ಬೆಂಗಳೂರು: ದೊಡ್ಮನೆ ಕುಡಿ ಯುವ ರಾಜ್‍ಕುಮಾರ್ ಹಾಗೂ ಸೊಸೆ ಶ್ರೀದೇವಿ ಭೈರಪ್ಪ ಅವರ ಡಿವೋರ್ಸ್ ಕೇಸ್ ಅರ್ಜಿ ಇಂದು ವಿಚಾರಣೆಗೆ ಬಂದಿದೆ. ಫ್ಯಾಮಿಲಿ ಕೋರ್ಟ್ ಗೆ ಇಂದು ಇಬ್ಬರು ಹಾಜರಾಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಕಲ್ಪನಾ ಎಂ.ಎಸ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಇಂದಿನ ವಿಚಾರಣೆಯಲ್ಲಿ ಶ್ರೀದೇವಿ ಪರ ವಕೀಲರು ಆಕ್ಷೇಪಣಾ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆರಂಭದಲ್ಲಿ ವಾದ ಮಾಡಿದ ಶ್ರೀದೇವಿ ಪರ ವಕೀಲೆ ದೀಪ್ತಿ ಅವರು, ಆಕ್ಷೇಪಣಾ ಅರ್ಜಿ ಸಲ್ಲಿಕೆಯ ಬಳಿಕವೂ ವಾದ ಮಾಡುವುದಕ್ಕೆ ಅನುಮತಿ ಕೋರಿದರು. ಆದರೆ ಜಡ್ಜ್ ಇದಕ್ಕೆ ಅವಕಾಶ ಕೊಡಲಿಲ್ಲ. ವಿಚ್ಚೇದನ ಅರ್ಜಿಯ ಎಲ್ಲಾ ಪ್ರಕ್ತಿಯೆಗಳು ಮುಗಿದ ಬಳಿಕ ವಾದ ಆಲಿಸಲಾಗುತ್ತದೆ ಎಂದರು. ಜೊತೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ಫಾಲೋ ಮಾಡಬೇಕು ಎಂದರು. ಬಳಿಕ ಯುವ ರಾಜ್‍ಕುಮಾರ್ ಡಿವೋರ್ಸ್ ಕೇಸನ್ನು ಮೀಡಿಯೇಷನ್ ಗೆ ರೆಫರ್ ಮಾಡಿದ್ದು, ಮೊದಲು ಮಿಡಿಯೇಷನ್ ಕೌನ್ಸೆಲಿಂಗ್ ಮುಕ್ತಾಯವಾಗಲಿ, ನಂತರ ಆಕ್ಷೇಪಣೆಯನ್ನು ಕೈಗೆತ್ತಿಕೊಳ್ಳಯವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.
ಇದು ಕೌಟುಂಬಿಕ ಕಲಹವಾಗಿರುವುದರಿಂದ ಮೊದಲು ಕೌನ್ಸೆಲಿಂಗ್ ನಡೆಯಬೇಕಿದೆ. ಕೌನ್ಸೆಲಿಂಗ್ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕಿದೆ. ಬಳಿಕ ವಿಚ್ಚೇದನದ ಆಕ್ಷೇಪಣೆಯ ವಾದವನ್ನು ಕೇಳುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ. ಇದಕ್ಕೆ ಶ್ರೀದೇವಿ ಪರ ವಕೀಲರಿಂದಾನೂ ಸಮ್ಮತಿ ಸಿಕ್ಕಿದೆ. ಇನ್ನು ಯುವ ರಾಜ್‍ಕುಮಾರ್ ಹಾಗೂ ಶ್ರೀದೇವಿ ಡಿವೋರ್ಸ್ ಕೇಸಲ್ಲಿ ಆಗಸ್ಟ್ 23ಕ್ಕೆ ಕೌನ್ಸೆಲಿಂಗ್ ದಿನಾಂಕ ಫಿಕ್ಸ್ ಆಗಿದ್ದು, ಅಂದು ಇಬ್ಬರು ಹಾಜರಾಗಬೇಕಿದೆ. ಕೌನ್ಸೆಲಿಂಗ್ ಆಧಾರದ ಮೇಲೆ ವಿಚಾರಣೆ ನಡೆಯಲಿದೆ. ಇಬ್ಬರು ಒಪ್ಪಿದರೆ ಬೇಗ ಡಿವೋರ್ಸ್ ಸಿಗುತ್ತದೆ.