Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹುಬ್ಬಳ್ಳಿ – ಧಾರಾವಾಡ ಪೊಲೀಸ್ ಆಯುಕ್ತರ ಬದಲಾವಣೆ : ರೇಣುಕಾ ಜಾಗಕ್ಕೆ ಬಂದ್ರು ಶಶಿಕುಮಾರ್

Facebook
Twitter
Telegram
WhatsApp

ಹುಬ್ಬಳ್ಳಿ: ಕಳೆದ ಕೆಲವು ದಿನಗಳ ಹಿಂದೆ ನೇಹಾ ಕೊಲೆಯಿಂದಾಗಿ ಇಡೀ ಹುಬ್ಬಳ್ಳಿ ಮಂದಿ ಬೆಚ್ಚಿ ಬಿದ್ದರು. ಅದಾದ ಕೆಲವೇ ದಿನಗಳ ಮತ್ತೊಬ್ಬ ವಿದ್ಯಾರ್ಥಿಯನ್ನು ಅದೇ ಥರ ಕೊಲ್ಲಲಾಗಿತ್ತು. ಮೂರು ತಿಂಗಳ ಅವಧಿಯಲ್ಲಿ ಮೂರು ಕೊಲೆಗಳಾಗಿತ್ತು. ಅಲ್ಲಿನ ಕಾನೂನು ವ್ಯವಸ್ಥೆ ಸರಿ ಇಲ್ಲ ಎಂದೇ ಹುಬ್ಬಳ್ಳಿ ಜನತೆ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಇದೀಗ ಪೊಲೀಸ್ ಆಯುಕ್ತರ ಬದಲಾವಣೆಯಾಗಿದೆ. ಹೊಸದಾಗಿ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

 

ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಜ್ತರಾಗಿ ರೇಣುಕಾ ಸುಕುಮಾರ್ ಅವರು ಕಾರ್ಯ ನಿರ್ವಹಿಸುತ್ತಾ ಇದ್ದರು. ಇದೀಗ ದಿಢೀರನೇ ಅವರ ವರ್ಗಾವಣೆಯಾಗಿದೆ. ಪೊಲೀಸ್ ಆಯುಜ್ತರಾಗಿ ಶಶಿಕುಮಾರ್ ಚಾರ್ಜ್ ತೆಗೆದುಕೊಳ್ಳುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನೇಹಾ ಹೀರೇಮಠ, ಅಂಜಲಿ ಅಂಬಿಗೇರ ಕೊಲೆಯಾಗಿತ್ತು. ಕೊಲೆಯಾದ ನಂತರ ಹಲವು ಒ್ರಕರಣಗಳು ಬೆಳಕಿಗೆ ಬಂದವು. ಇದನ್ನು ವಿರೋಧಿಸಿ, ಸಂಘ ಸಂಸ್ಥೆಗಳು, ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಕೂಡ ಎಲ್ಲರಿಗೂ ಆತಂಕ ಉಂಟು ಮಾಡಿದ್ದಂತ ಕೇಸ್ ಆಗಿತ್ತು. ಈ ಬಾಂಬ್ ಬ್ಲಾಸ್ಟ್ ಗೂ ಹುಬ್ಬಳ್ಳಿಯ ನಂಟು ಇದ್ದದ್ದು ಬೆಳಕಿಗೆ ಬಂದಿತ್ತು. ಎಸ್ಐಟಿ ಅಧಿಕಾರಿಗಳು ಈ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾಗ ಏಕಕಾಲದಲ್ಲಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದರು.

ಇಷ್ಟೆಲ್ಲಾ ಅಪರಾಧ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಪೊಲೀಸ್ ಆಯುಕ್ತರ ಬದಲಾವಣೆಯಾಗಿದ್ದು, ಮಂಗಳೂರ, ಬೆಂಗಳೂರಿನಲ್ಲಿ ಹೆಸರು ಮಾಡಿರುವ ಶಶಿಕುಮಾರ್ ಅವರನ್ನು ನೇಮಕ ಮಾಡಿದ್ದಾರೆ. ಮೊದಲಿದ್ದ ರೇಣುಕಾ ಸುಕುಮಾರ್ ಅವರನ್ನು ಬೆಂಗಳೂರಿನ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಸರ್ಕಾರಿ ನೌಕರರ ಸಂಘದ ಮತದಾರರ ಪಟ್ಟಿ ಆಕ್ಷೇಪಣೆ ಸಲ್ಲಿಕೆಗೆ ಜು.10 ಕೊನೆಯ ದಿನ..!

  ಸುದ್ದಿಒನ್, ಚಿತ್ರದುರ್ಗ, ಜುಲೈ. 08 : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯದಂತೆ ಚಿತ್ರದುರ್ಗ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ 2024ರಿಂದ

ಮನೆಗೆ ಮಗನಂತಿದ್ದ.. ಮಕ್ಕಳಿಲ್ಲದ ಕೊರಗು ಅವನಿಗೆ ಕಾಡುತ್ತಿತ್ತು : ಮೃತ ಅಳಿಯನ ಬಗ್ಗೆ ಬಿಸಿ ಪಾಟೀಲ್ ಹೇಳಿದ್ದೇನು..?

ದಾವಣಗೆರೆ: ಇಂದು ಮಾಜಿ ಸಚಿವ ಬಿ.ಸಿ.ಪಾಟೀಲ್ 40 ವರ್ಷದ ಅಳಿಯ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಮೃತ ಅಳಿಯನ ಬಗ್ಗೆ ಮಾತನಾಡಿರುವ ಬಿ.ಸಿ.ಪಾಟೀಲ್, ಮನೆಗೆ ಮಗನಂತಿದ್ದ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದ ಎಂದಿದ್ದಾರೆ.

ಚಿತ್ರದುರ್ಗ | 8 ಲಕ್ಷ ಮೌಲ್ಯದ 80 ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು…!

ಸುದ್ದಿಒನ್, ಚಿತ್ರದುರ್ಗ, ಜುಲೈ.08 : ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾಗಿದ್ದ 8 ಲಕ್ಷ ರೂಪಾಯಿ ಮೌಲ್ಯದ 80 ಮೊಬೈಲ್ ಫೋನ್​ಗಳನ್ನು ಇಂದು (ಜುಲೈ. 08) ಪ್ರಾಪರ್ಟಿ ರಿಟರ್ನ್‌ ಪರೇಡ್​ನಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ನಗರದ ಜಿಲ್ಲಾ

error: Content is protected !!