Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

30 ವರ್ಷದಿಂದ ಸೀರೆಯನ್ನೇ ತೆಗೆದುಕೊಳ್ತಿಲ್ಲ : ಸರಳತೆಯಿಂದಾನೇ ಮತ್ತೆ ಮನಸ್ಸು ಗೆದ್ದ ಸುಧಾಮೂರ್ತಿ, ಹೇಳಿದ್ದೇನು..?

Facebook
Twitter
Telegram
WhatsApp

ಬೆಂಗಳೂರು: ಸುಧಾಮೂರ್ತಿ ಅಂದ್ರೆ ಸರಳತೆಯಿಂದಾನೇ ಯುವಕರಿಗೆ ಸ್ಪೂರ್ತಿಯಾದವರು. ಅವರ ನಡವಳಿಕೆ, ಅವರ ಮಾತುಗಳು ಎಲ್ಲರನ್ನು ಆಕರ್ಷಿಸುತ್ತದೆ. ಕೋಟ್ಯಾಧೀಶ್ವರರೇ ಆದರು ಸಿಂಪಲ್ ಆಗಿ ಇರುವುದಕ್ಕೆ ಇಷ್ಟ ಪಡುತ್ತಾರೆ. ಇದೀಗ ಕಳೆದ 30 ವರ್ಷದಿಂದ ಸೀರೆಯನ್ನೇ ಕೊಂಡುಕೊಂಡಿಲ್ಲ ಎಂಬ ಸತ್ಯವನ್ನು ಹೇಳಿದ್ದಾರೆ.

ಇತ್ತಿಚೆಗೆ ನೀಡಿದ ಸಂದರ್ಶನದಲ್ಲಿ ಹಲವು ಸ್ವಾರಸ್ಯಕರ ವಿಚಾರವನ್ನು ಹೇಳಿದ್ದಾರೆ. ‘ಒಮ್ಮೆ ಕಾಶಿಗೆ ಹೋಗಿದ್ದೆ. ನೀವೂ ತುಂಬಾ ಇಷ್ಟ ಪಡುವ ಒಂದನ್ನು ತ್ಯಜಿಸಬೇಕು ಎಂದು ಹೇಳಿದ್ದರು. ಶಾಪಿಂಗ್ ಮಾಡುವುದನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ಹೀಗಾಗಿ ಅದನ್ನು ತ್ಯಜಿಸಿ ಬಂದೆ. ಗಂಗೆಗೆ ನಾನು ಮಾತು ನೀಡಿದ್ದೇನೆ. ಈ ಜೀವಿತಾವಧಿಯಲ್ಲಿ ಶಾಪಿಂಗ್ ಮಾಡಲ್ಲ ಎಂದು. ಅಂದಿನಿಂದ ಕಳೆದ ಮೂವತ್ತು ವರ್ಷದಿಂದ ನಾನು ಸೀರೆಯನ್ನು ಕೊಂಡುಕೊಂಡಿಲ್ಲ.

 

ಸಹೋದರಿಯರು ಪ್ರತಿ ವರ್ಷ ಎರಡು ಸೀರೆಯನ್ನು ಕೊಡುತ್ತಿದ್ದರು. ಆದರೆ ಯಥೇಚ್ಛವಾಗಿ ಸೀರೆ ಸಂಗ್ರಹವಾಗುವುದಕ್ಕೆ ಶುರುವಾದ ಮೇಲೆ ಅದನ್ನು ನಿಭಾಯಿಸುವುದು ಕಷ್ಟ. ಹೀಗಾಗಿ ನನಗೆ ಇನ್ಮೇಲೆ ಉಡುಗೊರೆ ಕೊಡುವುದನ್ನು ನಿಲ್ಲಿಸಿ ಎಂದು ಹೇಳಿದೆ. ನಾನು ಸೀರೆಗಳನ್ನು ನೆಲ ಗುಡಿಸುವಂತೆ ಉಡುವುದಿಲ್ಲ. ಹೀಗಾಗಿ ಬೇಗ ಹಾಳಾಗುವುದಿಲ್ಲ. ಐವತ್ತು ವರ್ಷಗಳಿಂದ ಸೀರೆ ಉಡುತ್ತಿದ್ದೇನೆ. ಉಟ್ಟ ಮೇಲೆ ವಾಶ್ ಮಾಡಿಸಿ, ಇಸ್ತ್ರಿ ಮಾಡಿಸಿ, ಎತ್ತಿಡುತ್ತೇನೆ. ಹೀಗಾಗಿ ದೀರ್ಘ ಬಾಳಿಕೆ ಬರುತ್ತವೆ. ಮೂವತ್ತು ವರ್ಷದಿಂದ ನಾನು ಸೀರೆಗಳನ್ನೇ ತೆಗೆದುಕೊಂಡಿಲ್ಲ ಎಂದು ರಾಜ್ಯಸಭೆಯ ಸದಸ್ಯೆ ಸುಧಾಮೂರ್ತಿ ಅವರು ಹೇಳಿದ್ದಾರೆ. ಸುಧಾಮೂರ್ತಿ ಅವರ ಈ ಮಾತು ಮಹಿಳೆಯರಿಗೆ ಸ್ಪೂರ್ತಿಯಾಗಲೇಬೇಕು. ಅದರಲ್ಲೂ ಇತ್ತಿಚಿನ ದಿನಗಳಲ್ಲಿ ಬಟ್ಟೆಗಳಿಗಾಗಿಯೇ ದುಂಧು ವೆಚ್ಚ ಮಾಡುವವರು ಜಾಸ್ತಿ. ಕೋಟ್ಯಾಂತರ ರೂಪಾಯಿ ಲಾಭ ಪಡೆಯುವ ಸುಧಾಮೂರ್ತಿಯವರ ಜೀವನ ಶೈಲಿ ನಿಜಕ್ಕೂ ಸ್ಪೂರ್ತಿಯೇ ಸರಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಉತ್ತರ ಕನ್ನಡದಲ್ಲಿ ಮಂಗನಬಾವು : ಜನರಲ್ಲಿ ಹೆಚ್ಚಾಯ್ತು ಆತಂಕ..!

ಕಾರವಾರ: ರಾಜ್ಯದಲ್ಲಿ ಮಂಗನಬಾವು ಕಾಯಿಲೆ ಜನರಿಗೆ ಆತಂಕ ತಂದೊಡ್ಡಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಬೃಂದಾವನ ವಸತಿ ಬಡಾವಣೆಯಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಮಂಗನಬಾವು ಕಾಯಿಲೆಯ ಅಬ್ಬರ ಜೋರಾಗಿತ್ತು. ಇಲ್ಲಿನ 6 ರಿಂದ

ಚಿತ್ರದುರ್ಗ APMC | ಶೇಂಗಾ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಇಂದಿನ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

    ಸುದ್ದಿಒನ್, ಚಿತ್ರದುರ್ಗ, ನವಂಬರ್. 22 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ( ನವೆಂಬರ್. 22 ರ, ಶುಕ್ರವಾರ) ಮಾರುಕಟ್ಟೆಯಲ್ಲಿ ಧಾರಣೆ

ರೇಣುಕಾಸ್ವಾಮಿ ಶವದ ಮುಂದೆ ದರ್ಶನ್ : ಫೋಟೋ ರಿಟ್ರೀವ್..!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರ ತಲೆಯ ಮೇಲೆ ತೂಗು ಕತ್ತಿ ನೇತಾಡುತ್ತಿದೆ. ಅನಾರೋಗ್ಯದ ಸಮಸ್ಯೆಯಿಂದ ಒಂದೂವರೆ ತಿಂಗಳುಗಳ ಕಾಲ ಮಧ್ಯಂತರ ಜಾಮೀನು ಪಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ದರ್ಶನ್

error: Content is protected !!