ಯಾದಗಿರಿ: ಹಾಸ್ಟೇಲ್ ನಲ್ಲಿ ಅಡುಗೆ ಮಾಡುವಾಗ ಎಚ್ಚರ ವಹಿಸಬೇಕಾಗುತ್ತದೆ. ಸ್ವಲ್ಪ ಯಾಮಾರಿದ್ರು ವಿದ್ಯಾರ್ಥಿಗಳ ಪ್ರಾಣಕ್ಕೆ ಕುತ್ತು ಬರುತ್ತೆ. ಇದೀಗ ಅಂತದ್ದೇ ಘಟನೆಯೊಂದು ನಡೆದಿದೆ.
ತಾಲೂಕಿನ ಅಬ್ಬೆತುಮಕೂರಿನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಉಪಹಾರಕ್ಕೆಂದು ಉಪ್ಪಿಟ್ಟು ಮಾಡಲಾಗಿತ್ತು. ಆ ಉಪ್ಪಿಟ್ಟು ತಿಂದು 56 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಎಂದಿನಂತೆ ಮಕ್ಕಳೆಲ್ಲಾ ತಿಂಡಿ ಸೇವಿಸಿದ್ದಾರೆ. ಆ ಬಳಿಕ ಉಪ್ಪಿಟ್ಟಿನಲ್ಲಿ ಹಾವಿನ ಕಳೆ ಬರಹ ಪತ್ತೆಯಾಗಿದೆ. ಹಾವಿನ ಮರಿ ಸತ್ತಿದ್ದನ್ನು ಕಂಡು ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಅಸ್ವಸ್ಥಗೊಂಡ ಮಕ್ಕಳನ್ನ ತಕ್ಷಣ ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಆನಂತರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ.