Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪವಿತ್ರಾ ಗೌಡ ಮನೆ ತೆಗೆದುಕೊಳ್ಳಲು 2 ಕೋಟಿ ಕೊಟ್ಟಿರುವ ಮೃತ ನಿರ್ಮಾಪಕ ಸೌಂದರ್ಯ ಜಗದೀಶ್..!

Facebook
Twitter
Telegram
WhatsApp

 

ಬೆಂಗಳೂರು: ಅತ್ತ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್.. ಇತ್ತ ರೇಣುಕಾಸ್ವಾಮಿ ಕೊಲೆ ಕೇಸ್. ಎರಡು ತನಿಖೆಯ ಹಂತದಲ್ಲಿಯೇ ಇದೆ. ಇದೀಗ ಸೌಂದರ್ಯ ಜಗದೀಶ್ ಹಾಗೂ ಪವಿತ್ರಾ ಗೌಡ ನಡುವೆ ಕೋಟಿ ಕೋಟಿ ವ್ಯವಹಾರವಾಗಿರುವುದು ತಿಳಿದು ಬಂದಿದೆ. ಪವಿತ್ರಾ ಗೌಡ ಮನೆ ತೆಗೆದುಕೊಳ್ಳುವುದಕ್ಕೆ ಸೌಂದರ್ಯ ಜಗದೀಶ್ ಎರಡು ಕೋಟಿ ಹಣ ನೀಡಿದ್ದಾರೆ. ಹಣ ಕೊಟ್ಟ ಮರುದಿನವೇ ಪವಿತ್ರಾ ಗೌಡ ರಾಜರಾಜೇಶ್ವರಿ ನಗರದಲ್ಲಿ ಮನೆ ಖರೀದಿ ಮಾಡಿದ್ದಾರೆ.

2017 ಹಾಗೂ 2018ರಲ್ಲಿ ಹಣದ ವ್ಯವಹಾರ ನಡೆದಿದೆ. ಮೊದಲ ಬಾರಿಗೆ 2017ರ ನವೆಂಬರ್ 13ರಂದು ಸೌಂದರ್ಯ ಜಗದೀಶ್ ಅಕೌಂಟಿನಿಂದ ಪವಿತ್ರಾ ಗೌಡಗೆ 1 ಕೋಟಿ ರೂಪಾಯಿ ಹಣ ರವಾನೆಯಾಗಿದೆ. ಬಳಿಕ 2018ರ ಜನವರಿ 23ರಂದು ಮತ್ತೆ ಒಂದು ಕೋಟಿ ಟ್ರಾನ್ಸ್ ಫರ್ ಆಗಿದೆ. ಜನವರಿ 24ರಂದು ಅಂದರೆ ಹಣ ರವಾನೆಯಾದ ಮಾರನೇ ದಿನವೇ ರಾಜರಾಜೇಶ್ವರಿ ನಗರದಲ್ಲಿ ಪವಿತ್ರಾ ಗೌಡ ಮನೆ ತೆಗೆದುಕೊಂಡಿದ್ದಾರೆ.

ಸೌಂದರ್ಯ ಜಗದೀಶ್ ಸಿನಿಮಾ ನಿರ್ಮಾಣದ ಜೊತೆಗೆ ಉದ್ಯಮಿಯು ಆಗಿದ್ದರು. ಬೆಂಗಳೂರಿನ ಯಶವಂತಪುರದಲ್ಲಿ ಜೆಟ್ ಲ್ಯಾಗ್ ಪಬ್ ಮಾಲೀಕರು ಕೂಡ ಆಗಿದ್ದರು. ಇತ್ತಿಚೆಗೆ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾರೆ. ಸಾಲದ ಸುಳಿಗೆ ಸಿಲುಕಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತಿದೆ. ಪಾಲುದಾರರಿಂದ ಮೋಸವಾಗಿದೆ ಎಂದು ಸೌಂದರ್ಯ ಜಗದೀಶ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪವಿತ್ರಾ ಗೌಡಗೆ ಎರಡು ಕೋಟಿ ಹಣ ಕೊಟ್ಟಿರುವುದನ್ನು ಪಾಲುದಾರರಾದ ಸುರೇಶ್ ಪೊಲೀಸರಿಗೆ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಎಂ ಬದಲಾವಣೆ ವಿಚಾರ : ಸ್ವಾಮೀಜಿಗಳು ಹೇಳಿದಾಕ್ಷಣ ಬದಲಾಗದು ಎಂದ ವಚನಾನಂದ ಶ್ರೀ

  ಚಿತ್ರದುರ್ಗ: ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟು ಕೊಡಿ ಮಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಉತ್ತಮ ಸಹಕಾರವಿದೆ.

ದೇಶ ಪ್ರಗತಿ ಹೊಂದಿರುವುದು ಕಾಯಕ ಜೀವಿಗಳಿಂದಲೇ ಹೊರೆತು ರಾಜಕಾರಣಿಗಳಿಂದಲ್ಲ : ಬಸವಪ್ರಭು ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಜೂನ್.30 : ನಮ್ಮ ದೇಶ ಪ್ರಗತಿಯನ್ನು ಹೊಂದಿರುವುದು ಕಾಯಕ ಜೀವಿಗಳಿಂದಲೇ ಹೊರೆತು ರಾಜಕಾರಣಿಗಳಿಂದ ಅಲ್ಲ ಎಂದು

ಚಿತ್ರದುರ್ಗದಲ್ಲಿ ಜಿಲ್ಲಾ ಮಟ್ಟದ ಗಾಣಿಗ ಸಮುದಾಯದ ವಧು-ವರರ ಸಮಾವೇಶ | ಕಾಯಕವನ್ನು ನಂಬಿದವರು ಗಾಣಿಗ ಸಮಾಜದವರು : ಡಾ. ಜಯಬಸವಕುಮಾರ ಸ್ವಾಮೀಜಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಜೂನ್.30 : ವ್ಯಕ್ತಿಯನ್ನು ಆತನ ವ್ಯಕಿತ್ವದಿಂದ ಗುರುತಿಸಬೇಕೇ ವಿನಹಃ ಜಾತಿ, ಹಣದಿಂದ ಅಲ್ಲ, ಪ್ರತಿಭೆಗಳು ನಮ್ಮ

error: Content is protected !!