ಬೆಂಗಳೂರು: ಇಂದು ದುನಿಯಾ ವಿಜಿ ಅವರ ತಂದೆ ನಿಧನರಾಗಿದ್ದಾರೆ. ಕಳೆದ ನಾಲ್ಕು ತಿಂಗಳ ಅಂತರದಲ್ಲೇ ದುನಿಯಾ ವಿಜಿ ತನ್ನ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡಿದ್ದಾರೆ. ದುನಿಯಾ ವಿಜಿ ಅವರ ತಾಯಿ ಇತ್ತೀಚೆಗಷ್ಟೇ ನಿಧನರಾಗಿದ್ದರು.
ದುನಿಯಾ ವಿಜಯ್ ಅವರ ತಂದೆಗೆ 81 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಇಂದು ಅಗಲಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿದ್ದ ತಂದೆಯವರನ್ನು ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ವಿಜಿ ಅವರ ತಂದೆ ರುದ್ರಪ್ಪ ಅವರ ನಿಧನದಿಂದ ವಿಜಯ್ ಕುಟುಂಬಸ್ಥರು ತೀವ್ರ ದುಃಖದಲ್ಲಿದ್ದಾರೆ. ಚಿತ್ರರಂಗದವರು, ಆತ್ಮೀಯರು ವಿಜಿ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಇನ್ನು ದುನಿಯಾ ವಿಜಯ್ ಅಪ್ಪ ಅಮ್ಮ ಇಬ್ಬರು ಕೊರೊನಾಗೆ ತುತ್ತಾಗಿದ್ದಾಗ ವಿಜಿ ಮುಂದೆ ನಿಂತು ಅವರ ಸೇವೆ ಮಾಡಿ, ಕೊರೊನಾದಿಂದ ಅವರನ್ನ ಉಳಿಸಿಕೊಂಡು ಬಂದಿದ್ದರು. ಆದ್ರೆ ವಿಧಿ ಬಹಳ ಬೇಗ ಅವರನ್ನ ಕರೆದುಕೊಂಡು ಬಿಟ್ಟಿದೆ.