Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯದಲ್ಲಿ ಮಳೆ ಮುಂದುವರಿಕೆ : ಯಾವೆಲ್ಲಾ ಪ್ರವಾಸಿ ತಾಣಗಳಲ್ಲಿ ಜನರಿಗೆ ನಿಷೇಧ ಹೇರಲಾಗಿದೆ ಗೊತ್ತಾ..?

Facebook
Twitter
Telegram
WhatsApp

ಮಳೆಗಾಲ ಬಂತು ಅಂದ್ರೆ ಪ್ರಕೃತಿಯನ್ನ ನೋಡುವುದೇ ಚೆಂದ. ಎಲ್ಲಾ ಕಡೆ ಹಸಿರು ತುಂಬಿರುತ್ತೆ, ಮೋಡಗಳು ಭೂಮಿಗೆ ತಾಗಿರುವಂತೆ ಫೀಲ್ ಆಗುತ್ತೆ, ಅಚ್ಚ ಹಸಿರಿನ ಎಲೆಗಳ ಮೇಲೆ ನೀರಿನ ಹನಿ ಹಾಗೆ ಇರುತ್ತದೆ. ಒಂದ ಎರಡಾ ಪ್ರಕೃತಿ ಸೌಂದರ್ಯ ಕಾಣುವ ರೀತಿ. ಅದರಲ್ಲೂ ಪ್ರವಾಸಿ ಪ್ರಿಯರಿಗೆ ಈ ವಾತಾವರಣ ಹೇಳಿ ಮಾಡಿಸಿದಂತೆ ಇರುತ್ತದೆ. ಮಳೆಗಾಲ ಎಂದಾಕ್ಷಣಾ ಅವರಿಗೆಲ್ಲ ನೆನಪಾಗುವುದೇ ಪ್ರವಾಸಿ ತಾಣಗಳು. ಅದರಲ್ಲೂ ಚಿಕ್ಕಮಗಳೂರು ಎಂದರೆ ಹೊರಟು ಬಿಡುವವರೇ ಜಾಸ್ತಿ.

ಆದರೆ ಈ ಮಳೆಯಲ್ಲಿ ಕೆಲವೊಂದು ಸ್ಥಳಗಳಿಗೆ ಹೋಗುವುದು ಅಪಾಯಕಾರಿ. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಬೆಂಬಿಡದೆ ಸುರಿಯುತ್ತಿದೆ. ಇನ್ನು ಒಂದು ವಾರಗಳ ಕಾಲ ಮಳೆ ಮುಂದುವರೆಯುತ್ತದೆ ಎಂದೇ ಹವಮಾನ ಇಲಾಖೆ ಸೂಚನೆ ನೀಡಿದೆ. ಇದೀಗ ಚಿಕ್ಕಮಗಳೂರಿನ ಹಲವು ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಚಿಕ್ಕಮಗಳೂರಿನ ಬಲ್ಲಾಳ ರಾಯನ ದುರ್ಗ, ರಾಣಿಝರಿ, ಬಂಡಾಜೆ ಫಾಲ್ಸ್ ಟ್ರಕ್ಕಿಂಗ್‌ಗೆ ನಿರ್ಬಂಧ ಹಾಕಲಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಳಗೊಂಡಿದೆ. ಪ್ರವಾಸಿಗರು ಚಾರಣದ ವೇಳೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಮೂಡಿಗೆರೆ ತಾಲೂಕಿನ ಬಲ್ಲಾಳ ರಾಯನ ದುರ್ಗ ಪ್ರವಾಸಿ ತಾಣ, ಕಳಸ ತಾಲೂಕಿನ ಬಂಡಾಜೆ ಫಾಲ್ಸ್‌ಗೆ ಕೊಪ್ಪ ವಿಭಾಗದ ಅರಣ್ಯ ಇಲಾಖೆ ಈ ಕ್ರಮಕೈಗೊಂಡಿದೆ. ಮುಂದಿನ 24 ಗಂಟೆಯಲ್ಲಿ ಬಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಓಡಾಡುವ ಜನ ಕೂಡ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಾಹನ ಸವಾರರು, ಕೆಲಸ ಕಾರ್ಯಗಳಿಗೆ ಹೋಗುವವರು ಮುಂಜಾಗ್ರತ ಕ್ರಮ ಕೈಗೊಳಗಳಬೇಕಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬುಕ್ ಮೈ ಶೋ ನಲ್ಲಿ 24ಘಂಟೆಗಳಲ್ಲಿ ಅತಿ ಹೆಚ್ಚು ಟಿಕೇಟ್ ಬುಕ್ ಆದ ಮೊದಲ ಸಿನಿಮಾ ARM’

  ಬೆಂಗಳೂರು: ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್‌ ಮೂವೀಸ್ ಬ್ಯಾನರ್‌ನಲ್ಲಿ ಡಾ. ಜಕರಿಯಾ ಥಾಮಸ್ ಎಆರ್‌ಎಂ ಸಿನಿಮಾವನ್ನು ನಿರ್ಮಿಸಿದ ARM ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿದೆ. ಬಿಡುಗಡೆಯಾದ 4

ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಲ್ಲಿ ನೇರ ನೇಮಕಾತಿ ಆರಂಭ..!

  ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 47 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಸಂಗ್ರಹಣೆ ಸಲಹೆಗಾರ, ಪರಿಸರ ಸಲಹೆಗಾರ, ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು

ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ : ರಾಜ್ಯಾಧ್ಯಕ್ಷರ ಮೇಲೆ ಕಿಡಿಕಾರಿದ ರಮೇಶ್ ಜಾರಕಿಹೊಳಿ

  ಬೆಳಗಾವಿ: ಯಡಿಯೂರಪ್ಪ ಅವರಿಗೆ ನಾನು ವಿರೋಧಿಯಲ್ಲ. ಯಡಿಯೂರಪ್ಪ ಅವರು ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ ವಿಜಯೇಂದ್ರ ನಮ್ಮ‌ ಪಕ್ಷದ ನಾಯಕನಲ್ಲ. ಬಿಜೆಪಿಯಲ್ಲಿಯೇ ಭ್ರಷ್ಟ

error: Content is protected !!