ಬೆಂಗಳೂರು: ಜೆಡಿಎಸ್ ನಲ್ಲಿ ಕುಟುಂಬ ರಾಜಕಾರಣವಿದೆ ಎಂಬುದು ಮೊದಲಿನಿಂದಲೂ ಇರುವ ಆರೋಪ. ಈಗ ಪರಿಷತ್ ಚುನಾವಣೆಗೂ ಕುಟುಂಬದ ಮತ್ತೊಂದು ಕುಡಿಯನ್ನೇ ಕರೆತರಬೇಕೆಂಬ ಫ್ಲ್ಯಾನ್ ಗೌಡರ ಫ್ಯಾಮಿಲಿಯಲ್ಲಿದೆ ಎನ್ನಲಾಗಿದೆ. ಹೀಗಾಗಿ ಕುಟುಂಬ ರಾಜಕಾರಣವನ್ನೇ ಮಾಡ್ತಾರೆ ಅನ್ನೋ ಆರೋಪ ದೊಡ್ಡಗೌಡರ ಮೇಲಿದೆ. ಇದಕ್ಕೆ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮದು ಕುಟುಂಬ ರಾಜಕಾರಣ ಅಂತಾರೆ. ಯಾಕೆ ಕುಟುಂಬದವರು ರಾಜಕಾರಣಕ್ಕೆ ಬರಬಾರದು ಅಂತ ಏನಾದ್ರು ಇದೆಯಾ..? ವೈದ್ಯರ ಮಕ್ಕಳು ವೈದ್ಯರಾಗ್ತಾರೆ. ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗ್ತಾರೆ. ನಮ್ಮ ಕುಟುಂಬದಲ್ಲಿ 14 ಜನ ಮಕ್ಕಳು ವೈದ್ಯರು ಆಗಿದ್ದಾರೆ. ರಾಜಕಾರದಲ್ಲಿರುವವರ ಮಕ್ಕಳು ರಾಜಕೀಯಕ್ಕೆ ಬಂದಿದ್ದಾರೆ. ಕುಟುಂಬ ರಾಜಕಾರಣವೆಂದು ವೈಭವೀಕರಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಕುಟುಂಬ ರಾಜಕಾರಣ ಬಿಟ್ಟು ದೇಶದ ಬಗ್ಗೆ ಯೋಚಿಸಿ. ನಮ್ಮ ಪಕ್ಷ ನಿಭಾಯಿಸುತ್ತೇವೆಂದರೆ ಬಿಟ್ಟುಕೊಡುತ್ತೇವೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನ ಬಿಟ್ಟುಕೊಡಲು ದೊಡ್ಡಗೌಡರೇ ಸಿದ್ಧವಿದ್ದಾರೆ. ಇಲ್ಲಿ ಭಿಕ್ಷೆ ಬೇಡಿ ರಾಜಕೀಯ ಕಟ್ಟುವಂತ ಸ್ಥಿತಿ ನಿರ್ಮಾಣವಾಗಿ ಹೋಗಿದೆ. ನನ್ನನ್ನು ಪದೇ ಪದೇ ಕೆಣಕಬೇಡಿ. ನಾವೂ ಸರ್ಕಾರದ ಹಾಗೂ ಜನರ ಸಂಪತ್ತನ್ನೇನೂ ಲೂಟಿ ಹೊಡೆದಿಲ್ಲ. ಕಾರ್ಪೋರೆಟ್ ಕಂಪನಿಗಳಿಗೆ ಆಸ್ತಿಯನ್ನು ಮಾರಾಟ ಮಾಡಿಲ್ಲ ಎಂದು ಗರಂ ಆಗಿ ಉತ್ತರಿಸಿದ್ದಾರೆ.