ಯಾದಗಿರಿ: ಗ್ರಾಮೀಣ ಭಾಗಗಳಲ್ಲಿ ಬಸ್ ನಲ್ಲಿ ಹೋಗುವಾಗ ಸಣ್ಣ ಪುಟ್ಟ ಸಾಕು ಪ್ರಾಣಿಗಳನ್ನು ಬಸ್ ನಲ್ಲಿ ಜೊತೆಯಲ್ಲೇ ಕರೆದುಕೊಂಡು ಹೋಗುವ ಅಭ್ಯಾಸವಿದೆ. ಆಗ ಸ್ವಲ್ಪ ಹಣವನ್ನು ನೀಡ್ತಾರೆ. ಆದ್ರೆ ತನ್ನ ಮೇಕೆ ಮರಿಗಳಿಗೂ ಫುಲ್ ಟಿಕೆಟ್ ಖರೀದಿ ಮಾಡಬೇಕಾಗಿ ಬಂದದ್ದು, ರೈತರಿಬ್ಬರನ್ನು ಆಶ್ಚರ್ಯಕ್ಕೆ ದೂಡಿದೆ.
ಸುನೀಲ್ ಹಾಗೂ ರಾಮಲಿಂಗ ಎಂಬ ರೈತರಿಬ್ಬರು, ಯಾದಗಿರಿಯಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡ್ಲಾ ಗ್ರಾಮಕ್ಕೆ ತಮ್ಮ ಮೇಕೆ ಮರಿಗಳನ್ನ ಕರೆದುಕೊಂಡು ಹೋಗುತ್ತಿದ್ದರು. ಸರ್ಕಾರಿ ಬಸ್ ನಲ್ಲಿ ಕರೆದುಕೊಂಡು ಹೋಗುವಾಗ ಕಂಡಕ್ಟರ್ ಸುನೀಲ್ ಹಾಗೂ ರಾಮಲಿಂಗ ಅವರಿಗೆ ಕೊಟ್ಟಮನತೆ ಎರಡು ಮೇಕೆ ಮರಿಗಳಿಗೂ ಟಿಕೆಟ್ ಕೊಟ್ಟಿದ್ದಾರೆ.
ಕೆಎಸ್ಆರ್ಟಿಸಿ ಬಸ್ ನಲ್ಲಿ ಸಾಕು ಪ್ರಾಣಿಗಳನ್ನು ಕರೆದುಕೊಂಡು ಹೋಗುವಾಗ ಮನುಷ್ಯರಂತೆ ಅವುಗಳಿಗೂ ಟಿಕೆಟ್ ತೆಗೆದುಕೊಳ್ಳಬೇಕಾದ ನಿಯಮವಿದೆ. ಅದರಂತೆ ಕಂಡಕ್ಟರ್ ಟಿಕೆಟ್ ನೀಡಿದ್ದಾರೆ. ಆದ್ರೆ ಇದಕ್ಕೆ ಮೇಕೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಂಡಕ್ಟರ್ ಒಪ್ಪದ ಕಾರಣ ಹಣ ಕೊಟ್ಟು ಮೇಕೆ ಮರಿಗಳನ್ನ ಜೊತೆಯಲ್ಲೇ ಕರೆದುಕೊಂಡು ಹೋಗಿದ್ದಾರೆ.