ಬೆಂಗಳೂರು: ಒಂದ ಎರಡಾ ಅಗತ್ಯ ವಸ್ತುಗಳ ಎಲ್ಲಾ ಬೆಲೆಯೂ ಗಗನಕ್ಕೇರಿದೆ. ಅದರಲ್ಲಿ ಸಿಲಿಂಡರ್ ಬೆಲೆಯೂ ಹೌದಹ. ಹಾಗೋ ಹೀಗೋ ಗ್ರಾಮೀಣ ಪ್ರದೇಶದಲ್ಲಿ ಸೌದೆ ಒಲೆ ಉರಿಸಿಕೊಂಡು ನೆಮ್ಮದಿಯಾಗಿ ಬದುಕ್ತಾ ಇದ್ರು. ಆದ್ರೆ ಇದೀಗ ಸೌದೆ ಒಲೆ ಮರೆಯಾಗಿದೆ, ಎಲ್ಲರ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಬಂದಿದೆ.
ದುಡಿಮೆ ಕಡಿಮೆ ಖರ್ಚು ವೆಚ್ಚಗಳು ಹೆವಿ. ಹೀಗಿರುವಾಗ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗ್ತಾನೆ ಇದೆ. ಈ ಬಗ್ಗೆ ರಿಯಾಕ್ಟ್ ಮಾಡಿರೋ ಸಚಿವ ಈಶ್ವರಪ್ಪ, ಸಿಲಿಂಡರ್ ಬೆಲೆ ನೋಡಿ ಜನ ಮತ ಹಾಕಲ್ಲ ಎಂದಿದ್ದಾರೆ.
ಜನ ಕೇವಲ ಅಭಿವೃದ್ಧಿ ನೋಡಿ ಮತ ಹಾಕಲ್ಲ. ಅದರ ಜೊತೆಗೆ ನಾಯಕತ್ವ, ಸಂಘಟನೆ, ಪಕ್ಷ ಸಿದ್ಧಾಂತಗಳನ್ನ ನೋಡಿ ಮತ ಹಾಕ್ತಾರೆ. ಇದರಿಂದಾಗಿಯೇ ಇಂದು ಪಾಲಿಕೆಯಲ್ಲಿ ನಾವೂ ಗೆದ್ದಿದ್ದೇವೆ. ಜಗದೀಶ್ ಶೆಟ್ಟರ್, ಬೆಲ್ಲದ, ಮುನೇನ ಕೊಪ್ಪ ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ ಇವ್ರೆಲ್ಲಾ ಸಾಮಾನ್ಯ ಕಾರ್ಯಕರ್ತರಾಗಿ ಜನರ ಹೃದಯ ಗೆದ್ದಿದ್ದಾರೆ. ಹೀಗಾಗಿಯೇ ಹುಬ್ಬಳ್ಳಿ ಧಾರವಾಡ ಜನತೆ ಅಭೂತಪೂರ್ವ ಯಶಸ್ಸು ಕೊಟ್ಟಿದ್ದಾರೆ.
ಸಿಲಿಂಡರ್ ಬೆಲೆ ಏರುತ್ತೆ ಇಳಿಯುತ್ತರ. ಜನ ಅದರ ಮೇಲೆ ನಿರ್ಣಯ ಕೈಗೊಳ್ಳಲ್ಲ. ಯಾರು ಏನೇ ಹೇಳಲಿ ಜನ ಬಿಜೆಪಿಯ ಜೊತೆಗಿದ್ದಾರೆ ಎಂದಿದ್ದಾರೆ.