ಚಿತ್ರದುರ್ಗ, (ನವೆಂಬರ್.18) : ನವೆಂಬರ್ 20 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ 11 ಕೆ.ವಿ ಮಾರ್ಗಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಆಡಚಣೆಗೊಳಪಡುವ ಪ್ರದೇಶಗಳು: ಚಿತ್ರದುರ್ಗ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ 11 ಕೆ.ವಿ. ಮಾರ್ಗಗಳಾದ ಎಫ್11-ಸಿ.ಜಿ.ಹಳ್ಳಿ,. ಎಫ್6-ಜಿ.ಆರ್.ಹಳ್ಳಿ, ಎಫ್9-ಸೀಬಾರ, ಎಫ್10-ಜಿಂದಾಲ್ ಮತ್ತು ಎಫ್8-ವಿದ್ಯಾನಗರ ಈ ಮಾರ್ಗಗಳಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಾದ ತರಳುಬಾಳು ನಗರ, ಗಾರೆಹಟ್ಟಿ, ಅಗಸನಕಲ್ಲು, ಕಾವಡಿಗರಹಟ್ಟಿ, ಮಠದ ಕುರುಬರಹಟ್ಟಿ, ಎಂಎಲ್‍ಎ ತಿಪ್ಪಾರೆಡ್ಡಿ ಮನೆಯ ಸುತ್ತಮತ್ತ, ವಿಶ್ವೇಶ್ವರಯ್ಯ ನಗರ ಹಾಗೂ ಜೆಎಂಐಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.