ಬೆಂಗಳೂರು: ಕೊರೊನಾ ವೈರಸ್ ಪ್ರಮಾಣ ತಗ್ಗಿದೆ. ಹೀಗಾಗಿ ಶಾಲೆಗಳೆಲ್ಲಾ ಪೂರ್ಣಪ್ರಮಾಣದಲ್ಲಿ ಆರಂಭವಾಗಿವೆ. ಆದ್ರೆ ಒಂದಷ್ಟು ಕಂಡಿಷನ್ಸ್ ಅಪ್ಲೈ ಮಾಡಿದೆ ಸರ್ಕಾರ. ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ, ಎರಡು ಡೋಸ್ ವ್ಯಾಕ್ಸಿನ್, ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಹೀಗೆ ಹಲವು ಷರತ್ತುಗಳನ್ನ ಹಾಕಿದೆ.
ಮಕ್ಕಳಲ್ಲಿ ಕೊರೊನಾ ಕಂಡುಬಂದ್ರೆ ಇಡೀ ಶಾಲೆ ಸ್ಯಾನಿಟೈಸ್ ಮಾಡಿಸಲಾಗುವುದು. ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ತರಗತಿಗಳು ನಡೆಯುತ್ತವೆ. ಶನಿವಾರ ಮಾತ್ರ ಬೆಳಗ್ಗೆ 8ರಿಂದ 11.40ರವರೆಗೆ ತರಗತಿಗಳು ಇರುತ್ತವೆ. ಶಿಕ್ಷಕರು ಮತ್ತು ಮಕ್ಕಳಿಗೆ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಶಿಕ್ಷಕರು 2 ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಫೇಸ್ ಶೀಲ್ಡ್ ಸಹ ಕಡ್ಡಾಯಗೊಳಿಸಲಾಗಿದೆ.
ಹೀಗಿರುವಾಗ ಶಾಲೆಯಲ್ಲಿ ಪಠ್ಯಗಳ ಪೂರ್ಣ ಪ್ರಮಾಣದಲ್ಲಿ ತರಗತಿಗಳು ನಡೆಯುತ್ತವಾ ಎಂಬ ಪ್ರಶ್ನೆಗಳು ಪೋಷಕರದ್ದಾಗಿದೆ. ಈ ಬಗ್ಗೆ ಮಾತನಾಡಿರುವ ಸಚಿವ ನಾಗೇಶ್, ಗಣಿತ ಮತ್ತು ವಿಜ್ಞಾನ ತರಗತಿಗಳು ಮಾತ್ರ 100% ಪೂರ್ಣ ಪ್ರಮಾಣದಲ್ಲಿ ನಡೆಯುತ್ತವೆ. ಉಳಿದ ಸಬ್ಜೆಕ್ಟ್ ಗಳು ಪೂರ್ಣ ಪ್ರಮಾಣದಲ್ಲಿ ನಡೆಯಲು ಒತ್ತು ನೀಡ್ತಿಲ್ಲ ಎಂದಿದ್ದಾರೆ.
ಕೊರೊನಾ ಕಾಣಿಸಿಕೊಂಡಾಗಿನಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ. ಆನ್ಲೈನ್ ಕ್ಲಾಸ್ ನಲ್ಲೂ ಪೂರ್ಣ ಪ್ರಮಾಣದಲ್ಲಿ ಪಠ್ಯಗಳ ಮುಗಿಯುತ್ತಿರಲಿಲ್ಲ. ಈಗಿನ್ನು ಶಾಲೆಗಳು ಆರಂಭವಾಗುತ್ತಿರುವ ಕಾರಣ ಅದು ಸಾಧ್ಯವಾಗುತ್ತಿಲ್ಲ. ಈ ಎರಡು ಸಬ್ಜೆಕ್ಟ್ ಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಗಮನ ಹರಿಸಲಿಲ್ಲವಾದರೇ ಮುಂದಿನ ತರಗತಿಗಳಿಗೆ ತೊಂದರೆಯಾಗುತ್ತೆ ಎಂಬ ಅಭಿಪ್ರಾಯ ಅವರದ್ದು.