ಬೆಂಗಳೂರು: ಇಂದು ಸದನದಲ್ಲಿ ಮೂಡಾ ಹಗರಣದ ವಿಚಾರ ಸಾಕಷ್ಟು ಸದ್ದು ಮಾಡಿದೆ. ಈ ವೇಳೆ ಕಂತೆ ಕಂತೆ ದಾಖಲೆಗಳನ್ನು ತಂದ ಸಚಿವ ಭೈರತಿ ಸುರೇಶ್, ಬಿಜೆಪಿಯವರು ಅನಾಚಾರ ಮಾಡಿರುವುದು ಒಂದು ಬಂಡಿ ಇದೆ ಎಂದಿದ್ದಾರೆ.
ಇದೆ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ನಮ್ಮ ಹತ್ತಿರ ದಾಖಲೆ ಇದೆ ಅಂತಾರೆ. ಸಮರ್ಥರಿದ್ದಾರೆ ಮಾಡುವುದಕ್ಕೆ. ದಿನ ಪತ್ರಿಕೆಯಲ್ಲಿ ಮೀಡಿಯಾದಲ್ಲಿ ಇದೆ ಬರ್ತಾಯಿದೆ. ಸದನ ಇರುವುದು ಯಾಕೆ ಅದನ್ನೆಲ್ಲಾ ಚರ್ಚೆ ಮಾಡುವುದಕ್ಕೆ. ಹೊಗಳುವುದಿದ್ದರೆ ಹೊಗಳಲಿ ಎಂದು ಆರ್ ಅಶೋಕ್ ಹೇಳಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಆಗಿದೆ ಎನ್ನುವುದು ಬೇಡ. ಆಡಳಿತ ಪಕ್ಷ – ವಿರೋಧ ಪಕ್ಷ ಎಲ್ಲರೂ ಸೇರಿ ಚರ್ಚೆ ಮಾಡಬೇಕು. ಇದಕ್ಕೆ ಮುಖ್ಯಮಂತ್ರಿಗಳದ್ದು ಒಪ್ಪಿಗೆ ಇದೆ ಎಂದುಕೊಳ್ಳುತ್ತೇನೆ. ಇದನ್ನೆಲ್ಲ ಮುಕ್ತವಾಗಿ ಜನರಿಗೆ ತಿಳಿಸುವ ಪ್ರಯತ್ನ ಮಾಡಿತ್ತೇವೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಇದೆ ವೇಳೆ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್, ಬಿಜೆಪಿ ಅವರು, ಜೆಡಿಎಸ್ ನವರದ್ದು ಎಲ್ಲರದ್ದು ಅಡ್ಜೆಸ್ಟಮೆಮಲಂಟ್ ಏನೆಂಬುದು ಗೊತ್ತಾಗಲಿ. ಯಾರ್ಯಾರು ಕೋಟಿಗಟ್ಟಲೆ ಲೂಟಿ ಮಾಡವ್ರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರ್ಯಾರ ಅಡ್ಜೆಸ್ಟ್ಮೆಂಟ್ ಎಷ್ಟೆಷ್ಟು ಇದೆ ಎಂಬ ಅಳತೆ ಮಾಪಕ ಬೇಕಾಗಿದೆ. ರಾಜ್ಯದ ಜನತೆಗೆ ನಾವೂ ತೋರಿಸಬೇಕಾಗಿದೆ. ಇವರೆಲ್ಲಾ ಅಡ್ಜೆಸ್ಟ್ಮೆಂಟ್ ಇದಾರಾ ಮುಂದಿನ ಸಲ ಇವರನ್ನೆಲ್ಲಾ ಮನೆಗೆ ಕಳುಹಿಸಿ, ಪ್ರಾಮಾಣಿಕರನ್ನು ಮುಂದೆ ಕರೆ ತನ್ನು ಎಂದಿದ್ದಾರೆ.
ವಿರೋಧ ಪಕ್ಷದವರು ಎಕರೆಗಟ್ಟಲೆ ತೆಗೆದುಕೊಂಡಿದ್ದಾರೆ ಸುಳ್ಳು ದಾಖಲೆ ನೀಡಿ ಎಂದು ಸಚಿವ ಭೈರತಿ ಸುರೇಶ್ ಹೇಳುತ್ತಿದ್ದಂತೆ ಅಶ್ವತ್ಥ್ ನಾರಾಯಣ್ ಹಾಗೂ ಅಶೋಕ್ ಅವರು ಅದನ್ನ ಹೊರಗೆ ತರುವುದಕ್ಕೆ ಅವಕಾಶ ಮಾಡಿಕೊಡುತ್ತೇವೆ. ಹೊರಗೆ ತರಲಿ ಎಂದು ಕಿರುಚಾಡಿದ್ದಾರೆ.