Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಸ್‌. ಆರ್‌. ಎಸ್. ಕಾಲೇಜಿನಲ್ಲಿ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮ | ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಈ ಸಮಾಜಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ : ಡಾ. ಶ್ರೀ ಬಸವ ಕುಮಾರ ಸ್ವಾಮೀಜಿ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಜುಲೈ. 27 :  ಇಂದಿನ ದಿನಮಾನಗಳಲ್ಲಿ ಬೇರೆ ಬೇರೆ ರೀತಿಯ ಸಡಗರ ಸಂಭ್ರಮದ ಕಾರ್ಯಕ್ರಮಗಳನ್ನು ನೋಡಿದ್ದೇನೆ.  ಆದರೆ ಇಂತಹ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ನೋಡಿದ್ದು ಅಪರೂಪ. ಹಾಗಾಗಿ ಈ ಸಂಸ್ಥೆಯ ಆಡಳಿತ ಮಂಡಳಿಯವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ವಿದ್ಯಾರ್ಥಿಗಳೇ ಸಮಯ ಅಮೂಲ್ಯವಾದದ್ದು ಇದರ ಬಗ್ಗೆ ಎಚ್ಚರವಿರಲಿ ಎಂದು ಹೇಳಿದರು. ಇಂದಿನ ವಿಜ್ಞಾನ ಯುಗದಲ್ಲಿ ತಾವೆಲ್ಲರೂ ಉತ್ತಮ ಸಾಧನೆಯನ್ನು ಮಾಡಿ ಈ ಸಮಾಜಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಈ ನೆಲದ ಸಂಪತ್ತಾಗಿ ನಿರ್ಮಾಣವಾಗಬೇಕು ಎಂದು ಎಸ್‌.ಜೆ.ಎಂ‌. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಶ್ರೀ ಬಸವ ಕುಮಾರ ಸ್ವಾಮೀಜಿ ಹೇಳಿದರು.

ಅವರು ನಗರದ ಹೊರವಲಯದ ಎಸ್‌. ಆರ್‌. ಎಸ್. ಪಿಯು ಕಾಲೇಜಿನ ಶ್ರೀ ಅನಂತಕೃಷ್ಣ ವೇದಿಕೆಯಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ   “ಸಾಧಕರೊಂದಿಗೆ ಸಂವಾದ”2024ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಿತ್ರದುರ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಧರ್ಮೇಂದ್ರ ಕುಮಾರ್‌ ಮೀನಾ ಅವರು ಮಾತನಾಡಿ  ವಿಜ್ಞಾನ ವಿಭಾಗದಲ್ಲಿ ಸಾಕಷ್ಟು ವೈದ್ಯಕೀಯ, ಐಐಟಿ, ಎನ್‌ಐಟಿಗಳಲ್ಲಿ ಅವಕಾಶಗಳಿವೆ. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉತ್ತಮ ಸಾಧನೆಯನ್ನು ಮಾಡಿ ತಂದೆ-ತಾಯಿಗಳ ಕನಸನ್ನು ಈಡೇರಿಸಬೇಕು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸತೀಶ್‌ ನಾಯ್ಕ್‌ ಎಸ್‌ ಜಿ, ಪದವಿಪೂರ್ವ ಶಿಕ್ಷಣ ಎನ್ನುವುದು ಎರಡಕ್ಷಗಳ ಅಧ್ಯಯನ ಎನ್ನುವುದಕ್ಕಿಂತ  ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನನ್ನ ಪರಿಶ್ರಮ ಹೇಗಿದೆ ಎಂಬುದನ್ನು ಪ್ರತಿನಿತ್ಯ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ಸಾಧಿಸಬೇಕು ಎಂದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿಯವರು, ಪ್ರತಿವರ್ಷ ಸಾಧಕರೊಂದಿಗೆ ಸಂವಾದ ಕಾರ‍್ಯಕ್ರಮವನ್ನು ಆಯೋಜಿಸುವ ಉದ್ದೇಶ ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲೆಂಬ ಮಹದಾಸೆ. ನಿಮ್ಮ ಜೀವನದಲ್ಲಿ ಪಿಯುಸಿ ತುಂಬಾ ಮಹತ್ವದ ಘಟ್ಟ.  ಹಾಗಾಗಿ ಎಚ್ಚರಿಕೆ, ಶ್ರದ್ಧೆ ಹಾಗೂ ನಿರಂತರವಾದ ಅಧ್ಯಯನ ಬಹಳ ಮುಖ್ಯ.  ಈ ಸ್ಪರ್ಧಾತ್ಮಕ ಜಗತ್ತನ್ನು ಅರಿತಿರುವ ನಾನು ಮುಂದಿನ ದಿನಗಳಲ್ಲಿ ಕೆಎಎಸ್‌, ಐಎಎಸ್‌, ಐಪಿಎಸ್‌ ಆಕಾಂಕ್ಷಿಗಳಿದ್ದರೆ ಅವರಿಗೆ ಅಧ್ಯಯನಕ್ಕೆ ಪೂರಕವಾದ ವಾತರವಣವನ್ನು ಕಲ್ಪಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ 2024ನೇ ಸಾಲಿನ ನೀಟ್‌, ಜೆಇಇ ಹಾಗೂ ಬರ‍್ಡ್‌ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ  ಕು.ಎನ್‌ ಮದನ್‌,  ಕು.ಪ್ರಣತಿ ಹೆಚ್‌ ವೈ,, ಕು. ಸಂಜಯ್‌ ಜಿ, ಕು.ಸೃಜನ್‌ ಪಿ ಟಿ, ಕು.ನೇಹಾ ಎಸ್‌ ಕು.ಗೀತಾ ಟಿ, ಹಾಗೂ ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕಗಳಿಸಿದ ಒಟ್ಟು 68 ವಿದ್ಯರ‍್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಬಿ. ಎಲ್‌. ಅಮೋಘ್‌, ಆಡಿಳಿತಾಧಿಕಾರಿಗಳಾದ ಡಾ.ರವಿ ಟಿ ಎಸ್‌, ಉಪನ್ಯಾಸಕರು, ಬೊಧಕೇತರ ಸಿಬ್ಬಂದಿ ಹಾಗೂ ವಿದ್ಯರ‍್ಥಿಗಳು ಹಾಜರಿದ್ದರು.  ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬುಕ್ ಮೈ ಶೋ ನಲ್ಲಿ 24ಘಂಟೆಗಳಲ್ಲಿ ಅತಿ ಹೆಚ್ಚು ಟಿಕೇಟ್ ಬುಕ್ ಆದ ಮೊದಲ ಸಿನಿಮಾ ARM’

  ಬೆಂಗಳೂರು: ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್‌ ಮೂವೀಸ್ ಬ್ಯಾನರ್‌ನಲ್ಲಿ ಡಾ. ಜಕರಿಯಾ ಥಾಮಸ್ ಎಆರ್‌ಎಂ ಸಿನಿಮಾವನ್ನು ನಿರ್ಮಿಸಿದ ARM ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿದೆ. ಬಿಡುಗಡೆಯಾದ 4

ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಲ್ಲಿ ನೇರ ನೇಮಕಾತಿ ಆರಂಭ..!

  ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 47 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಸಂಗ್ರಹಣೆ ಸಲಹೆಗಾರ, ಪರಿಸರ ಸಲಹೆಗಾರ, ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು

ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ : ರಾಜ್ಯಾಧ್ಯಕ್ಷರ ಮೇಲೆ ಕಿಡಿಕಾರಿದ ರಮೇಶ್ ಜಾರಕಿಹೊಳಿ

  ಬೆಳಗಾವಿ: ಯಡಿಯೂರಪ್ಪ ಅವರಿಗೆ ನಾನು ವಿರೋಧಿಯಲ್ಲ. ಯಡಿಯೂರಪ್ಪ ಅವರು ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ ವಿಜಯೇಂದ್ರ ನಮ್ಮ‌ ಪಕ್ಷದ ನಾಯಕನಲ್ಲ. ಬಿಜೆಪಿಯಲ್ಲಿಯೇ ಭ್ರಷ್ಟ

error: Content is protected !!