Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಿಮಗೆ ಧೈರ್ಯವಿದ್ದರೆ ಅಧಿಕೃತ ಖಾತೆಯಿಂದ ಮಾತನಾಡಿ : ಸಾನಿಯಾ ಮಿರ್ಜಾ ವಿಚಾರಕ್ಕೆ ಶಮಿ ಆಕ್ರೋಶ..!

Facebook
Twitter
Telegram
WhatsApp

 

ಟೀಂ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಹಾಗೂ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮದುವೆ ಆಗುತ್ತಾರೆ ಎಂಬ ಸುದ್ದಿ ಸಾಕಷ್ಟು ದಿನದಿಂದ ಓಡಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಂತು ಈ ವಿಚಾರದ್ದೆ ಸದ್ದು ಸುದ್ದಿ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿ ಎಷ್ಟರಮಟ್ಟಿಗೆ ನಿಜ ಎಂಬುದು ಮಾತ್ರ ಗೊತ್ತಿಲ್ಲ. ಇದೀಗ ಈ ಗಾಸಿಪ್ ಸುದ್ದಿಯ ಬಗ್ಗೆ ಮಹಮ್ಮದ್ ಶಮಿ ಬಾಯ್ಬಿಟ್ಟಿದ್ದಾರೆ, ಅಧಿಕೃತವೇ ಅಲ್ಲದವರಿಗೆ ನೀರಿಳಿಸಿದ್ದಾರೆ.

 

ವದಂತಿಗಳ ಬಗ್ಗೆ ಮೌನ ಮುರಿದಿರುವ ವೇಗಿ ಮಹಮ್ಮದ್ ಶಮಿ, ನನ್ನ ಬಗ್ಗೆ ಕೇಳಿ ಬಂದಿರುವ ಸುದ್ದಿಯೇ ವಿಚಿತ್ರವಾಗಿದೆ. ವಿಚಿತ್ರ ಅಲ್ಲದೇ ಎ ಮತ್ತೇನು ಅಲ್ಲ. ಬೇಕು ಅಂತಾನೇ ಈ ರೀತಿಯ ಸುದ್ದಿ ಮಾಡಲಾಗಿದೆ. ನೀವೂ ಫೋನ್ ಓಪನ್ ಮಾಡಿದಾಗ ನಿಮ್ಮದೇ ಫೋಟೋಗಳನ್ನು ನೋಡುತ್ತೀರಿ. ಆದರೆ ಈ ರೀತಿ ಬೇಕಾಬಿಟ್ಟಿ ಸತ್ಯವೇ ಅಲ್ಲದೇ ಇರುವ ಸುದ್ದಿಯನ್ನು ಯಾರೂ ಮಾಡಬಾರದು. ಈ ರೀತಿಯ ಫೋಟೋಗಳನ್ನು ಯಾರೂ ಹರಡಬಾರದು.

ನಿಮ್ಮ ಮೋಜಿಗಾಗಿ, ಖುಷಿಗಾಗಿ ಮೀಮ್ ಗಳನ್ನು ಮಾಡುತ್ತೀರ. ಅದನ್ನು ಒಪ್ಪುತ್ತೇನೆ. ಆದರೆ ಬೇರೆಯವರ ಜೀವನದ ಬಗ್ಗೆ ಮೀಮ್ ಗಳನ್ನು ಮಾಡುವುದಾದರೆ ಒಮ್ಮೆ ಯೋಚಿಸಿ ಮಾಡಿ. ನಿಮ್ಮದು ಅಧಿಕೃತವಾದ ಅಕೌಂಟ್ ಕೂಡ ಆಗಿರುವುದಿಲ್ಲ. ನಿಮ್ಮ ವಿಳಾಸವೂ ನಮಗೆ ಗೊತ್ತಿರಲ್ಲ. ನಿಮ್ಮಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ನಿನಗೆ ಧೈರ್ಯವೇ ಇದ್ದರೆ ಅಧಿಕೃತ ಅಕೌಂಟ್ ಅಥವಾ ಪೇಜ್ ಗಳ ಮೂಲಕ ಈ ರೀತಿಯ ಸುದ್ದಿಯನ್ನು ಹಾಕಿ. ಆಗ ನೀವೂ ನಿಂತಿರುವ ನೀರಿನ ಆಳವನ್ನು ನಾನು ಹೇಳುತ್ತೇನೆ. ಬೇರೆಯವರ ಕಾಲು ಎಳೆಯುವುದು ಸುಲಭ ಎಂದು ಗರಂ ಆಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ತಾಲ್ಲೂಕಿನ ಈ ಊರುಗಳಲ್ಲಿ ನವೆಂಬರ್ 22 ರಂದು ವಿದ್ಯುತ್ ವ್ಯತ್ಯಯ

  ಚಿತ್ರದುರ್ಗ. 21: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಗರ ವ್ಯಾಪ್ತಿಯಲ್ಲಿ 220 ಕೆ.ವಿ ಘಟಕದಲ್ಲಿ ತ್ರೆöÊಮಾಸಿಕ ನಿರ್ವಹಣೆ ಕಾರ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ವಿದ್ಯುತ್ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ

ಟಿ.ನುಲೇನೂರು ಶಂಕರಪ್ಪನವರದು ಅಪರೂಪದ ವ್ಯಕ್ತಿತ್ವ : ಬಡಗಲಪುರ ನಾಗೇಂದ್ರ

  ಚಿತ್ರದುರ್ಗ, ನವೆಂಬರ್. 21 : ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಮಧ್ಯಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರ್ಕಾರ ಉಪೇಕ್ಷೆ ಮಾಡಿರುವುದ ರೈತ ಸಂಘ ಗಂಭೀರವಾಗಿ ಪರಿಣಿಸಿದೆ. ಭದ್ರಾ ಮೇಲ್ದಂಡೆ ಕಾಮಗಾರಿಗೆ ಅನುದಾನ ಬಿಡುಗಡೆಗೆ ಆಗ್ರಹಿಸಿ

ಚಿತ್ರದುರ್ಗ | ಬಾಪೂಜಿ ಶಾಲೆಯಲ್ಲಿ ನೆರವೇರಿದ ಸಂಭ್ರಮದ ಕನ್ನಡ ರಾಜ್ಯೋತ್ಸವ

  ಸುದ್ದಿಒನ್, ಚಿತ್ರದುರ್ಗ, ನವೆಂಬರ್. 21 : ನಗರದ ಪಿಳೇಕೆರನಹಳ್ಳಿಯ ಬಾಪೂಜಿ ಶಾಲಾ ಆವರಣದಲ್ಲಿ ಬುಧವಾರ ಸಂಭ್ರಮದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ಕಲರವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನಿವೃತ ಮುಖ್ಯೋಪಾಧ್ಯಾಯ ಹುರುಳಿ ಬಸವರಾಜ

error: Content is protected !!