ಮೈಸೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದೆ. ಅದರಲ್ಲೂ ಜಿಲ್ಲೆಯ ಚಾಮುಂಡಿ ಬೆಟ್ಟದಲ್ಲಿ ಭೂಕುಸಿತಕ್ಕೆ ಕಾರಣವಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ನಂದಿ ಮಾರ್ಗದ ಬಹುತೇಕ ರಸ್ತೆ ಕುಸಿತಗೊಂಡಿದೆ. ಇದು ನಾಲ್ಕನೇ ಬಾರಿ ಭೂಕುಸಿತವಾಗಿರುವುದು.
ಮಳೆಯಿಂದಾಗಿ ಕಳೆದ ಬಾರಿಯೂ ಇದೇ ಜಾಗದಲ್ಲಿ ಭೂಕುಸಿತ ಉಂಟಾಗಿತ್ತು. ಆ ಬಳಿಕ ರಸ್ತೆ ಸರಿ ಮಾಡಿ ಓಡಾಡಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಮತ್ತೆ ಭೂಕುಸಿತ ಉಂಟಾಗಿದೆ. ಮಳೆ ಒಂದೇ ಸಮನೆ ಬರುತ್ತಿರುವ ಕಾರಣ ದುರಸ್ತಿ ಕಾರ್ಯವೂ ಸಾಧ್ಯವಾಗ್ತಾ ಇಲ್ಲ.ಮಳೆ ನಿಲ್ಲದೆ ಹೋದರೆ ನಂದಿ ಮಾರ್ಗದ ರಸ್ತೆ ಸಂಪೂರ್ಣವಾಗಿ ಮುಚ್ಚಿ ಹೋಗುವ ಆತಂಕ ಅಲ್ಲಿನ ಸ್ಥಳೀಯರಲ್ಲಿದೆ.