ಅಧಿವೇಶನದ ಮೊದಲ ದಿನ : ಏನೆಲ್ಲಾ ಚರ್ಚೆ ಆಯ್ತು, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ವಗ್ವಾದ ಹೇಗಿತ್ತು..?

suddionenews
1 Min Read

ಬೆಂಗಳೂರು: ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭವಾಗಿದೆ. ವಿಧಾನಸೌಧದಲ್ಲಿ ಅಧಿವೇಶನ ನಡೆದಿದ್ದು, ಮೊದಲೇ ಸಿದ್ಧಗೊಂಡಂತೆ ವಿರೋಧ ಪಲ್ಷದ ನಾಯಕರು ಹಗರಣಗಳ ವಿಚಾರವನ್ನು ತೆಗೆದು ಚರ್ಚೆ ನಡೆಸಿದರು‌. ಆಡಳಿತ ಪಕ್ಷದ ಮೇಲೆ ಗದಾಪ್ರಹಾರ ಮಾಡಿದರು. ಇದರ ನಡುವೆ ವಿರೋಧ ಪಕ್ಷದ ನಾಯಕರಿಗೆ ಎಲ್ಲದಕ್ಕೂ ಉತ್ತರ ಕೊಡಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ರೆಡಿಯಾಗಿಯೇ ಬಂದಿದ್ದರು. ಆದರೂ ಚರ್ಚೆಗಳು ಅಷ್ಟು ಆರೋಗ್ಯಕರವಾಗಿ ನಡೆಯಲಿಲ್ಲ.

ಚರ್ಚೆಯ ವೇಳೆ ವಿಪಕ್ಷ ನಾಯಕ ಆರ್ ಅಶೋಕ್, ಚರ್ಚೆಯನ್ನು ನಾಳೆ ಮುಂದುವರೆಸುತ್ತೇನೆ ಎಂದರು. ಅದಕ್ಕೆ ಉತ್ತರವಾಗಿ ಡಿಸಿಎಂ ಡಿಕೆ ಶಿವಕುಮಾರ್ ನಾಳೆ ಯಾಕೆ..? ಇಂದೇ ಕೇಳಿ ಏನೇ ಇದ್ದರು ಅದಕ್ಕೆಲ್ಲ ಉತ್ತರಿಸಲು ನಾವೂ ತಯಾರಿದ್ದೇವೆ. ಚರ್ಚೆಯನ್ನು ಇವತ್ತೇ ಮುಗಿಸಿಬಿಡಿ ಎಂದರು. ಬಳಿಕ ಸ್ಪೀಕರ್ ಯುಟಿ ಖಾದರ್ ಮಧ್ಯ ಪ್ರವೇಶ ಮಾಡಿ, ನಾಳೆ ನಿಮಗೆ ಎಷ್ಟು ಸಮಯ ಬೇಕು ಎಂದು ಕೇಳಿದಾಗ ಅರ್ಧ ಗಂಟೆ ಎಂದಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮೂಡಾ ಹಗರಣ, ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಕುರಿತು ವಿಪಕ್ಷ ನಾಯಕರು ಆಡಳಿತ ಪಕ್ಷದ ಮೇಲೆ ಮುಗಿ ಬಿದ್ದವು. ಆರ್.ಅಶೋಕ್, ಬೆಲ್ಲದ್, ಅಶ್ವತ್ಥ್ ನಾರಾಯಣ್, ಸುನೀಲ್ ಕುಮಾರ್ ಹಗರಣಗಳ ವಿಚಾರದಲ್ಲಿ ಚರ್ಚೆ ಮಾಡಲು ಅವಕಾಶ ಕೇಳಿದರು‌ ಅಷ್ಟರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಎದ್ದು ನಿಂತು, ಯಾವುದೇ ವಿಷಯದ ಮೇಲಿನ ಚರ್ಚೆಯನ್ನು ಹಿಂತೆಗೆಯುವುದಿಲ್ಲ. ಏನೇ ಪ್ರಶ್ನೆ ಕೇಳಿದರು ಅದಕ್ಕೆ ಉತ್ತರಿಸುತ್ತೇವೆ ಎಂದರು.

ಇದೇ ವೇಳೆ ವಾಲ್ಮೀಕಿ ಹಗರಣವನ್ನು ಎಸ್ಐಟಿ ತನಿಖೆ ನಡೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳುತ್ತಿದ್ದಾಗ ಬಸನಗೌಡ ಪಾಟೀಲ್ ಯತ್ನಾಳ್, ಈ ತನಿಖೆಯನ್ನು ಸಿಬಿಐಗೆ ವಹಿಸಿ ಎಂದೇ ಒತ್ತಾಯಿಸಿದರು. ಹೀಗೆ ಅಧಿವೇಶನದ ಮೊದಲ ದಿನ ಹಗರಗಳ ವಿಚಾರವೇ ಚರ್ಚೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *