ಸುದ್ದಿಒನ್, ಚಿತ್ರದುರ್ಗ, ಜುಲೈ. 05 : ನಗರದ ಪ್ರತಿಷ್ಠಿತ ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 2023-24ನೇ ಸಾಲಿನ 91 ನೇ ಸರ್ವಸದಸ್ಯರ ಸಭೆಯನ್ನು ಜುಲೈ 21 ರ ಭಾನುವಾರ ಬೆಳಗ್ಗೆ 10:00 ಘಂಟೆಗೆ ಸರಿಯಾಗಿ ಸಹಕಾರಿಯ ಅಧ್ಯಕ್ಷರಾದ ಎಂ.ಹೆಚ್.ಪ್ರಾಣೇಶ್ ರವರ ಘನ ಅಧ್ಯಕ್ಷತೆಯಲ್ಲಿ ನಗರದ ವಿ.ಪಿ.ಬಡಾವಣೆಯಲ್ಲಿರುವ ಉಮಾಪತಿ ಕಲ್ಯಾಣ ಮಂಟಪದಲ್ಲಿ ನಡೆಸಲಾಗುತ್ತದೆ.
ವಿಷಯ ಸೂಚಿ :
1.ಪ್ರಾರ್ಥನೆ
2.ಸ್ವಾಗತ ಮತ್ತು ಉದ್ಘಾಟನೆ
3.91ನೇ ಸರ್ವಸದಸ್ಯರ ಮಹಾಸಭೆಯ ನೋಟಿಸನ್ನು ಓದಿ ದಾಖಲಿಸುವುದು.
4.ಸಹಕಾರಿಯ ವಿಷಯ ಸೂಚಿ ಅನುಮೋದನೆ.
5.ಮೃತ ಸದಸ್ಯರಿಗೆ ಸಂತಾಪ ಸೂಚಿಸುವುದು
6.90ನೇ ಸರ್ವಸದಸ್ಯರ ಸಭೆಯ ನಡವಳಿಕೆಗಳನ್ನು ಓದಿ ದಾಖಲಿಸುವುದು.
7.ವಾರ್ಷಿಕ ವರದಿ.
8.ಅಧ್ಯಕ್ಷರ ಭಾಷಣ.
9.ಹಿರಿಯ ಸದಸ್ಯರಿಗೆ ಗೌರವ ಸಮರ್ಪಣೆ ಮತ್ತು ಪ್ರತಿಭಾ ಪುರಸ್ಕಾರ,ನೇತ್ರದಾನಿಗಳ ಮತ್ತು ದೇಹದಾನಿಗಳ ಕುಟುಂಬದವರಿಗೆ ಹಾಗೂ ರಕ್ತದಾನಿಗಳಿಗೆ ಪುರಸ್ಕಾರ.
10.2023-24ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಹಾಗೂ ಆಡಳಿತ ಮಂಡಳಿಯವರು ನೀಡಿದ ಅನುಪಲನಾ ವರದಿಯ ಅಂಗೀಕಾರ.
11.2023-24ನೇ ಸಾಲಿನ ಲಾಭ-ನಷ್ಟ, ಆಸ್ತಿ ಜವಾಬ್ದಾರಿ ತಃಖ್ತೆಗಳನ್ನು ಪರಿಶೀಲಿಸಿ ಅಂಗೀಕರಿಸುವುದು.
12.2023-24ನೇ ಸಾಲಿನ ಮಂಜೂರಾದ ಆಯ-ವ್ಯಯಕ್ಕೆ ಹೆಚ್ಚಾದ ಖರ್ಚಿಗೆ ಅನುಮೋದನೆ ಮತ್ತು 2025-26ನೇ ಸಾಲಿನ ನಿರೀಕ್ಷಿತ ಆಯ-ವ್ಯಯ ಪಟ್ಟಿ ಮಂಡನೆ.
13.2023-24ನೇ ಸಾಲಿನ ಲಾಭಾಂಶ ವಿಲೇವಾರಿ
14.2024-25ನೇ ಸಾಲಿನ ಶಾಸನ ಬದ್ಧ. ಲೆಕ್ಕಪರಿಶೋಧಕರು ಮತ್ತು ಆಂತರಿಕ ಲೆಕ್ಕ ಪರಿಶೋಧಕರ ನೇಮಕಾತಿ ಸಂಭಾವನೆ ನಿಗದಿಪಡಿಸುವುದು.
15.ನಿಧಿಗಳ ಬಳಕೆ ಮತ್ತು ವಿಲೀನದ ವಿಚಾರ
16.ನಿರ್ದೇಶಕರಿಗೆ ಮತ್ತು ಅವರ ಸಂಬಂಧಿಕರಿಗೆ ನೀಡಿರುವ ಸಾಲಗಳ ವಿಚಾರ
17.ಸದಸ್ಯರಿಗೆ ಕೊಡತಕ್ಕ ಡಿವಿಡೆಂಡ್ ನ್ನು ಕಾಯ್ದಿಟ್ಟ ನಿಧಿಗೆ ವರ್ಗಾಯಿಸುವ ವಿಚಾರ
18.ವಸೂಲಾಗದೆಂದು ಪರಿಗಣಿತವಾದ ಸುಸ್ತಿ ಸಾಲಗಳ ಬಗ್ಗೆ ತೀರ್ಮಾನ
19.ಸದಸ್ಯರಿಂದ ಬರಬಹುದಾದ ಸಲಹೆಗಳು
20.ಕಾರ್ಯಕಾರಿ ಸಮಿತಿಯ ಕ್ರಿಯಾ ಯೋಜನೆಗಳು
21.ಅಧ್ಯಕ್ಷರ ಅಪ್ಪಣೆ ಪಡೆದು ಬರಬಹುದಾದ ಇತರೆ ವಿಚಾರಗಳು
22.ವಂದನಾರ್ಪಣೆ.
ಸದಸ್ಯರಿಗೆ ಮಾತ್ರ : ಸದಸ್ಯರು ತಮ್ಮ ಗುರುತಿನ ಚೀಟಿ ಕಡ್ಡಾಯವಾಗಿ ತರತಕ್ಕದ್ದು ಸರ್ವ ಸದಸ್ಯರು ಚರ್ಚಿಸಬೇಕಾದ ವಿಷಯಗಳ ಬಗ್ಗೆ ಮತ್ತು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸರ್ವ ಸದಸ್ಯರ ಸಭೆಯ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿ ಲಿಖಿತ ರೂಪದಲ್ಲಿ ನೀಡತಕ್ಕದ್ದು. ಸಭೆಯಲ್ಲಿ ಇದಕ್ಕೆ ಉತ್ತರ ನೀಡಲಾಗುವುದು. ಮತ್ತು ಸಹಕಾರಿಯ ಎಲ್ಲಾ ಸದಸ್ಯರು ಸಕಾಲಕ್ಕೆ ಆಗಮಿಸಿ ಸಕ್ರಿಯವಾಗಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಆಡಳಿತ ಮಂಡಳಿಯ ಅಪ್ಪಣೆ ಮೇರೆಗೆ ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಮುಖ್ಯಕಾರ್ಯನಿರ್ವಾಹಕರಾದ ಶ್ರೀಮತಿ ಎಸ್.ಶೈಲಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ,
ಎಸ್.ಕೆ.ಪಿ.ಸೊಸೈಟಿ ರಸ್ತೆ,
ಹೊಸ ಸಂತೇ ಮೈದಾನ.
ಚಿತ್ರದುರ್ಗ-577501
ಫೋ:-7204992193