ಬೆಂಗಳೂರು: ನಿನ್ನೆಯೆಲ್ಲಾ ಸರ್ಕಾರಿ ರಜೆಯಲ್ಲಿದ್ದ ಸಚಿವರು, ಶಾಸಕರು ಇಂದು ಅಧಿವೇಶನ ಇರುವುದನ್ನೇ ಮರೆತು ಹೋಗಿದ್ದಾರಾ ಅಂತ. ಆಡಳಿತ ಪಕ್ಷದ ನಾಯಕರು ಅಧಿವೇಶನಕ್ಕೆ ಬಾರದೆ ಇದ್ದ ಕಾರಣ ವಿಪಕ್ಷ ನಾಯಕರು ಸದನದಲ್ಲಿ ಸದ್ದು ಗದ್ದಲ ಮಾಡಿದ್ದಾರೆ. ಆರ್.ಅಶೋಕ್ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಭಾಧ್ಯಕ್ಷರೆ ಅಧಿವೇಶನಕ್ಕಾಗಿ ಕೋಟಿ ಕೋಟಿ ಖರ್ಚು ಮಾಡಿದ್ದೀರಿ. ತಿಂಡಿ-ಊಟದ ವ್ಯವಸ್ಥೆ ಮಾಡಿದ್ದೀರಿ. ಆದರೆ ಆಡಳಿತ ಪಕ್ಷದ ನಾಯಕರುಗಳೇ ಬಂದಿಲ್ಲವಲ್ಲ. ಸಭಾಧ್ಯಕ್ಷರೇ ಈ ಥರ ಆಡಳಿತ ಪಕ್ಷದ ನಾಯಕರ ನಡೆಯಿಂದ ಬೇಸತ್ತು, ಒಂದು ಸದನ ನಡೆಯಬೇಕು ಅಂದ್ರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದೀರಿ. ಇವರಿಗೆ ಏನು ದಾಡಿಯಾಗಿದೆ. ದಯವಿಟ್ಟು ಈ ರೀತಿಯ ಬೇಜಾಬ್ದಾರಿ ಹೇಳಿಕೆಯನ್ನು ನೀಡಬೇಡಿ. ನಾವೂ ಪ್ರತಿಭಟನೆ ಮಾಡಿ ಹೊರಗೆ ಹೋಗ್ತಾ ಇದ್ದೀವಿ ಎಂದು ಧಿಕ್ಕಾರ ಕೂಗುತ್ತಾ ವಿಪಕ್ಷ ನಾಯಕರು ಸದನದಿಂದ ಹೊರ ನಡೆದಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಧಿಕ್ಕಾರ ಧಿಕ್ಕಾರ ಅಂತ ಕೂಗುತ್ತಾ ಹೊರ ನಡೆದಿದ್ದಾರೆ. ಸಚಿವರಿಗೂ ಧಿಕ್ಕಾರ ಕೂಗಿ ಹೊರ ನಡೆದಿದ್ದಾರೆ.
ಅತ್ತ ಯುಟಿ ಖಾದರ್ ಅವರು ತಡೆಯುವುದಕ್ಕೆ ಪ್ರಯತ್ನ ಮಾಡಿದರು. ಅತ್ತ ಹಾಜರಾಗಿದ್ದ ಸಚಿವರು ಅವರಿಗೆ ಸದನ ನಡೆಸುವುದು ಇಷ್ಟವಿಲ್ಲ. ಸಭಾಧ್ಯಕ್ಷರೇ ನೀವೂ ಪ್ರಶ್ನೋತ್ತರ ಪ್ರಾರಂಭ ಮಾಡಿ ಎಂದಿದ್ದಾರೆ. ಇಂದು ನಡೆಯಬೇಕಿದ್ದ ಪ್ರಶ್ನೊತ್ತರ ಚಟುವಟಿಕೆಯನ್ನು ಕೇಳಿಸಿಕೊಳ್ಳದೆ ವಿಪಕ್ಷ ನಾಯಕರು ಹೊರನಡೆದರು.
ಈ ವೇಳೆ ಯುಟಿ ಖಾದರ್ ಕೂಡ ಆಡಳಿತ ಪಕ್ಷದ ನಾಯಕರಿಗೆ ಕ್ಲಾಸ್ ತೆಗೆದುಕೊಂಡರು. ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ ಎಂದರೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸದನಕ್ಕೆ ಬಾರದೆ ಎಲ್ಲಿ ಹೋದರು ಎಂದು ಪ್ರಶ್ನಿಸಿದ್ದಾರೆ.