ಬೆಂಗಳೂರು: ಪಾನಿಪೂರಿ, ಅದರಲ್ಲೂ ಗೋಲ್ ಗಪ್ಪ ಎಂದರೆ ಪ್ರಾಣ ಬಿಡುವವರೇ ಹೆಚ್ಚು. ದಿನಕ್ಕೆ ಒಂದು ಸಲ ಆದರೂ ಗೋಲ್ ಗಪ್ಪ ತಿನ್ನದೇವಿರುವವರು ಸಿಗುವುದಕ್ಕೆ ಸಾಧ್ಯವೇ ಇಲ್ಲ. ಇದೀಗ ಗೋಲ್ ಗಪ್ಪ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಎದುರಾಗಿದೆ. ಗೋಲ್ ಗಪ್ಪದಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ಬೆಳಕಿಗೆ ಬಂದಿದೆ. ಆಹಾರ ಇಲಾಖೆಯೇ ಈ ಬಗ್ಗೆ ಮಾಹಿತಿ ನೀಡಿದೆ.
ನಗರದಲ್ಲಿ ಮಾರಾಟವಾಗುವ ಪಾನಿಪೂರಿ ಎಷ್ಟು ಸುರಕ್ಷಿತ ಎಂದು ಕಂಡು ಹಿಡಿಯುವುದಕ್ಕೆ ಆಹಾರ ಇಲಾಖೆ ಅದರ ಮಾದರಿಗಳನ್ನು ಸಂಗ್ರಹ ಮಾಡಿತ್ತು. ಬಳಿಕ ಪರೀಕ್ಷೆಗೆ ಒಳಪಡಿಸಿತ್ತು ವರದಿಯಲ್ಲಿ ಪಾನಿಪೂರಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತೆ ಎಂಬುದನ್ನು ತಿಳಿಸಿದೆ.
ನಗರದ ನಾನಾ ಭಾಗಗಳಲ್ಲಿ ಸೇರಿ ಒಟ್ಟು 243 ಸ್ಯಾಂಪಲ್ ಗಳನ್ನು ಪಡೆಯಲಾಗಿದೆ. ಅದರಲ್ಲಿ 43 ಸ್ಯಾಂಪಲ್ ಗಳಿಂದ ಇದು ದೇಹಕ್ಕೆ ಸುರಕ್ಷಿತವಲ್ಕ ಎಂಬ ವರದಿ ಬಂದಿದೆ. ಪಾನಿಪೂರಿ ಸೇವನೆಯಿಂದ ಹೊಟ್ಟೆ ಉಬ್ಬರ, ಮೋಷನ್ ಆಗದೆ ಇರುವುದು ಜೊತೆಗೆ ಹೊಟ್ಟೆಯ ಕ್ಯಾನ್ಸರ್ ಕೂಡ ಬರಬಹುದು. ಅದರಲ್ಲೂ ಪ್ರತಿದಿನ ಪಾನಿಪೂರಿ ತಿನ್ನುವವರಿಗೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ಆಹಾರ ಇಲಾಖೆಯ ಆಯುಕ್ತ ಶ್ರೀನಿವಾಸ್ ಹೇಳಿದ್ದಾರೆ.
ಈಗಾಗಲೇ ಗೋಬಿ, ಕಬಾಬ್ ಗೆ ಬಳಸುವ ಕಲರ್ ಬ್ಯಾನ್ ಮಾಡಲಾಗಿದೆ. ಈಗ ಪಾನಿಪೂರಿಯೂ ಅನಾರೋಗ್ಯಕ್ಕೆ ಕಾರಣ ಎನ್ನಲಾಗುತ್ತಿದೆ. ಇವರು ಬಳಸುವ ಸಾಸ್, ಮೀಠಾ, ಖಾರದ ಪುಡಿಯಿಂದ ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಹೊರಗಡೆಯ ಪಾನಿಪೂರಿ ತಿನ್ನುವುದು ತುಂಬಾನೇ ಅಪಾಯಕಾರಿ ಎನ್ನಲಾಗಿದೆ.