Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ರಾಜ್ಯದಲ್ಲಿ ಮೊದಲ ಬಾರಿಗೆ ಕಸ ವಿಂಗಡಣೆಗೆ ನಗರಸಭೆ ವಿನೂತನ ಪ್ರಯೋಗ

Facebook
Twitter
Telegram
WhatsApp

ಚಿತ್ರದುರ್ಗ. ಜುಲೈ. 04 : ಮನೆ, ಅಂಗಡಿಗಳಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ನೀಡುವ ಕಾರ್ಡ್‌ಗಳನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಚಿತ್ರದುರ್ಗ ನಗರಸಭೆಯು ವಿತರಿಸಿದೆ.

ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ಪ್ರತಿ ಮನೆಗಳಿಗೂ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮಾಡಿ, ನಗರಸಭೆಯ ವಾಹನಗಳಿಗೆ ನೀಡುವ ಬಗ್ಗೆ “ಸ್ವಚ್ಛ ಸರ್ವೇಕ್ಷಣೆ-2024ರ ಅಂಗವಾಗಿ ಮನೆ, ಅಂಗಡಿಗಳಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ನೀಡುವ ಕಾರ್ಡ್‍ಗಳನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿತರಿಸಲಾಗಿದ್ದು, ಮೂಲದಲ್ಲಿಯೇ ಕಸ ವಿಂಗಡಿಸಿ, ಸಂಗ್ರಹಿಸುವ ವಿನೂತನ ಪ್ರಯೋಗಕ್ಕೆ ನಗರಸಭೆ ಮುಂದಾಗಿದೆ.

ಪ್ರಾಯೋಗಿಕವಾಗಿ ನಾಲ್ಕು ತಿಂಗಳ ಅವಧಿಗೆ ಮುದ್ರಿಸಿ, ಏಪ್ರಿಲ್ ಮಾಹೆಯಲ್ಲಿ ವಾರ್ಡ್ ನಂ. 9 ರಿಂದ 17 ಒಟ್ಟು 9 ವಾರ್ಡ್‍ಗಳಲ್ಲಿ ಬರುವ ಎಲ್ಲಾ ಮನೆಗಳಿಗೂ ಹಂಚಲಾಗಿರುತ್ತದೆ. ಹಾಗೂ ಈ ಕುರಿತು ಪ್ರತಿನಿತ್ಯ ಪರಿಶೀಲನೆ ನಡೆಸಿದ್ದು, ಇದನ್ನು ಇತರೆ ವಾರ್ಡ್‍ಗಳಿಗೆ ಅನ್ವಯಿಸಿಲು ಯೋಚಿಸಿ, ಮೇ ಮಾಹೆಯಲ್ಲಿ ವಾರ್ಡ್ ನಂ.5, 6, 7, 24, 25, 26, 27 ಒಟ್ಟು 7 ವಾರ್ಡ್ ಮನೆಗಳಿಗೂ ಹಂಚಿ ಒಟ್ಟು 16 ವಾರ್ಡ್‍ಗಳಿಗೆ ನಾಲ್ಕು ತಿಂಗಳ ಕಾರ್ಡ್‍ನ್ನು ಹಂಚಲಾಗಿರುತ್ತದೆ.

ಮುಂದುವರೆದು ಚಿತ್ರದುರ್ಗ ನಗರಸಭೆ ವ್ಯಾಪ್ತಿಯ 35 ವಾರ್ಡ್‍ಗಳಿಗೂ ಈ ಸೌಲಭ್ಯ ನೀಡಲು ಜುಲೈ ಮಾಹೆಯಲ್ಲಿ ಆರು ತಿಂಗಳ ಅವಧಿಗೆ ಅಂದರೆ 2024ರ ಡಿಸೆಂಬರ್ ಅಂತ್ಯದವರೆಗೆ ಕಾರ್ಡ್‍ಗಳನ್ನು ಉಳಿದ 19 ವಾರ್ಡ್‍ಗಳಿಗೆ ಅಂದರೆ ವಾರ್ಡ್ ನಂ.1, 2, 3, 4, 8, 18, 19, 20, 21, 22, 23, 28, 29, 30, 31, 32, 33, 34, 35 ವಾರ್ಡ್‍ಗಳ ಪ್ರತಿ ಮನೆಗೂ ಕಾರ್ಡ್‍ನ್ನು ವಿತರಣೆ ಮಾಡಲಾಗಿರುತ್ತದೆ.

ಸಾರ್ವಜನಿಕರು ಈ ಕಾರ್ಯಕ್ಕೆ ಸಹಕರಿಸಿ, ಪ್ರತಿನಿತ್ಯವೂ ಹಸಿ ಕಸ, ಒಣ ಕಸ ವಿಂಗಡಣೆ ಮಾಡಿ ನಗರಸಭೆಯ ವಾಹನಗಳಿಗೆ ನೀಡಿ, ತಮಗೆ ವಿತರಿಸಿರುವ ಕಾರ್ಡ್‍ಗಳಲ್ಲಿ ದಾಖಲಿಸಲು ಮನವಿ ಮಾಡಿದೆ. ಒಂದು ವೇಳೆ ನಗರಸಭೆಯ ವಾಹನ ಪ್ರತಿ ದಿನ ಅಥವಾ 2 ದಿನಕ್ಕೊಮ್ಮೆ ನಿರಂತರವಾಗಿ ಬರುತ್ತಿರುವ ಬಗ್ಗೆ ಸಹ ಈ ಕಾರ್ಡ್‍ನಲ್ಲಿ ಮನೆಯ ಮಾಲೀಕರ ಸಹಿ ಹಾಕುವುದರಿಂದ ತಿಳಿದುಬರುತ್ತದೆ. ಎರಡು-ಮೂರು ತಿಂಗಳ ಅವಧಿಯಲ್ಲಿ ಸಾರ್ವಜನಿಕರಿಗೆ ನಗರಸಭೆಯ ಸಿಬ್ಬಂದಿಗಳು ಹಾಗೂ ಆರೋಗ್ಯ ನಿರೀಕ್ಷಕರು ಅರಿವು ಮೂಡಿಸಲು ಸೂಚಿಸಲಾಗಿರುತ್ತದೆ. ಆ ನಂತರವೂ ಸಹ ಸಾರ್ವಜನಿಕರು ಕಸವನ್ನು ವಿಂಗಡಿಸಿ ನಗರಸಭೆಯ ವಾಹನಗಳಿಗೆ ನೀಡದೇ ಇದ್ದರೆ, ದಂಡ ವಿಧಿಸಲು ಚಿಂತಿಸಲಾಗಿರುತ್ತದೆ.

ಚಿತ್ರದುರ್ಗ ನಗರವು ಐತಿಹಾಸಿಕ ನಗರವಾಗಿದ್ದು, ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಪ್ರತಿ ದಿನ ಮನೆ, ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆಗೆ, ಚರಂಡಿಗೆ ಹಾಕದೇ ಹಸಿ ಕಸ, ಒಣ ಕಸವನ್ನಾಗಿ ಬೇರ್ಪಡಿಸಿ ನಗರಸಭೆಯ ವಾಹನ ಮನೆ ಬಾಗಿಲಿಗೆ ಬಂದಾಗ ನೀಡಲು ಪ್ರತಿ ನಿತ್ಯ ಕಸದ ವಾಹನಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ.

ಆದರೂ ಸಹ ಇನ್ನೂ ಪೂರ್ಣ ಪ್ರಮಾಣದಲ್ಲಿ ಹಸಿ ಕಸ, ಒಣ ಕಸ ವಿಂಗಡಿಸಿ, ನಗರಸಭೆಯ ವಾಹನಗಳಿಗೆ ನೀಡದೇ ರಸ್ತೆ, ಚರಂಡಿ ಮತ್ತು ಖಾಲಿ ನಿವೇಶನಗಳಲ್ಲಿ ಸಾರ್ವಜನಿಕರು ಎಸೆಯುತ್ತಿರುವುದು ಕಂಡುಬಂದಿರುತ್ತದೆ. ಹಸಿ ಕಸ, ಒಣ ಕಸವನ್ನಾಗಿ ವಿಂಗಡಿಸಿ, ನಗರಸಭೆಯ ವಾಹನಗಳಿಗೆ ನೀಡಿದರೆ, ಚಿತ್ರದುರ್ಗ ನಗರವನ್ನು ಸ್ವಚ್ಛ, ಸುಂದರ ನಗರವನ್ನಾಗಿ ಮಾಡಲು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರಾದ ಎಂ.ರೇಣುಕಾ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!