ಚಿತ್ರದುರ್ಗ ಮೂಲದ ಡಾ. ಕವಿತಾ ಬಿ.ಟಿ ಚಾಮರಾಜನಗರ ಜಿಲ್ಲೆಯ ನೂತನ ಎಸ್.ಪಿ. ಆಗಿ ನೇಮಕ

1 Min Read

ಸುದ್ದಿಒನ್, ಚಿತ್ರದುರ್ಗ ಜು. 03 : ರಾಜ್ಯ ಸರ್ಕಾರ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಇವರಲ್ಲಿ ಚಿತ್ರದುರ್ಗ ತಾಲ್ಲೂಕು ಬೊಮ್ಮೆನಹಳ್ಲಿ ಮೂಲದ  ಡಾ ಕವಿತಾ ಬಿ.ಟಿ. ಅವರನ್ನು ಚಾಮರಾಜನಗರ ಜಿಲ್ಲೆಯ ನೂತನ ಎಸ್. ಪಿ.ಆಗಿ ನೇಮಿಸಿ ಸರ್ಕಾರ ಆದೇಶಿಸಿದೆ.

ಇದಕ್ಕೂ ಮೊದಲು ಅವರು ಮೈಸೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಚಾಮರಾಜ ನಗರಕ್ಕೆ ನೂತನ ರಕ್ಷಣಾಧಿಕಾರಿಗಳಾಗಿ ನೇಮಕವಾಗಿರುವ ಡಾ.ಬಿ.ಟಿ.ಕವಿತಾ ಅವರಿಗೆ ಶ್ರೀ ಶಿವಶರಣ  ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು, ಮಾಜಿ ಸಚಿವರಾದ ಹೆಚ್.ಅಂಜನೇಯ, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ಆದಿ ಜಾಂಬವ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್ ಹಾಗೂ ಆದಿ ಜಾಂಬವ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಟಿ.ಮಂಜುನಾಥ್ ಅಭಿನಂದಿಸಿ, ಶುಭ ಕೋರಿದ್ದಾರೆ.

ತಮ್ಮ ಆಧಿಕಾರವಧಿಯಲ್ಲಿ ಉತ್ತಮವಾದ ಕೆಲಸವನ್ನು ಮಾಡಲಿ ಕಾನೂನು ಸುವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಕಾಪಾಡಿ, ನೊಂದ ಜನರಿಗೆ ನ್ಯಾಯವನ್ನು ಒದಗಿಸಲಿ ಎಂದು ಹಾರೈಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *