Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾಮಾಜಿಕ ಅನಿಷ್ಠ ಪದ್ಧತಿಗಳು ನಡೆಯದಂತೆ ಜಿಲ್ಲಾಡಳಿತ ಕ್ರಮವಹಿಸಲಿ : ಕಾಡುಗೊಲ್ಲ ಮಹಿಳಾ ವೇದಿಕೆ ಒತ್ತಾಯ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜೂ.25 :  ಕಾಡುಗೊಲ್ಲ ಬುಡಕಟ್ಟು ಹಟ್ಟಿಗಳಲ್ಲಿ ದೇವರು, ಧರ್ಮ, ನಂಬಿಕೆಗಳ ಹೆಸರಿನಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನು ಅಸಹಜವಾಗಿ ನಡೆಸಿಕೊಳ್ಳುತ್ತಿರುವುದು ಇಂದಿಗೂ ಮುಂದುವರಿದಿದೆ ಇಂತಹ ಅನಾಹುತಗಳು ಮತ್ತು ಮಹಿಳಾ ಶೋಷಣೆಗಳು ಕಾಡುಗೊಲ್ಲರ ಹಟ್ಟಿಗಳಲ್ಲಿ ಮಹಿಳೆಯರು, ಮಕ್ಕಳ ಮೇಲೆ ನಡೆಯದಂತೆ ಜಿಲ್ಲಾಡಳಿತ ಆಡಳಿತಾತ್ಮಕ ಮತ್ತು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಗಣೆ ಟ್ರಸ್ಟ್ ಹಾಗೂ ಕಾಡು ಗೊಲ್ಲ ಮಹಿಳಾ ವೇದಿಕೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಕಾಡುಗೊಲ್ಲ ಬುಡಕಟ್ಟು ಹಟ್ಟಿಗಳಲ್ಲಿ ದೇವರು, ಧರ್ಮ, ನಂಬಿಕೆಗಳ ಹೆಸರಿನಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನು ಅಸಹಜವಾಗಿ ನಡೆಸಿಕೊಳ್ಳುತ್ತಿರುವುದು ಇಂದಿಗೂ ಮುಂದುವರಿದಿದೆ. ಮಹಿಳೆಯರು ಮತ್ತು ಮಕ್ಕಳಲ್ಲಿ ಸಹಜ ಜೈವಿಕ ಪ್ರಕ್ರಿಯೆಗಳು ಉಂಟಾದಾಗ ಅಂದರೆ; ಮೈನೆರೆದಾಗ, ಮುಟ್ಟಾದಾಗ ಮತ್ತು ಹೆರಿಗೆಯಾದಾಗ ‘ಹಟ್ಟಿಯ ಹೊರೆಗೆ’ ಬಯಲಿನ ಅಸುರಕ್ಷಿತ ಪ್ರದೇಶದಲ್ಲಿ ಕನಿಷ್ಠ ಸೌಲಭ್ಯಗಳನ್ನೂ ಒದಗಿಸದೆ ಬಿಸಿಲು, ಮಳೆ, ಗಾಳಿಯಲ್ಲಿ ಅವರನ್ನು ಕನಿಷ್ಠ ಮೂರು ದಿನಗಳಿಂದ ತೊಂಭತ್ತು ದಿನಗಳವರೆಗೆ ಹಟ್ಟಿಯ ಆಚೆ ಇಟ್ಟಿರುತ್ತಾರೆ. ಸೂಕ್ತ ರಕ್ಷಣೆಯೂ ಇಲ್ಲದ ಬಯಲು ಪ್ರದೇಶದಲ್ಲಿ ಹೀಗೆ ಇಡಲಾಗುತ್ತಿರುವುದರಿಂದ ಈ ಸಾಮಾಜಿಕ ಅನಿಷ್ಠ ಪದ್ಧತಿಗಳಿಂದ ಕಾಡುಗೊಲ್ಲ ಮಹಿಳೆಯರನ್ನು ಮತ್ತು ಮಕ್ಕಳನ್ನು ಪಾರು ಮಾಡಬೇಕಾಗಿದೆ.

ಇಂತಹ ವಿಲಕ್ಷಣವಾದ ನಂಬಿಕೆಗಳಿಂದ ಮಹಿಳೆಯರು ಮಕ್ಕಳ ಅಸಹಜವಾದ ಸಾವುಗಳು ಉಂಟಾಗುತ್ತಿವೆ. ಮಹಿಳೆಯರು ಗರ್ಭಪಾತಕ್ಕೂ ಒಳಗಾಗುತ್ತಿದ್ದಾರೆ. ಗರ್ಭಕೋಶವನ್ನು ತೆಗೆಸಿಕೊಳ್ಳುತ್ತಿರುವ ಒತ್ತಡಕ್ಕೂ ಒಳಗಾಗುತ್ತಿದ್ದಾರೆ. ಇಂತಹ ಅವಸ್ತವಿಕವಾದ ನಂಬಿಕೆಗಳನ್ನು ದೇವರು ಧರ್ಮಗಳ ಹೆಸರಿನಲ್ಲಿ ಹಟ್ಟಿಯ ಗೌಡರು, ಪೂಜಾರರು, ಯಜಮಾನರು ಮುಂದುವರಿಸಿಕೊಂಡು ಬಲವಂತವಾಗಿ ಭಯ ಹುಟ್ಟಿಸುವ ಮೂಲಕ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಬಲವಂತವಾದ ಇಂತಹ ನಂಬಿಕೆಗಳನ್ನು ಮಹಿಳೆಯರು ವಿರೋಧಿಸಲಾಗದ ಅಸಹಾಯಕತೆಯಲ್ಲಿ ಆತಂಕದಲ್ಲೇ ಹಟ್ಟಿಗಳಲ್ಲಿ ಬದುಕುತ್ತಿರುವರು. ಅವರು ಶಿಕ್ಷಣ, ಉದ್ಯೋಗ, ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಬಾಲ್ಯ ವಿವಾದಂತಹ ದುರಂತಕ್ಕೆ ಮಕ್ಕಳು ಒಳಗಾಗಿ ಅಸಹಜವಾಗಿ ಸಾವುಗಳಾಗುತ್ತಿವೆ. ಹೆರಿಗೆಯ ಸಮಯದಲ್ಲಿ ರಕ್ತಸ್ರಾವಗಳಾಗಿ ತಾಯಿ ಮಗುವೂ ಕೂಡ ಸಾವನ್ನಪ್ಪಿರುವ ದುರ್ಘಟನೆಗಳು ಅಲ್ಲಲ್ಲಿ ಕೇಳಿಬರುತ್ತಿವೆ ದಯವಿಟ್ಟು ಇಂತಹ ಅನಾಹುತಗಳು ಮತ್ತು ಮಹಿಳಾ ಶೋಷಣೆಗಳು ಕಾಡುಗೊಲ್ಲರ ಹಟ್ಟಿಗಳಲ್ಲಿ ಮಹಿಳೆಯರು, ಮಕ್ಕಳ ಮೇಲೆ ನಡೆಯದಂತೆ ಜಿಲ್ಲಾಡಳಿತ ಆಡಳಿತಾತ್ಮಕ ಮತ್ತು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು.

ಜಿಲ್ಲಾ ಆಡಳಿತದ ಇಲಾಖೆಗಳಾದ ಕಂದಾಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ,ಆರೋಗ್ಯ ಇಲಾಖೆ, ಜಿಲ್ಲಾ ರಕ್ಷಣಾ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಪಂಚಾಯತ್ ರಾಜ್ ಇಲಾಖೆ ಇವುಗಳ ಸಹಯೋಗದಲ್ಲಿ ಕಾನೂನು ಅರಿವು ಮತ್ತು ನೆರವು ಒದಗಿಸಲು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ನ್ಯಾಯಾವಾದಿಗಳಾದ ಶಿವುಯಾದವ್, ಕುವೆಂಪು ವಿವಿಧ ಅಧ್ಯಾಪಕರಾದ ಡಾ.ಪ್ರೇಮ, ರಾಮಣ್ಣ ಕೂಣಿಕೆರೆ, ತುಮಕೂರು ಕಾಡುಗೊಲ್ಲರ ಸಂಘದ ಖಂಜಾಚಿ ಶ್ರೀಮತಿ ಸುನಂದ ಗಣಿ ಟ್ರಸ್ಟ್ ನ ಸಂಪತ್ ಕುಮಾರ್, ಕರ್ನಾಟಕ ರಾಜ್ಯ ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಉಜ್ಜಿಜ್ಜಿ ರಾಜಣ್ಣ ಆನ್ನಪೂರ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಚಲಪತಿ ನಿಧನ

  ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 :ನಗರದ ತುರುವನೂರು ರಸ್ತೆ ನಿವಾಸಿ, ಶಿಕ್ಷಣ ಇಲಾಖೆ ನಿವೃತ್ತ ನೌಕರ ಚಲಪತಿ (66) ಅನಾರೋಗ್ಯದಿಂದ ಶನಿವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ವಿಜಯಕರ್ನಾಟಕ ಚಿತ್ರದುರ್ಗ ಜಿಲ್ಲಾ ಪ್ರಸರಾಂಗ

ಮನು ಕುಲದ ಆಯಸ್ಸನ್ನು ಹೆಚ್ಚಿಸಿದ್ದು ವೈದ್ಯರು: ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ

ಮೈಸೂರು ಸೆ 28 : ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.   ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ

ಈ ಬಾರಿಯ ಬಿಗ್ ಬಾಸ್ ಗೆ ಹೋಗ್ತಿದ್ದಾರೆ ಈ ಸ್ಟಾರ್ ಗಳು : ಕನ್ಫರ್ಮ್ ಸುದ್ದಿ ಇದು..!

ಬೆಂಗಳೂರು : ಬಿಗ್ ಬಾಸ್ ಕನ್ನಡ‌ ಸೀಸನ್ 11ಗೆ ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗೋದು ಯಾರು ಎಂಬ ಕುತೂಹಲ ಇಡೀ ಕರ್ನಾಟಕದ ಜನತೆಗೆ ಇದೆ. ಇಂದು ಸಂಜೆ ಅದಕ್ಕೆ ಕೊಂಚ ತೆರೆ

error: Content is protected !!