ಚಿತ್ರದುರ್ಗ, (ನ.15) : ನಗರದ ಸ್ಟೇಡಿಯಂ ರಸ್ತೆಯಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯರ ಕೊಠಡಿಯಲ್ಲಿ ನವೆಂಬರ್ 4 ರಂದು ನಡೆದಿದ್ದ ಎರಡು ಕಂಪ್ಯೂಟರ್ ಮಾನಿಟರ್, ಎರಡು ಮೌಸ್, ಎರಡು ಕೀಪ್ಯಾಡ್, 2 ಸ್ಪೀಕರ್ ಮತ್ತು 1 ಯು.ಪಿ.ಎಸ್.ಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಬಡಾವಣೆ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯಾದ ಐಟಿಐ ವಿದ್ಯಾರ್ಥಿಯನ್ನು ನನ್ನು ಬಂಧಿಸಿದ್ದಾರೆ.
ನವೆಂಬರ್ 4 ರಂದು ಸಂಜೆ ಸಮಯದಲ್ಲಿ ಬೀಗ ಮುರಿದು ಒಳನುಗ್ಗಿ ಕೊಠಡಿಯಲ್ಲಿದ್ದ ಕಂಪ್ಯೂಟರ್ ಪರಿಕರಗಳನ್ನು ಕಳುವು ಮಾಡಿರುತ್ತಾನೆ. ಈ ವಿಚಾರವಾಗಿ ನವಂಬರ್ 5 ರಂದು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ನವೆಂಬರ್ 15 ರಂದು ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ 37,000/- ರೂಪಾಯಿ ಮೌಲ್ಯದ ಎರಡು ಮಾನಿಟರ್ ಗಳು, ಎರಡು ಕೀ ಬೋರ್ಡ್ ಗಳು, ಒಂದು ಮೌಸ್, ಒಂದು ಯುಪಿಎಸ್ ನ್ನು ವಶಪಡಿಸಿಕೊಂಡಿದ್ದಾರೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸರನ್ನು
ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.