ಚಿತ್ರದುರ್ಗ: ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಆರೋಪದ ಮೇಲೆ, ಚಿತ್ರದುರ್ಗದಿಂದ ಪ್ಲ್ಯಾನ್ ಮಾಡಿ, ಬೆಂಗಳೂರಿಗೆ ಎತ್ತಾಕಿಕೊಂಡು ಬಂದ ದರ್ಶನ್ ಗ್ಯಾಂಗ್, ಆತನನ್ನು ಸಾಯುವಂತೆ ಹೊಡೆದಿದ್ದಾರೆ. ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. ಹೆಣ ಸುಮನಹಳ್ಳಿ ಬಳಿ ಸಿಕ್ಕ ಮೇಲೆ ತನಿಖೆಯಲ್ಲಿ ಒಬ್ಬೊಬ್ಬರೇ ಸಿಕ್ಕಿ ಬಿದ್ದು, ಈಗ ಆ ಮರ್ಡರ್ ಹಿಂದೆ ತಗಲಾಕಿಕೊಂಡವರು ಬರೋಬ್ಬರಿ ಹದಿನೇಳು ಮಂದಿ.
ಮನೆಗೆ ಇದ್ದವನೇ ಒಬ್ಬ ಮಗ.ಸೊಸೆ ಬೇರೆ ಗರ್ಭಿಣಿ. ಮನೆ ನಡೆಸುವುದು ಹೇಗೆ, ಸೊಸೆಯ ಮುಂದಿನ ಬದುಕು ಹೇಗೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಸಹಾಯಕ್ಕಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಇದರ ಬೆನ್ನಲ್ಲೇ ಧ್ರುವ ಸರ್ಜಾ ಫ್ಯಾನ್ಸ್ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವಾನ, ನೀಡಿ ಧನಸಹಾಯ ಮಾಡಿದ್ದಾರೆ.
ಧ್ರುವ ಸರ್ಜಾ ಅಭಿಮಾನಿ ಸಂಘದ ಅಧ್ಯಕ್ಷ ಮಹಾನ್ ಮತ್ತು ತಂಡದವರು ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಹೋಗಿದ್ದು, ಧ್ರುವ ಸರ್ಜಾ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಕೊಟ್ಟಿದ್ದಾರೆ. ಈ ವೇಳೆ ಧ್ರುವ ಸರ್ಜಾ, ಮೃತ ರೇಣುಕಾಸ್ವಾಮಿ ಕುಟುಂಬಸ್ಥರ ಜೊತೆಗೆ ಮಾತನಾಡಿದ್ದಾರೆ. ನಿಮ್ಮ ಜೊತೆಗೆ ನಾವಿದ್ದೇವೆ. ಏನೇ ಸಹಾಯ ಬೇಕಾದರೂ ನಮ್ಮನ್ನು ಕೇಳಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಬಳಿಕ ಅಭಿಮಾನಿ ಸಂಘದವರು ಹಣ ನೀಡಿ, ಸಾಂತ್ವನ ಹೇಳಿ ಬಂದಿದ್ದಾರೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹದಿನೇಳು ಜನ ಅರೆಸ್ಟ್ ಆಗಿದ್ದು, ಹದಿಮೂರು ಜನ ಪರಪ್ಒನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನುಳಿದ ನಾಲ್ಕು ಜನರನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ದರ್ಶನ್ ಅವರನ್ನು ಮುಂದಿನ ವಿಚಾರಣೆಯ ಬಳಿಕ ತುಮಕೂರು ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.