ಬಿಸಿಸಿಐ ಹಾಗೂ ಗೌತಮ್ ಗಂಭೀರ್ ನಡುವೆ ಆರಂಭದಲ್ಲಿಯೇ ಭಿನ್ನಾಭಿಪ್ರಾಯಗಳು ಶುರುವಾಗಿದ್ದಾವೆ. ರಾಹುಲ್ ದ್ರಾವಿಡ್ ಬಳಿಕ ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಹುದ್ದೆ ಅಲಂಕರಿಸಿದ್ದಾರೆ. ಆದರೆ ಹುದ್ದೆ ಅಲಂಕರಿಸುವುದಕ್ಕೂ ಮುನ್ನವೇ ಒಂದಷ್ಟು ಡಿಮ್ಯಾಂಡ್ ಗಳನ್ನ ಇಟ್ಟಿದ್ದರು ಗೌತಮಗ ಗಂಭೀರ್. ಬಿಸಿಸಿಐ ಕೂಡ ಅದಕ್ಕೆ ಓಕೆ ಎಂದಿತ್ತು. ಆದರೆ ಅದ್ಯಾಕೋಈಗ ಆರಂಭದಲ್ಲಿಯೇ ಇಬ್ಬರ ನಡುವೆ ಕಿರಿಕ್ ಆಗುವಂತೆ ಕಾಣಿಸುತ್ತಿದೆ.
ಮುಖ್ಯ ಕೋಚ್ ಹುದ್ದೆ ಸ್ವೀಕರಿಸುವುದಕ್ಕೂ ಮುನ್ನವೇ ಗೌತಮ್ ಗಂಭೀರ್ ಸಪೋರ್ಟಿಂಗ್ ಸ್ಟಾಫ್ ಗಳ ಬಗ್ಗೆ ಬೇಡಿಕೆ ಇಟ್ಟಿದ್ದರು. ಆದರೆ ಈಗ ಬಿಸಿಸಿಐ ಆರಂಭದಲ್ಲಿಯೇ ಅದನ್ನು ತಿರಸ್ಕಾರ ಮಾಡಿದೆ. ಸಹಾಯಕ ಕೋಚ್ ಗಳಲ್ಲಿ ಬಿಸಿಸಿಐ ಅಭಿಷೇಕ್ ನಾಯರ್ ಅವರನ್ನು ಮಾತ್ರ ನೀಡಲು ಮಾತ್ರ ಒಪ್ಪಿದೆ. ಇನ್ನುಳಿದಂತೆ ನೀಡಿದ್ದ ಲೀಸ್ಟ್ ನಲ್ಲಿ ಎಲ್ಲರನ್ನು ರಿಜೆಕ್ಟ್ ಮಾಡಿದೆ.
ಗೌತಮ್ ಗಂಭೀರ್ ತಮ್ಮ ಪಟ್ಟಿಯಲ್ಲಿ ಆರ್.ವಿನಯ್ ಕುಮಾರ್ ಹಾಗೂ ಲಕ್ಷ್ಮೀಪತಿ ಬಾಲಾಜಿ ಅವರನ್ನು ಕೋಚ್ ಸಹಾಯಕರಾಗಿ ಬೇಕೆಂದು ಡಿಮ್ಯಾಂಡ್ ಇಟ್ಟಿದ್ದರು. ಜೊತೆಗೆ ಫೀಲ್ಡಿಂಗ್ ಕೋಚ್ ಆಗಿ ರಯಾನ ಟೆನ್ ಡೋಸ್ಟೇಟ್ ಅವರ ಪ್ರಸ್ತಾಪ ಕೂಡ ಇಟ್ಟಿದ್ದರು. ಅದರ ಜೊತೆಗೆ ದಕ್ಷಿಣ ಆಫ್ರಿಕಾದ ಮಾರ್ನೆ ಮೊರ್ಕೆಲ್ ಅವರನ್ನು ಸಂಭಾವ್ಯ ಬೌಲಿಂಗ್ ಕೋಚ್ ಆಗಿ ಮಾಡಬೇಕೆಂದು ಮನವಿ ಮಾಡಿದ್ದರು. ಆದರೆ ಬಿಸಿಸಿಐ ಗೌತಮ್ ಗಂಭೀರ್ ಅವರು ನೀಡಿದ್ದ ಮನವಿ ಪಟ್ಟಿಯಲ್ಲಿ ಎಲ್ಲರನ್ನು ತಿರಸ್ಕಾರ ಮಾಡಿದ್ದಾರೆ. ಹೀಗಾಗಿ ಆರಂಭದಲ್ಲಿಯೇ ಗೌತಮ್‌ಗಂಭೀರ್ ಅವರಿಗೆ ಅಡೆತಡೆ ಬಂದಿದೆ. ಇದೆಲ್ಲವನ್ನು ಮೆಟ್ಟಿನಿಂತು, ಗಂಭೀರ್ ತಮ್ಮ ಸಾರಥ್ಯದಲ್ಲಿ ತಂಡವನ್ನು ಗೆಲ್ಲಿಸಬೇಕಿದೆ.