ಬೆಂಗಳೂರು: ಇತ್ತೀಚೆಗಷ್ಟೇ ನಮ್ಮ ರಾಜ್ಯದ ನಾನಾ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಆ ಪದ್ಮಶ್ರೀ ಪ್ರಶಸ್ತಿ ನೀಡಿದ ಮೇಲೆ ಪಡೆದವರನ್ನ ಆಯಾ ಜಿಲ್ಲೆಯವರು ಗೌರವಿಸಿದ್ದಾರೆ. ಹಾಗೇ ನಾನಾ ಇಲಾಖೆಯವರು ಪ್ರಶಸ್ತಿ ಪುರಸ್ಕೃತರಿಗೆ ಗೌತವ ಸೂಚಿಸಿದ್ದಾರೆ. ಆದ್ರೆ ಈ ರೀತಿ ಗೌರವ ಸೂಚಿಸಲು ಹೋಗಿ ಕೆಎಸ್ಆರ್ಟಿಸಿ ಯಡವಟ್ಟು ಮಾಡಿದೆ.
ಈ ಬಾರಿ ಜೋಗತಿ ಮಂಜಮ್ಮ ಅವರಿಗೂ ಪದ್ಮಶ್ರೀ ಪ್ರಶಸ್ತಿ ದೊರಕಿದೆ. ಜಾನಪದ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದಕ್ಕೆ ಜೋಗತಿ ಮಂಜಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು. ಈ ಖುಷಿಯನ್ನ ಎಲ್ಲರು ಸಂಭ್ರಮಿಸಿದ್ದರು. ಆದ್ರೆ ಈ ವಿಚಾರದಲ್ಲಿ ಕೆಎಸ್ಆರ್ಟಿಸಿ ಇಲಾಖೆ ತಮ್ಮ ಟಿಕೆಟ್ ನೀಡುವುದರಲ್ಲಿ ಯಡವಟ್ಟು ಮಾಡಿಕೊಂಡಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಅವರಿಗೆ ಗೌರವ ಸೂಚಿಸಲು ಹೋಗಿ ಕೆಎಸ್ಆರ್ಟಿಸಿ ಯಡವಟ್ಟು ಮಾಡಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ‘ಜಯನಗರ’ ಜಿಲ್ಲೆಯ ತೃತೀಯ ಲಿಂಗಿ ಮಾತಾ ಮಂಜಮ್ಮ ಜೋಗತಿಯವರಿಗೆ ಸಾರಿಗೆ ಇಲಾಖೆ ಎಂದು ಮುದ್ರಣ ಮಾಡಲಾಗಿದೆ. ಹೊಸಪೇಟೆಯಿಂದ ಸಂಡೂರು ಘಟಕಕ್ಕೆ ಹೋಗಬೇಕಾದರೆ ಪಡೆದಿರೋ ಟಿಕೆಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.