ಬೆಂಗಳೂರು: ನಟ ದರ್ಶನ್ ಅವರಿಗೆ ಇಂದು ಕೂಡ ಹಿನ್ನಡೆಯಾಗಿದೆ. ಕೋರ್ಟ್ ದರ್ಶನ್ ಅವರ ಮನವಿಯನ್ನು ತಿರಸ್ಕಾರ ಮಾಡಿದೆ. ಮನೆಯ ಊಟ, ಹಾಸಿಗೆ ಯಾವುದಕ್ಕೂ ಅನುಮತಿ ನೀಡಿಲ್ಲ. ಮನೆ ಊಟ, ಹಾಸಿಗೆ ನೀಡುವ ಬಗ್ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ಜೈಲೂಟದಿಂದ ದರ್ಶನ್ ಅವರಿಗೆ ಅತಿಸಾರ ಬೇಧಿ, ವಾಂತಿ ಆಗಿದೆ ಎಂದು ಕೋರ್ಟ್ ನಲ್ಲಿ ಮನೆಯ ಊಟ ಹಾಗೂ ಹಾಸಿಗೆಗಾಗಿ ಅನುಮತಿ ಕೋರಿದ್ದರು. ಇಂದು 24ನೇ ಎಸಿಎಂಎಂ ಕೋರ್ಟ್ ನಲ್ಲಿ ಈ ಸಂಬಂಧ ಅರ್ಜಿ ವಿಚಾರಣೆ ನಡೆದಿತ್ತು. ಜೈಲಿನ ಅಧಿನಿಯಮ ಪ್ರಶ್ನಿಸಿ ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಪೊಲೀಸರ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು. ಜೈಲೂಟದಿಂದ ದರ್ಶನ್ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಶೂಟಿಂಗ್ ಸಮಯದಲ್ಲಿ ಆದಂತ ಗಾಯದ ನೋವಿನ ಬಗ್ಗೆ ಮಾತ್ರ ವೈದ್ಯರು ಸಲಹೆ ನೀಡಿದ್ದಾರೆ. ಜೈಲಿನ ನಿಯಾಮಾವಳಿಯಲ್ಲಿ ಮನೆಯೂಟಕ್ಕೆ ಅವಕಾಶವಿಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ್ದರು.
ಎರಡು ಕಡೆಯಲ್ಲಿ ವಾದ ಆಲಿಸಿದ ನ್ಯಾಯಮೂರ್ತಿ ವಿಶ್ವನಾಥ್ ಸಿ.ಗೌಡರ್, ಆದೇಶ ನೀಡಿದ್ದಾರೆ. ಕೊಲೆ ಆರೋಪಿಗಳಿಗೆ ಮನೆಯ ಊಟ, ಬಟ್ಟೆ ಪಡೆಯುವ ಅವಕಾಶವಿಲ್ಲ. ಜೈಲು ನಿಯಾಮಾವಳಿ 728ರಲ್ಲಿ ಮನೆಯ ಊಟ, ಬಟ್ಟೆ ಪಡೆಯುವ ಅವಕಾಶವಿಲ್ಲ. ಹೀಗಾಗಿ ದರ್ಶನ್ ಕೊಲೆ ಆರೋಪಿ ಆಗಿರುವ ಕಾರಣ ಈ ಅವಕಾಶವನ್ನು ಕೊಡಲಾಗುವುದಿಲ್ಲ ಎಂದು ಆದೇಶ ನೀಡಿದ್ದಾರೆ.
ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಜುಲೈ 29ಕ್ಕೆ ನಿಗದಿಯಾಗಿದೆ. ದರ್ಶನ್ ಗೆ ಮನೆಯ ಊಟದ ವ್ಯವಸ್ಥೆಯ ಸೌಲಭ್ಯ ಬೇಕಿದ್ದರೆ ಹೈಕೋರ್ಟ್ ಮೊರೆ ಹೋಗಬೇಕಿದೆ. ಅವರ ಪರ ವಕೀಲರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.