ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಆತಂಕ ಸೃಷ್ಟಿ, ಜನರಿಗೆ ಎಚ್ಚರಿಕೆ ನೀಡಿದ ಇಲಾಖೆ..!

1 Min Read

 

ಬೆಂಗಳೂರು: ಮಳೆಗಾಲ ಶುರುವಾಯ್ತು ಎಂದರೆ ಹಲವು ರೀತಿಯ ಕಾಯಿಲೆಗಳು ಹಿಂದೆಯೇ ಹುಡುಕಿಕೊಂಡು ಬರುತ್ತವೆ. ಅದರಲ್ಲೂ ನೀರು, ಚರಂಡಿಗಳಲ್ಲಿ ಅಡಗಿದ್ದ ಸೊಳ್ಳೆಗಳಿಂದಾಗಿ ಡೆಂಗ್ಯೂ, ಮಲೇರಿಯಾ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಜನ ಕೂಡ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಜಾಸ್ತಿಯಾಗುತ್ತಾ ಇದಾವೆ. ಕಳೆದ ಮೂರು ವಾರದಲ್ಲಿ ಡೆಂಗ್ಯೂ ಪ್ರಕರಣ 1,036ಕ್ಕೆ ತಲುಪಿವೆ. ಕಳೆದ ಆರು ತಿಂಗಳಿನಿಂದ ನಗರದಲ್ಲಿ ಡೆಂಗ್ಯೂ 2,447 ಪ್ರಕರಣ್ಳು ವರದಿಯಾಗಿವೆ. ಕಳೆದ ವರ್ಷ ಜೂನ್ ಅಂಕಿ ಅಂಶಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಎರಡು ಪಟ್ಟು ಜಾಸ್ತಿಯಾಗಿದೆ. ಇದು ಜನರಲ್ಲೂ ಆತಂಕ ಸೃಷ್ಟಿಸಿದೆ.

ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೂ ಡೆಂಗ್ಯೂ ಇರುವುದು ದೃಢಪಟ್ಟಿದೆ. ಫ್ರೀಡಂ ಪಾರ್ಕ್ ನಲ್ಲಿ ಕಾರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಇವರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು. ಅಲ್ಲಿಯೇ ಸೊಳ್ಳೆ ಕಚ್ಚಿರಬಹುದೆಂಬ ಅನುಮಾನ ಮೂಡಿದೆ. ಈಗಾಗಲೇ ಬೆಂಗಳೂರಿ‌ಲ್ಲಿ ಬಿಬಿಎಂಪಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಂಡಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವುದಕ್ಕೆ ಸ್ಪ್ರೇ ಮಾಡಲಾಗುತ್ತಿದೆ‌. ಫಾಗಿಂಗ್ ಕೂಡ ಮಾಡುತ್ತಿದೆ.

ಜನರು ಕೂಡ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು, ಡೆಂಗ್ಯೂ ಬಾರದಂತೆ ನೋಡಿಕೊಳ್ಳಲು ಸ್ವಚ್ಛತೆಯನ್ನು ಕಾಪಾಡಬೇಕಾಗಿದೆ. ನೀರು ನಿಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ. ಅಕ್ಕ ಪಕ್ಕ ಹಳೆ ನೀರು ನಿಂತು, ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರವಹಿಸಬೇಕಾಗುತ್ತದೆ. ಬಾಗಿಲು, ಕಿಟಕಿಗಳನ್ನು ಮುಚ್ಚುವುದು ಅಥವಾ ಪರದೆ ಬಳಕೆ ಮಾಡಿಕೊಳ್ಳುವುದು. ಹೆಚ್ಚು ರೋಗ ನಿರೋಧಕ ಆಹಾರವನ್ನು ಸೇವಿಸುವುದು. ಸೊಳ್ಳೆಗಳು ವಾಸಕ್ಕೆ ಅವಕಾಶ ಮಾಡಿಕೊಡದೆ ಇರುವುದು. ಹೀಗೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *