್ವಾಮಿಯವರು ಭೋವಿ ಸಮುದಾಯದ ವಿಚಾರವಾಗಿ ಸೂಕ್ತ ಮಾಹಿತಿಗಳೊಡನೆ ಸದನಕ್ಕೆ/ಸಭಾಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಾಗ್ಯೂ)ಜೊತೆಗೆ ಸದನದ ಒಳಗೂ ಹೊರಗೂ ಭೋವಿ ಸಮಾಜದ ಪರವಾಗಿ ಧ್ವನಿ ಎತ್ತ ಬೇಕಿದ್ದ ಭೋವಿ ಸಮಾಜದ ಚುನಾಯಿತ ಜನಪ್ರತಿನಿಧಿಗಳು ಮೌನ ವಹಿಸುತ್ತಿರುವುದು ನಾಡಿನ ಭೋವಿ ಜನತೆಗೆ ದ್ರೋಹವೆಸಿಗಿಂತಾಗಿದೆ ಎಂಬುದನ್ನು ಈಗಾಗಲೇ ರಾಜ್ಯದ ಜನತೆಗೆ ಮನವರಿಕೆಯಾಗಿರುತ್ತದೆ.

ಜಾತ್ಯಾತೀತ ಹಾಗೂ ವರ್ಗಾತೀತ ಸಮನ್ವಯ ತತ್ವಗಳನ್ನೇ ತಮ್ಮ ಉಸಿರಾಗಿಸಿಕೊಂಡಿರುವ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳೆಂದೇ ಖ್ಯಾತರಾಗಿರುವ ಮಾನ್ಯ ಮುಖ್ಯಮಂತ್ರಿಗಳು ನಮ್ಮ ಭೋವಿ ಸಮುದಾಯದ ಮೇಲೆ ಕೃಪೆ ತೋರಿ ಮೊನ್ನೆ ಚಿತ್ರದುರ್ಗದಲ್ಲಿ ಮಾಧ್ಯಮದೆದುರು ಆಶ್ವಾಸನೆ ನೀಡಿರುವಂತೆ ಭೋವಿ ಅಭಿವೃದ್ದಿ ನಿಗಮದಲ್ಲಾದ ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ಯಾರೇ ಪ್ರಭಾವೀ(ಸ್ವಜಾತಿ/ವಿಜಾತಿ)ಗಳಾಗಿರಲಿ ಅವರ ವಿರುದ್ದ ಕಾನೂನು ರೀತಿಯ ಕಠಿಣ ಕ್ರಮವನ್ನು ಜರುಗಿಸಲು ಮುಂದಾಗಬೇಕೆಂದು ರಾಜ್ಯದ ನೊಂದ ಭೋವಿ ಸಮಾಜದ ಜನತೆಯ ಪರವಾಗಿ ನನ್ನ ನೆಚ್ಚಿನ ಮುಖ್ಯಮಂತ್ರಿ ಗಳಲ್ಲಿ ಪತ್ರಿಕಾ ಹೇಳಿಕೆಯ ಮೂಲಕ ಆಗ್ರಹಿಸುತ್ತೇನೆ.

ಆರ್.ಶೇಷಣ್ಣಕುಮಾರ್.ಎಂ.ಎ.,
ಸಾಮಾಜಿಕ ಹೋರಾಟಗಾರರು.
ಸಂಸ್ಥಾಪಕ ರಾಜ್ಯಾಧ್ಯಕ್ಷರು.
ಅಖಿಲ ಕರ್ನಾಟಕ ಭೋವಿ ಕ್ರಿಯಾ ಸಮಿತಿ(ರಿ)
ಬ್ಯಾಂಕ್ ಕಾಲೋನಿ.ಚಿತ್ರದುರ್ಗ.
ಮೊ : 7760379111,  9448170553

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೆಳೆ ಕಟಾವು ಯಂತ್ರಗಳ ದುಬಾರಿ ಶುಲ್ಕ : ಏಕರೂಪದ ದರ ನಿಗಧಿಪಡಿಸಿ : ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817   ಸುದ್ದಿಒನ್, ಚಿತ್ರದುರ್ಗ ನ. 12 : ಜಿಲ್ಲೆಯಲ್ಲಿ ಕೃಷಿ ಬೆಳೆಗಳ ಕಟಾವು ಯಂತ್ರಗಳ ಮಾಲೀಕರುಗಳು ಬೆಳೆಕಟಾವು ಮತ್ತು

ಯಶ್ ಸಿನಿಮಾಗಾಗಿ ಮರಗಳ ಮಾರಣಹೋಮ : ಯಾರೆಲ್ಲರ ವಿರುದ್ಧ ಎಫ್ಐಆರ್ ದಾಖಲಾಯ್ತು..?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ. ಇತ್ತಿಚೆಗೆ ಅರಣ್ಯ ಇಲಾಖೆಯಿಂದ ತಂಡ ಎಚ್ಚರಿಕೆಯನ್ನು ಪಡೆದಿತ್ತು. ಇದೀಗ ತಂಡದ ಮೇಲೆ ಅರಣ್ಯ ಇಲಾಖೆ ಎಫ್ಐಆರ್ ಕೂಡ ದಾಖಲಿಸಿದೆ. ಮರಗಳ

ದಾವಣಗೆರೆ | ಈ ಊರುಗಳಲ್ಲಿ ನವೆಂಬರ್ 13 ರಂದು ವಿದ್ಯುತ್ ವ್ಯತ್ಯಯ

  ದಾವಣಗೆರೆ ನವಂಬರ್ 12 ; ಅತ್ತೀಗೆರೆ ವಿದ್ಯುತ್ ಮಾರ್ಗಗಳಲ್ಲಿ ಅಡಚಣೆ ಉಂಟಾಗುವುದರಿಂದ  ನವಂಬರ್ 13 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಅತ್ತೀಗೆರೆ ವಿದ್ಯುತ್ ವಿತರಣಾ ಕೇಂದ್ರಗಳಿಂದ ಸರಬರಾಜಾಗುವ ಅತ್ತಿಗೆರೆ,

error: Content is protected !!