Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನ್ನಡದ ಕಾರ್ಯಗಳಿಗೆ ಸದಾ ಬದ್ಧ : ಶಾಸಕ ಕೆ.ಸಿ. ವೀರೇಂದ್ರ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಜುಲೈ.10 :ಸುವರ್ಣ ಸಂಭ್ರಮ 50 ರಥ ಯಾತ್ರೆ ಕನ್ನಡದ ಕಾರ್ಯಗಳಿಗೆ ಸದಾ ಬದ್ಧನಾಗಿದ್ದೇನೆ ಎಂದು ಶಾಸಕ ಕೆ.ಸಿ. ವೀರೇಂದ್ರಕುಮಾರ್(ಪಪ್ಪಿ) ಹೇಳಿದ್ದಾರೆ.

ಅವರು ಬುಧವಾರ ಚಿತ್ರದುರ್ಗ ನಗರದಲ್ಲಿ ಏರ್ಪಡಿಸಿದ್ದ ಸುವರ್ಣ ಸಂಭ್ರಮ ರಥ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಳೆದ ವರ್ಷ ನವಂಬರ್ 2,2023 ರಲ್ಲಿ ವಿಜಯ ನಗರ ಜಿಲ್ಲೆಯ ಹಂಪಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ರಥ ಯಾತ್ರೆಗೆ ಚಾಲನೆ ನೀಡಿದ್ದರು. ಈ ರಥವು ರಾಜ್ಯದ ಎಲ್ಲ ಜಿಲ್ಲೆಗಳ ಮೂಲಕ ಸಂಚರಿಸಲಿದೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ. ಕನ್ನಡಕ್ಕೆ ಸಮಸ್ಯೆ ಅಥವ ಸಂಕಷ್ಟ ಎದುರಾದಾಗ ಒಗ್ಗಟ್ಟಾಗಿ ಹೋರಾಡುವುದು ಎಲ್ಲರ ಕರ್ತವ್ಯವಾಗಿದೆ. ರಾಜ್ಯದಲ್ಲಿನ ಎಲ್ಲ ಅಂಗಡಿ,ಮುಂಗಟ್ಟು, ಸಂಸ್ಥೆಗಳು ಮತ್ತು ಇಲಾಖೆಗಳ ಬೋರ್ಡಗಳಲ್ಲಿ ಶೇ. 60 ರಷ್ಟು ಕನ್ನಡದಲ್ಲಿ ಇರಬೇಕು ಎಂದು ಸರಕಾರ ಆದೇಶ ಹೊರಡಿಸಿದೆ. ಇಲ್ಲಿ ವಾಸಮಾಡುತ್ತಿರುವ ಎಲ್ಲರೂ ಇದಕ್ಕೆ ಬದ್ಧರಾಗಿರಬೇಕು. ಇದಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳು ಇದರ ಬಗ್ಗೆ ಗಮನ ಹರಿಸಬೇಕು ಇದರಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತ, ನಗರಸಭೆ ಮತ್ತು ಶಾಸಕನಾಗಿ ನನ್ನ ಕರ್ತವ್ಯವೂ ಆಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ರಥವು ಕನ್ನಡ ಭಾಷೆಯ ಸಮಗ್ರತೆ, ಇತಿಹಾಸವನ್ನು ಬಿಂಬಿಸುತ್ತಿದೆ. ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳ ಪೂರ್ಣಗೊಂಡ ಅಂಗವಾಗಿ ರಥ ಯಾತ್ರೆಯು ಜಿಲ್ಲೆಯಲ್ಲಿ ಸಂಚರಿಸುತ್ತಿದೆ. ಗುರುವಾರ ನಾಯಕನಹಟ್ಟಿ, ಶುಕ್ರವಾರ ಚಳ್ಳಕೆರೆ, ಶನಿವಾರ ಹಿರಿಯೂರು ಹಾಗೂ ಭಾನುವಾರ ಹೊಸದುರ್ಗದಲ್ಲಿ ರಥಯಾತ್ರೆ ಸಂಚರಿಸಲಿದೆ.

ರಥವು ರಾಜ್ಯದ ಅಖಂಡತೆ ಮತ್ತು ಸಮಗ್ರತೆಯ ಸಂದೇಶವನ್ನು ಹರಡುತ್ತಿದೆ. ರಥ ಸಂಚರಿಸುವ ಸ್ಥಳಗಳಲ್ಲಿ ಕನ್ನಡಿಗಳು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಸ್ವಾಗತಿಸುತ್ತಿದ್ದಾರೆ ಎಂದರು. ಕನಕ ವೃತ್ತದಿಂದ ಆರಂಭವಾದ ಮೆರವಣಿಗೆ ಒನಕೆ ಓಬವ್ವ ವೃತ್ತದಲ್ಲಿ ಮುಕ್ತಾಯಗೊಂಡಿತು. ಶಾಲಾ ವಿದ್ಯಾರ್ಥಿಗಳು, ನಾನಾ ಕಲಾತಂಡಗಳು ಮೆರವಣಿಗೆಯಲ್ಲಿದ್ದವು. ಶಾಸಕ ಕೆ.ಸಿ.ವೀರೇಂದ್ರಕುಮಾರ್ ಮತ್ತು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಡೊಳ್ಳು ಬಡಿಯುವುದರ ಮೂಲಕ ಕನಕ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.

ಸಂಸದ ಗೋವಿಂದ ಕಾರಜೋಳ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ,  ತಹಸೀಲ್ದಾರ್ ನಾಗವೇಣಿ, ಆಹಾರ ಇಲಾಖೆಯ ಎಸ್.ಕೆ.ಮಲ್ಲಿಕಾರ್ಜುನ, ಬಿಇಒ ನಾಗಭೂಷಣ್, ಮ್ಯಾನೇಜರ್ ಮಂಜುಳ ಕಂದಾಯ ಅಧಿಕಾರಿ ಜಯಪ್ಪ, ಆರೋಗ್ಯಾಧಿಕಾರಿ ನಾಗರಾಜ, ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ್, ಕರುನಾಡ ವಿಜಯ ಸೇನೆ ಅಧ್ಯಕ್ಷ ಎಸ್.ಕೆ.ಶಿವಕುಮಾರ್, ಶಿಕ್ಷಣಾಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ, ವೈಶ್ಯ ಸಂಘದ ರಾಮಲಿಂಗಶೆಟ್ಟಿ ಸೇರಿದಂತೆ ನಾನಾ ಇಲಾಖೆ ಮತ್ತು ಸಂಘಸಂಸ್ಥೆಗಳ ಪದಾಧಿಕಾರಿಗಳಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

    ಸುದ್ದಿಒನ್, ಚಿತ್ರದುರ್ಗ, ನವಂಬರ್. 22 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ( ನವೆಂಬರ್. 22 ರ, ಶುಕ್ರವಾರ) ಮಾರುಕಟ್ಟೆಯಲ್ಲಿ ಧಾರಣೆ

ರೇಣುಕಾಸ್ವಾಮಿ ಶವದ ಮುಂದೆ ದರ್ಶನ್ : ಫೋಟೋ ರಿಟ್ರೀವ್..!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ತಲೆಯ ಮೇಲೆ ತೂಗು ಕತ್ತಿ ನೇತಾಡುತ್ತಿದೆ. ಅನಾರೋಗ್ಯದ ಸಮಸ್ಯೆಯಿಂದ ಒಂದೂವರೆ ತಿಂಗಳುಗಳ ಕಾಲ ಮಧ್ಯಂತರ ಜಾಮೀನು ಪಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ದರ್ಶನ್

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

error: Content is protected !!