ರಾಜ್ಯದೆಲ್ಲೆಡೆ ಬೆಳಗ್ಗೆಯಿಂದಾನೇ ಜಿಟಿಜಿಟಿ ಮಳೆ..!

1 Min Read

 

 

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದಂತೆ ಮಳೆ ಸುರಿಯುತ್ತಿದೆ. ಮಲೆನಾಡು ಭಾಗ, ಕರಾವಳಿ ಭಾಗ, ಕೊಡಗು, ಮಡಿಕೇರಿ ಭಾಗದಲ್ಲಿ ಹೆಚ್ಚಾಗಿ ಮಳರಯಾಗುತ್ತಿದೆ. ಇಂದು ಬೆಳಗ್ಗೆಯಿಂದಾನೂ ರಾಜ್ಯದಲ್ಲಿ ಮೋಡ ಕವಿದ ವಾತಾವತಣದ ಜೊತೆಗೆ ಜಿಟಿಜಿಟಿ ಮಳೆಯಾಗುತ್ತಿದೆಮ ಇದರಿಂದಾಗಿ ಬೆಳಗ್ಗೆನೇ ಕೆಲಸಕ್ಕೆ ಹೋಗುವವರು ಪರದಾಟ ನಡೆಸುವಂತೆ ಆಗಿದೆ.

ಇನ್ನು ಸ್ವಲ್ಪ ದಿನಗಳ ಕಾಲ ಜಿಟಿಜಿಟಿ ಮಳೆ, ತಂಡಿಯ ವಾತಾವರಣ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ವೈಪರೀತ್ಯ ಉಂಟಾಗಿದ್ದು, ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ. ಪ್ರವಾಹದ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಒಡಿಶಾ ರಾಜ್ಯದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದಾಗಿ ಮೇಲ್ಮೈ ಗಾಳಿಯೂ ಜೋರಾಗಿ ಬೀಸುತ್ತಿದೆ. ಪೂರ್ವ ಅರಬ್ಬಿ ಸಮುದ್ರದಲ್ಲೂ ಉಂಟಾಗಿರುವ ವೈಪರೀತ್ಯಗಳು ಮತ್ತೆ ಆರಂಭಗೊಂಡಿವೆ.

ಚಿಕ್ಕಮಗಳೂರಿನಲ್ಲೂ ವ್ಯಾಪಕ ಮಳೆಯಾಗುತ್ತಿದ್ದು ಆರು ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡೊಗೆರೆ ತಾಲೂಕುಗಳಲ್ಲಿ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಬೆಳಗ್ಗೆಯಿಂದಾನೂ ಜಿಟಿಜಿಟಿ ಮಳೆಯಾಗುತ್ತಿದೆ. ನಿನ್ನೆ ಮಧ್ಯಾಹ್ನದಿಂದ ಶುರುವಾದ ಮಳೆ ನಗರದ ಎಲ್ಲಾ ಭಾಗದಲ್ಲೂ ಸುರಿದಿದೆ. ಇಂದು ಬೆಳಗ್ಗೆಯಿಂದಾನೇ ಶುರುವಾದ ಮಳೆಗೆ ಜನ ಹೈರಾಣಾಗಿದ್ದಾರೆ. ಒಮ್ಮೊಮ್ಮೆ ಜಿಟಿಜಿಟಿ ಮಳೆ ಇದ್ದರು, ಇನ್ನೊಮ್ಮೆ ಜೋರು ಮಳೆ ಬಂದು ನಿಲ್ಲುತ್ತದೆ. ಶಾಲಾ-ಕಾಲೇಜು, ಕೆಲಸಕ್ಕೆ ತೆರಳುವವರ ಪರಿಸ್ಥಿತಿಯೇ ಕಷ್ಟಕರವಾಗಿದೆ. ಇಂದು ಸಂಜೆವರೆಗೂ ಇದೇ ತರ ಮಳೆಯಿದ್ದು, ಇನ್ನು ಒಂದು ವಾರಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನರ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *