ಪ್ರೇಮಿಗಳ ನಡುವೆ ಮದುವೆ ವಿಚಾರವೇ ಪ್ರಾಣಕ್ಕೆ ಕುತ್ತು ತಂದೀತಾ..? ಶಿವಮೊಗ್ಗದಲ್ಲೊಂದು ದುರಂತ ಅಂತ್ಯ..!

suddionenews
1 Min Read

ಶಿವಮೊಗ್ಗ: ಅವರಿಬ್ಬರು ಮನಸ್ಸಾರೆ ಒಪ್ಪಿಯೇ ಪ್ರೀತಿ ಮಾಡುತ್ತಿದ್ದರು. ಆದರೆ ಮದುವೆ ಎಂಬ ವಿಚಾರ ಮುಗ್ಧ ಪ್ರೀತಿಯೇ ಅಂತ್ಯ ಕಂಡಿದೆ. ಶಿವಮೊಗ್ಗದಲ್ಲಿ ಪ್ರಿಯತಮೆ ಸಾವನ್ನಪ್ಪಿದ್ರೆ, ಪ್ರಿಯತಮ ಜೈಲಿಗೆ ಸೇರಿದ್ದಾನೆ.

ಜುಲೈ 2ರಂದು ಯುವತಿಯೊಬ್ಬಳು ನಾಪತ್ತೆಯಾಗಿದ್ದರ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವತಿಯ ತಾಯಿಗೆ ಆಕೆ ಲವ್ ಮಾಡುತ್ತಿದ್ದ ಹುಡುಗ ಸೃಜನ್ ಗೆ ಕಾಲ್ ಮಾಡಿ ಮಗಳ ಬಗ್ಗೆ ವಿಚಾರಿಸಿದ್ದರು. ಆದರೆ ಸೃಜನ್, ಮಧ್ಯಾಹ್ನ ಸಿಕ್ಕಿದ್ದಳು. ಬಸ್ ಸ್ಟಾಪ್ ಗೆ ಬಿಟ್ಟು ಬಂದೇ ಅಂತ ಹೇಳಿದ್ದ. ತಾಯಿಯ ದೂರು ದಾಖಲಿಸಿಕೊಂಡ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಜುಲೈ 21ರವರೆಗೂ ಪೊಲೀಸರಿಗೆ ಯಾವುದೇ ಸುಳಿವು ಸಿಗುವುದಿಲ್ಲ. ಬಳಿಕ ಸಿಡಿಆರ್ ತೆಗೆಸಿದ ಪೊಲೀಸರಿಗೆ, ಸೃಜನ್ ಬಗ್ಗೆ ಸುಳಿವು ಸಿಗುತ್ತದೆ. ಹೆಚ್ಚು ಸಂಪರ್ಕದಲ್ಲಿ ಇರುವುದು ತಿಳಿದು ವಿಚಾರಣೆ ನಡೆಸಿದಾಗ ಇಬ್ಬರು ಪ್ರೀತಿಸುತ್ತಿದ್ದರು ಎಂಬ ವಿಚಾರ ಬಯಲಾಗಿದೆ. ಆತನಿಂದಾನೂ ಪ್ರೀತಿಸಿದ ಸತ್ಯ ಗೊತ್ತಾಗಿದೆ.

ತನಿಖೆ ಮುಂದುವರೆಸಿದ ಬಳಿಕ ಯುವತಿಯ ಲೊಕೇಶನ್ ಶಿವಮೊಗ್ಗದ ಹೆದ್ದಾರಿಪುರದ ಬಳಿ ಎಂಡ್ ಆಗಿರುತ್ತದೆ. ಸೃಜನ್ ಕಾಲ್ ರೆಕಾರ್ಡ್ ಕೂಡ ಅದನ್ನೇ ತೋರಿಸುತ್ತಿತ್ತು. ಬಳಿಕ ಆತನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಸೃಜನ್ ಪೊಲೀಸರ ಬಳಿ ಸತ್ಯ ಬಾಯ್ಬಿಟ್ಟಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಸೃಜನ್ ಹಾಗೂ ಕೊಲೆಯಾದ ಯುವತಿ ಪ್ರೀತಿಸುತ್ತಿದ್ದರು. ಫೈನ್ಯಾನ್ಸ್ ಆಫೀಸಲ್ಲಿ ಸೃಜನ್ ಕೆಲಸ ಮಾಡುತ್ತಿದ್ದ. ಯುವತಿಯ ತಾಯಿಯೂ ಆತನ ಬಳಿ ಸಾಲ ಪಡೆದಿದ್ದಳು. ಸಾಲ ಮರುಪಾವತಿ ವೇಳೆ ಸೃಜನ್ ಗೆ ಯಿವತಿಯ ಪರಿಚಯವಾಗಿ, ಮುಂದೆ ಇಬ್ಬರು ಪ್ರೀತಿಸುವುದಕ್ಕೆ ಶುರು ಮಾಡಿದ್ದರು. ಇತ್ತಿಚೆಗೆ ಯುವತಿ ಮದುವೆ ಆಗಬೇಕೆಂದು ಹಠ ಹಿಡಿದಿದ್ದಳು. ಆದರೆ ಸೃಜನ್ ಈಗಲೇ ಅದು ಸಾಧ್ಯವಿಲ್ಲ, ಜವಾಬ್ದಾರಿ ಇದೆ ಎಂದಿದ್ದ. ಆದರೆ ಹುಡುಗಿ ಹಠದಿಂದ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯ ಆಗಿದೆ. ಆನಂದಪುರದ ರೈಲ್ವೆಟ್ರ್ಯಾಕ್‌ ಬಳಿಯ ಚರಂಡಿಗೆ ಶವವನ್ನ ಬಿಸಾಕುತ್ತಾನೆ. ಆ ನಂತರ ಏನೂ ಗೊತ್ತಿಲ್ಲದವನಂತೆ ನಾಟಕ ಆಡುತ್ತಾನೆ. ಬಳಿಕ ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ..

Share This Article
Leave a Comment

Leave a Reply

Your email address will not be published. Required fields are marked *